Advertisement

ವಿಜಯ್‌ ಹಜಾರೆ: ಗಾಯ ಲೆಕ್ಕಿಸದೇ ಶತಕ ಸಿಡಿಸಿದ ಉನ್ಮುಕ್ತ್ 

06:15 AM Feb 06, 2018 | Team Udayavani |

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಅಂಟಿಗುವಾದಲ್ಲಿ 2002ರಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಸ್ಪಿನ್‌ ಗಾರುಡಿಗ ಅನಿಲ್‌ ಕುಂಬ್ಳೆ ತಲೆಗೆ ಏಟು ಬಿದಿದ್ದರೂ ಬ್ಯಾಂಡೇಜ್‌ ಧರಿಸಿಯೇ ಸಾಹಸಮಯ ಬೌಲಿಂಗ್‌ ಪ್ರದರ್ಶಿಸಿದ್ದರು.

Advertisement

ಈ ಘಟನೆ ನೆನಪಿಸುವಂತಹ ಮತ್ತೂಂದು ಘಟನೆ ವಿಜಯ್‌ ಹಜಾರೆ ಏಕದಿನ ಕೂಟದಲ್ಲಿ ಸೋಮವಾರ ನಡೆದಿದೆ. ಉತ್ತರ ಪ್ರದೇಶ ವಿರುದ್ಧ ಏಕದಿನ ಪಂದ್ಯದ ವೇಳೆ ದಿಲ್ಲಿ ಆರಂಭಿಕ ಉನ್ಮುಕ್ತ್ ಚಾಂದ್‌ ಮುಖಕ್ಕೆ ಚೆಂಡು ತಾಗಿದೆ. ಗಾಯಕ್ಕೆ ಒಳಗಾಗಿದ್ದರೂ ಬ್ಯಾಂಡೇಜ್‌ ಧರಿಸಿ  ಚಾಂದ್‌ ಕಣಕ್ಕೆ ಇಳಿದಿದ್ದಾರೆ. ಅಷ್ಟು ಮಾತ್ರವಲ್ಲ 116 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ದಿಲ್ಲಿ 55 ರನ್‌ ಗೆಲುವು ಸಾಧಿಸಿತು ಎನ್ನುವುದು ಗಮನಾರ್ಹ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next