Advertisement
ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಆಯೋಗ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಷ್ಟೊಂದು ವಿವರವಾದ ದತ್ತಾಂಶಗಳ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದೆ. ಸ್ವಯಂ ಆಗಿ ನೀಡಲಾಗಿರುವ ಈ ಮಾಹಿತಿಯು ಸಾರ್ವಜನಿಕರಲ್ಲಿ ಚುನಾವಣಾ ಪ್ರಕ್ರಿಯೆ ಮೇಲೆ ಇನ್ನೂ ಹೆಚ್ಚಿನ ವಿಶ್ವಾಸವನ್ನು ವೃದ್ಧಿಸಲಿದೆ ಎಂದು ಆಯೋಗವು ಹೇಳಿದೆ.
ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ.86 ಮಂದಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಒಟ್ಟು 12000 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ ಬಳಿಕ 8360 ಮಂದಿ ಕಣದಲ್ಲಿ ಉಳಿದುಕೊಂಡಿದ್ದರು. 7190 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಶೇಕಡಾವಾರು ಲೆಕ್ಕಾಚಾರ ಗಮನಿಸಿದರೆ ಶೇ.86 ಎಂದು ಆಯೋಗ ಹೇಳಿದೆ. ಈ ಪೈಕಿ 584 ಮಂದಿ ಅಭ್ಯರ್ಥಿಗಳು 6 ಮಾನ್ಯತೆ ಪಡೆದ ಪಕ್ಷದಿಂದಲೇ ಆಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 6923 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.