ಅಡಿಲೇಡ್ ಓವಲ್ : ಇಲ್ಲಿ ಗುರುವಾರ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ನಾಯಕ ಪ್ಯಾಟ್ ಕಮಿನ್ಸ್ ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾದ ನಂತರ ಹೊರಗುಳಿದಿದ್ದು, ಸ್ಟೀವ್ ಸ್ಮಿತ್ ಅವರನ್ನು ನಾಯಕನನ್ನಾಗಿ ಬುಧವಾರ ಆಸ್ಟ್ರೇಲಿಯಾ ಹೆಸರಿಸಿದೆ.
ಆಸೀಸ್ ವೇಗಿ ಗಾಯಾಳಾಗಿ ನೋವು ಅನುಭವಿಸಿದ್ದರು. ಮೊದಲ ಟೆಸ್ಟ್‌ನ ಅಂತಿಮ ದಿನದಂದು ಆತಿಥೇಯರು ವೆಸ್ಟ್ ಇಂಡೀಸ್ ವಿರುದ್ಧ 164 ರನ್‌ಗಳಿಂದ ಗೆದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದರು.
33ರ ಹರೆಯದ ಸ್ಕಾಟ್ ಬೋಲ್ಯಾಂಡ್ ಅವರನ್ನು ಕಮಿನ್ಸ್ ಅವರ ಬದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದ್ದು, ಸ್ಮಿತ್ ಅವರನ್ನು ಈಗ ಹಗಲು-ರಾತ್ರಿ ನಡೆಯಲಿರುವ ಟೆಸ್ಟ್ ಪಂದ್ಯದ ನಾಯಕತ್ವ ನೀಡಲಾಗಿದೆ.
“ಅಡಿಲೇಡ್‌ನಲ್ಲಿ ಕಮಿನ್ಸ್ ಚೇತರಿಸಿಕೊಳ್ಳಲು ಪ್ರಾರಂಭಿಸಿದರು ಆದರೆ ನಾಳೆ ಪ್ರಾರಂಭವಾಗುವ ಪಂದ್ಯಕ್ಕೆ ವೇಗದ ಬೌಲರ್‌ಗೆ ಸಂಪೂರ್ಣ ಫಿಟ್ ಆಗಲು ಸಾಕಷ್ಟು ಸಮಯವಿಲ್ಲ ಎಂದು ಆಯ್ಕೆದಾರರು ಪರಿಗಣಿಸಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯಕ್ಕೆ ಕಮಿನ್ಸ್ ಮರಳುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17 ರಂದು ಗಬ್ಬಾದಲ್ಲಿ ಆರಂಭವಾಗಲಿದೆ.
29 ವರ್ಷದ ಕಮ್ಮಿನ್ಸ್ ಅವರು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಅಡಿಲೇಡ್ ಟೆಸ್ಟ್ ಅನ್ನು ಕೋವಿಡ್ ನಿಂದಾಗಿ ತಪ್ಪಿಸಿಕೊಂಡಿದ್ದರು. ಸ್ಮಿತ್ ಅವರು ಆಸ್ಟ್ರೇಲಿಯಾವನ್ನು ಮುನ್ನೆಡೆಸಿ 275 ರನ್‌ಗಳ ಗೆಲುವಿಗೆ ಕಾರಣವಾಗಿದ್ದರು.
ಬೋಲ್ಯಾಂಡ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಕ್ಯಾಮರೂನ್ ಗ್ರೀನ್‌ನೊಂದಿಗೆ ವೇಗದ ದಾಳಿಯನ್ನು ರೂಪಿಸುವ ನಿರೀಕ್ಷೆಯಿದೆ.