Advertisement

Unofficial Test; ಭಾರತ ‘ಎ’-ಇಂಗ್ಲೆಂಡ್‌ ಲಯನ್ಸ್‌ : ಡ್ರಾ

11:21 PM Jan 20, 2024 | Team Udayavani |

ಅಹ್ಮದಾಬಾದ್‌: ಕೊನ ಭಾರತ್‌ ಅವರ ಅಮೋಘ ಶತಕದಿಂದಾಗಿ ಭಾರತ “ಎ’ ಮತ್ತು ಇಂಗ್ಲೆಂಡ್‌ ಲಯನ್ಸ್‌ ನಡುವಣ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

Advertisement

ಗೆಲ್ಲಲು 490 ರನ್‌ ತೆಗೆಯುವ ಗುರಿ ಪಡೆದ ಭಾರತ “ಎ’ ತಂಡವು ಕೊನ ಭಾರತ್‌ ಅವರ ಆಕರ್ಷಕ ಶತಕದಿಂದಾಗಿ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಅಂಪಾಯರ್ ನಾಲ್ಕನೇ ತಥಾ ಅಂತಿಮ ದಿನದ ಆಟವನ್ನು ನಿಲ್ಲಿಸಿದಾಗ ಭಾರತ 5 ವಿಕೆಟಿಗೆ 426 ರನ್‌ ಗಳಿಸಿತ್ತು. ಗೆಲ್ಲು ಇನ್ನೂ 64 ರನ್‌ ಗಳಿಸಬೇಕಾಗಿತ್ತು. ಹೀಗಾಗಿ ಈ ಪಂದ್ಯ ಡ್ರಾಗೊಂಡಿತು.

ಭಾರತ್‌ ಅವರ ಭರ್ಜರಿ ಆಟ ಈ ಪಂದ್ಯದ ಆಕರ್ಷಣೆಯಾಗಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಿದಾಗ ಭಾರತ್‌ 116 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. 165 ಎಸೆತ ಎದುರಿಸಿದ್ದ ಅವರು 15 ಬೌಂಡರಿ ಬಾರಿಸಿದ್ದರು. ಈ ಮೂಲಕ ಅವರು ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ತಂಡದಲ್ಲಿ ಸ್ಥಾನ ಪಡೆಯವ ಸಾಧ್ಯತೆಯನ್ನು ಹೆಚ್ಚಿಸಿಕೊಂಡರು. ಅವರಿಗೆ ಉತ್ತಮ ನೆರವು ನೀಡಿದ ಮಾನವ್‌ ಸುಥರ್‌ 89 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next