Advertisement
ಜೂನ್‌ನಲ್ಲಿ ಗಾಲ್ವಾನ್‌ನಲ್ಲಿ, ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಹಠಾತ್ ದಾಳಿ ನಡೆಸಿದ್ದರು. ಆಗ, 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದು ಭಾರತೀಯ ಯೋಧರು ನೀಡಿದ ತಿರುಗೇಟಿಗೆ 60ಕ್ಕೂ ಹೆಚ್ಚು ಚೀನಾ ಯೋಧರು ಅಸು ನೀಗಿದ್ದರು. ಇತ್ತೀಚೆಗೆ, ಸೆ.8ರಂದುಲಡಾಖ್‌ನ ಪಾಂಗಾಂಗ್ ಸರೋವರದ ಫಿಂಗರ್ 3 ಪ್ರಾಂತ್ಯದಲ್ಲಿ ಚೀನಾ ಸೈನಿಕರು, ಭಾರತಕ್ಕೆ ಸೇರಿದ ಕೆಲ ಪ್ರದೇಶಗಳನ್ನು ಆಕ್ರಮಿಸಲು 2 ಬಾರಿ ಯತ್ನಿಸಿದ್ದಾಗ ಭಾರತೀಯ ಯೋಧರು ಅವರನ್ನು ಹಿಮ್ಮೆಟ್ಟಿಸಿದ್ದರು.
ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ) ಯೋಜನೆಯ ಸುಗಮ ಅನುಷ್ಠಾನಕ್ಕಾಗಿ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತನ್ನ ರಾಯಭಾರಿಗಳನ್ನು ಚೀನಾ ಬದಲಿಸಲು ಕ್ರಮ ಕೈಗೊಂಡಿದೆ. ಜಿನ್ ಪಿಂಗ್ ಅವರ ಆಪ್ತರನ್ನೇ ರಾಯಭಾರಿಗಳನ್ನಾಗಿಸಿ ಬಿಆರ್‌ಐ ಯೋಜನೆಗೆ ಆ ರಾಷ್ಟ್ರಗಳು ಅನುವು ಮಾಡಿಕೊಡಲು ಬೇಕಾದ ಲಾಬಿಗಳನ್ನು ನಡೆಸಲು ಚೀನಾ ತಂತ್ರಗಾರಿಕೆ ರೂಪಿಸಿದೆ. ಈ ಯೋಜನೆ ವಿರೋಧಿಸಿರುವ ಭಾರತವನ್ನು ಈ ವಿಚಾರದಲ್ಲಿ ಏಕಾಂಗಿಯಾಗಿಸಲು ಈ ಪ್ರಯತ್ನಕ್ಕೆ ಚೀನಾ ಕೈ ಹಾಕಿದೆ.
Related Articles
ಭಾರತ-ಚೀನಾ ನೈಜ ಗಡಿ ರೇಖೆ ಬಳಿಯಿರುವ ಪಾಂಗಾಂಗ್ ಸರೋವರದ ದಕ್ಷಿಣ ಭಾಗದಲ್ಲಿಚೀನಾ ಸರ್ಕಾರ,ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಹಾಕಲು ಸಿದ್ಧತೆ ನಡೆಸಿದೆ ಎಂದು ಭಾರತ ಹೇಳಿದೆ. ಗಡಿ ರೇಖೆಯ ಸಮೀಪದಲ್ಲಿರುವ ಚೀನಾ ಸೇನೆ, ಗಡಿ ರೇಖೆ ಗಿಂತ ತುಂಬಾ ಹಿಂದೆ ಇರುವ ತನ್ನ ಸೇನಾ ನೆಲೆ ಗಳಿಗೆ ತ್ವರಿತ್ವ ವಾಗಿ ಸಂದೇಶಗಳನ್ನು ರವಾನಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕೇಬಲ್‌ಗಳನ್ನು ಹಾಕುತ್ತಿದೆ ಎಂದಿದೆ.
Advertisement