ಕೇಪ್ ಟೌನ್: ವಿಶ್ವದ ಅತೀ ಹಿರಿಯ ವ್ಯಕ್ತಿ ಎಂದು ನಂಬಲಾದ 1918ರ ಸ್ಪ್ಯಾನಿಷ್ ಜ್ವರದಿಂದ ಬದುಕುಳಿದ 116 ವರ್ಷದ ವೃದ್ಧರೊಬ್ಬರು ದಕ್ಷಿಣ ಆಫ್ರಿಕಾದಲ್ಲಿ ಶನಿವಾರ ನಿಧನರಾದರು ಎಂದು ಮಾಧ್ಯಮಗಳು ವರದಿ ಮಾಡಿದೆ.
ಫ್ರೆಢಿ ಬ್ಲಾಮ್ ಎಂಬ ಶತಾಯುಷಿ ತಾನು 1904 ಮೇ 8 ರಲ್ಲಿ ಜನಿಸಿರುವುದಾಗಿ, ದೇವರ ಆಶಿರ್ವಾದದಿಂದ ಇಷ್ಟು ವರ್ಷ ಬದುಕಿರುವೆನೆಂದು ಮಾಧ್ಯಮವೊಂದಕ್ಕೆ ಈ ವರ್ಷ ತಿಳಿಸಿದ್ದರು.
ಆದರೇ ಗಿನ್ನಿಸ್ ದಾಖಲೆಯ ಪ್ರಕಾರ ಜಗತ್ತಿನ ಅತೀ ಹಿರಿಯ ವ್ಯಕ್ತಿ ಎಂದರೇ 112 ವರ್ಷದ ಬಾಬ್ ವೆಯ್ಟನ್. ಅದಾಗ್ಯೂ ಸೌತ್ ಆಫ್ರಿಕಾದ ಮಾಧ್ಯಮಗಳು ಫ್ರೆಢಿ ಬ್ಲಾಮ್ ಅನಧಿಕೃತವಾಗಿ ಜಗತ್ತಿನ ಅತೀ ಹಿರಿಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಫ್ರೆಢಿ ಬ್ಲಾಮ್ ಯುವಕರಾಗಿದ್ದಾಗ ಸ್ಪ್ಯಾನಿಷ್ ಪ್ಲೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದರು. ಆದರೇ ಬ್ಲಾಮ್ ಅದೃಷ್ಟವಶಾತ್ ಗುಣಮುಖರಾದರೂ ಇವರ ಕುಟುಂಬದ ಎಲ್ಲರೂ ಕೂಡ ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದರು.
ಮುಂದೆ ಬ್ಲಾಮ್, ಜೆನೆಟ್ಟೆ ಎಂಬಾಕೆಯನ್ನು ವಿವಾಹವಾಗಿ ಮೂರು ಮಕ್ಕಳನ್ನು ಪಡೆದರು. ಇದೀಗ ಬ್ಲಾಮ್ ಕೇಪ್ ಟೌನ್ ನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದು, ಆದರೇ ಕೋವಿಡ್ ಕಾರಣದಿಂದ ಅಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.