Advertisement

ಲಾಕ್‌ಡೌನ್‌ ತೆರವಿಗೆ ಸಿಗದ ಸ್ಪಂದನೆ

06:28 AM Jun 09, 2020 | Lakshmi GovindaRaj |

ಬೆಂಗಳೂರು: ದರ್ಶನ ನೀಡಿದ ದೇವರುಗಳು; ಆದರೆ ದರ್ಶನಕ್ಕೇ ಬಾರದ ಭಕ್ತರು. ದೇವಸ್ಥಾನಗಳಲ್ಲಿ ತೀರ್ಥ-ಪ್ರಸಾದದ ಜಾಗದಲ್ಲಿ ಸ್ಯಾನಿಟೈಸರ್‌, ಎಂದಿನಂತೆ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾದ ಮಾಲ್‌ ಗಳು, ನಿರಂತರ ಮನೆ  ಆಹಾರದಿಂದ ಬೇಸತ್ತು ಹೋಟೆಲ್‌ ರುಚಿ ಸವಿದ ಜನ, ಮೊದಲ ದಿನ ನೀರಸ ಪ್ರತಿಕ್ರಿಯೆ, “ಬಂಧ ಮುಕ್ತ’ವಾದರೂ ಕಳೆಗಟ್ಟದ ಹಾಟ್‌ಸ್ಪಾಟ್‌ಗಳು…! – ಲಾಕ್‌ಡೌನ್‌ ಸಂಪೂರ್ಣ ತೆರವಾದ ಮೊದಲ ದಿನ ನಗರದಲ್ಲಿ ಕಂಡುಬಂದ ದೃಶ್ಯಗಳಿವು. ಸುಮಾರು ಎರಡೂವರೆ ತಿಂಗಳ ನಂತರ ಬಹುತೇಕ ಎಲ್ಲ ಪ್ರಕಾರದ ವ್ಯಾಪಾರ-ವಾಣಿಜ್ಯ ಮಳಿಗೆಗಳು ತೆರೆದಿವೆ.

Advertisement

ಗ್ರಾಹಕರ ಸ್ವಾಗತಕ್ಕಾಗಿ ಶುಚಿತ್ವ, ಸುರಕ್ಷತೆ ಯೊಂದಿಗೆ ಕಾಯುತ್ತಿವೆ. ಆದರೆ, ವ್ಯಾಪಾರೋದ್ಯಮಿಗಳಿಗೆ  ಸೋಮವಾರ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ. ಪಾರ್ಸೆಲ್‌ಗೆ ಸೀಮಿತವಾಗಿದ್ದ ಹೋಟೆಲ್‌, ಉಪಹಾರ ದರ್ಶಿನಿ, ರೆಸ್ಟೋರೆಂಟ್‌ಗಳಲ್ಲಿ ಪೂರ್ಣ ಪ್ರಮಾಣದ ಸೇವೆ ಆರಂಭಗೊಂಡಿತು. ಟೇಬಲ್‌ ಹಾಗೂ ಕುರ್ಚಿಗಳ ನಡುವೆ ಅಂತರ ಕಾಯ್ದುಕೊಳ್ಳಲಾಗಿತ್ತು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಕಂಡುಬಂತು. ಮುಖಗವಸು, ಕೈಗವಸು ಧರಿಸಿಯೇ ಕೆಲಸ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಹೋಟೆಲ್‌ಪ್ರತಿ ಗ್ರಾಹಕರ ಥರ್ಮಲ್‌ ಮಾಡಿ ಒಳಗೆ  ಬಿಡಲಾಗುತ್ತಿತ್ತು.

ಸ್ವಸಹಾಯ ಪದ್ಧತಿಯ ಉಪಹಾರ ದರ್ಶಿನಿಗಳಲ್ಲಿ ಸ್ಕ್ರೀನಿಂಗ್‌ ಕಾಣಲಿಲ್ಲ. ಕೆಲಸದ ದಿನ ಹಾಗೂ ಆತಂಕದಿಂದ ಗ್ರಾಹಕರು ಹೋಟೆಲ್‌ಗ‌ಳತ್ತ ಮುಖಮಾಡಲಿಲ್ಲ. ಕೆಲ ಹೋಟೆಲ್‌ಗ‌ಳ ಫ್ಯಾಮಿಲಿ ಕೊಠಡಿಗಳು,  ಹವಾನಿಯಂತ್ರಿತ ಕೊಠಡಿ ಬಾಗಿಲು ತೆರೆದಿರಲಿಲ್ಲ. ಬಹುತೇಕ ಹೋಟೆಲ್‌ಗ‌ಳಲ್ಲಿ ಟೇಬಲ್‌ ಇಡಲಾ  ಗುತ್ತಿತ್ತು. ಹೋಟೆಲ್‌ಗ‌ಳಲ್ಲಿ ಊಟ ಮಾಡುವವರ ಸಂಖ್ಯೆಗಿಂತ ಉಪಹಾರ ದರ್ಶಿನಿಗಳಲ್ಲಿ ನಿಂತು ಊಟ ಮಾಡುವವರ ಸಂಖ್ಯೆ ತುಸು  ಹೆಚ್ಚಿತ್ತು. ನಗರದ ಹಾಟ್‌ಸ್ಪಾಟ್‌ಗಳಾದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಇಂದಿರಾನಗರ, ಕೋರಮಂಗಲ  ದಲ್ಲಿನ ರೆಸ್ಟೋರೆಂಟ್‌ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಅಲ್ಲದೆ, ಮಲ್ಲೇಶ್ವರ, ರಾಜಾಜಿನಗರ,  ಯಶವಂತಪುರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಬೆರಳೆ  ಣಿಕೆ ಯಷ್ಟು ಮಾತ್ರ ಗ್ರಾಹಕರು ಕಂಡುಬಂ ದರು. ಅದೇ ರೀತಿ, ಮಾಲ್‌ಗ‌ಳಲ್ಲಿ ಕೂಡ ಜನದಟ್ಟಣೆ ತುಂಬಾ ವಿರಳವಾಗಿತ್ತು. ಸದಾ  ಗಿಜಿಗುಡುತ್ತಿದ್ದ ಮಂತ್ರಿ ಮಾಲ್‌, ಇಟಿಎ ಮಾಲ್‌, ಗೋಪಾಲನ್‌ ಮಾಲ್‌, ಪೋರಂ ಮಾಲ್‌, ಸಿಗ್ಮಾ, ಸಿಟಿ ಸೆಂಟರ್‌, ಫಿನಿಕ್ಸ್‌ ಮಾಲ್‌ ಸೇರಿದಂತೆ ನಗರದ ಹಲವು ದೈತ್ಯ ಮಾಲ್‌ಗ‌ಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಗ್ರಾಹಕರು ಕಾಣಸಿಗುತ್ತಿದ್ದರು. ದಿನಗಳೆದಂತೆ ಚೇತರಿಕೆ ಕಾಣಬಹುದು ಎಂದು ಮಾಲ್‌ಗ‌ಳ ಮಾಲೀಕರು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಪ್ರಮುಖ ಮಾಲ್‌ಗ‌ಳ ಪೈಕಿ ಡಾ. ರಾಜ್‌ಕುಮಾರ್‌ ರಸ್ತೆಯ ಒರಾಯನ್‌ ಮಾಲ್‌ ಸೋಮವಾರ ತೆರೆಯಲಿಲ್ಲ. ಜೂ. 10ರ  ಬಳಿಕ ಗ್ರಾಹಕರು ಮಾಲ್‌ಗೆ ಬರುವಂತೆ ಗೇಟ್‌ಗೆ ಫ‌ಲಕ ಹಾಕಲಾಗಿತ್ತು.

ದೇವರು “ಫ್ರೀ’; ‌ಭಕ್ತರು”ಬ್ಯುಸಿ’!: ಧಾರ್ಮಿಕ ಸ್ಥಳಗಳಲ್ಲಿ ಕೂಡ ಜನ ಕಾಣಲಿಲ್ಲ. ನಿತ್ಯದ ಕೆಲಸಗಳಲ್ಲಿ “ಬ್ಯುಸಿ’ ಆಗಿದ್ದರು. ಹಾಗಾಗಿ, ಎರಡೂವರೆ ಂಗಳ ನಂತರ ದರ್ಶನ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಜನರಿರಲಿಲ್ಲ. ಸಾಮಾನ್ಯವಾಗಿ  ನಗರದಲ್ಲಿ ಶುಕ್ರವಾರ ಮತ್ತು ವಾರ ದೇವಾಲಯಗಳಿಗೆ ಭಕ್ತರ ದಂಡು ಹೆಚ್ಚು. ಸೋಮವಾರ ಕೆಲಸದ ದಿನ, 65 ವರ್ಷ ಮೇಲ್ಪಟ್ಟವರಿಗೆ ಮತ್ತು 10 ವರ್ಷದ ಒಳಗಿನ ಮಕ್ಕಳಿಗೆ ವಿಧಿಸಿದ ನಿರ್ಬಂಧ, ಮೊದಲ ದಿನವೇ ಹೆಚ್ಚು ಜನ  ಮುಗಿಬೀಳಬಹುದು. ಇದ ರಿಂದ ಜನದಟ್ಟಣೆ ಉಂಟಾಗಬಹುದು ಎಂಬ ಸ್ವಯಂ ನಿರ್ಬಂ ಧಗಳೆಲ್ಲವೂ ನೀರಸ ಪ್ರತಿಕ್ರಿಯೆಗೆ ಕಾರಣಗಳಾಗಿವೆ ಎಂದು ವಿವಿಧ ದೇವಾಲಯಗಳ ಅರ್ಚಕರು ಅಭಿಪ್ರಾಯಪಟ್ಟರು.

Advertisement

ಈ ಮಧ್ಯೆ ನಗರದ ಎಲ್ಲ ದೇವಾಲಯಗಳಲ್ಲಿ ತೀರ್ಥ ಪ್ರಸಾದ ಇರಲಿಲ್ಲ. ಜತೆಗೆ ಭಕ್ತರು ದೇವರಿಗೆ ಅರ್ಪಿಸಲು ಹೂವು ಹಣ್ಣನ್ನು ತರುತ್ತಿದ್ದಾರೆ. ಪ್ರವೇಶ ದ್ವಾರದಲ್ಲೇ ಅವುಗಳಿಗೆ ಬ್ರೇಕ್‌ ಬೀಳುತ್ತಿತ್ತು. ಯಾಕೆಂದರೆ, ದೇವರ ದರ್ಶನ ಮತ್ತು ಮಂಗಳಾರತಿಗೆ ಮಾತ್ರ  ಅವಕಾಶ ಇತ್ತು. ಇನ್ನು ನೂತನವಾಗಿ ಖರೀದಿಸಿರುವ ವಾಹನಗಳ ಪೂಜೆ ಮಾಡಿಸಲು ಭಕ್ತಾದಿಗಳು ಬರುತ್ತಿದ್ದರು. ಆದರೆ, ಯಾವುದೇ ರೀತಿಯ ವಿಶೇಷ ಪೂಜೆಗೆ ಅವಕಾಶವಿರಲಿಲ್ಲ. ಹೀಗಾಗಿ ನಿರಾಸೆಯಿಂದ ಹಿಂತಿರುಗುತ್ತಿರುವುದು  ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಮುಂದೆ ಕಂಡುಬಂತು.

ಇಸ್ಕಾನ್‌; ಸಿಗದ ದೇವರ ದರ್ಶನ: ನಗರದ ಬಹುತೇಕ ದೇವಾಲಯಗಳು ಪ್ರವೇಶ ಮುಕ್ತವಾಗಿದ್ದವು. ಆದರೆ, ಪ್ರತಿಷ್ಠಿತ ಇಸ್ಕಾನ್‌ ದೇವಾಲಯದಲ್ಲಿ ಭಕ್ತರಿಗೆ ದೇವರ ದರ್ಶನ ಭಾಗ್ಯ ಸಿಗಲಿಲ್ಲ. ಇದಕ್ಕಾಗಿ ಇನ್ನೂ ಒಂದು ವಾರ ಕಾಯುವುದು  ಅನಿವಾರ್ಯ ಎನ್ನಲಾಗಿದೆ. ಜೂನ್‌ 15ರಿಂದ ಇಸ್ಕಾನ್‌ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. ಈ ಮಧ್ಯೆ ಸೋಮವಾರ ಕೆಲ ಭಕ್ತರು ದೇವಾಲಯಕ್ಕೆ ಬಂದು, ದೇವರ ದರ್ಶನ ಸಿಗದೆ ವಾಪಸ್‌ ಹೋಗುತ್ತಿದ್ದ  ದೃಶ್ಯ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next