Advertisement
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಯವರು, ಜೂನ್ 14ರ ಬೆಳಿಗ್ಗೆ 6ರಿಂದ ಜೂ. 21ರ ಬೆಳಿಗ್ಗೆ 6 ರವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿ ಇರಲಿವೆ. ಸೂಚನೆಗಳನ್ನು ಕಡ್ಡಾಯ ಪಾಲನೆ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.
Related Articles
Advertisement
ಪಾರ್ಕ್ ಗಳಲ್ಲಿ ಬೆಳಗ್ಗೆ 5 ರಿಂದ 10 ರವರೆಗೆ ವಾಯುವಿಹಾರ, ಜಾಗಿಂಗ್ ನಡೆಸಲು ಕಾಲಾವಕಾಶ ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿ ನೀಡವಹುದು. ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಶೇ.50 ರಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ.
ನಿರ್ಬಂಧ ಸಡಿಲಿಕೆ ಹೊರತಾಗಿ ಕೆಲ ನಿರ್ಬಂಧ ವಿಧಿಸಲಾಗಿದೆ. ಅಗತ್ಯ ವಸ್ತು ಹೊರತು ಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧವಿದೆ. ಈಜುಕೊಳ, ಜಿಮ್, ಸಿನಿಮಾ, ಮಾಲ್, ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ಮುಂದು ವರೆದಿದೆ.
ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳಿಗೆ ನಿರ್ಬಂಧವಿದೆ. ಖಾಸಗಿ ಅಗತ್ಯ ಸೇವೆ ವ್ಯಾಪ್ತಿಗೆ ಬಾರದ ಸರ್ಕಾರಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಈ ಮೊದಲು ನಿಗದಿತ ಮದುವೆ ಮನೆಯಲ್ಲಿ ನೆರವೇರಿಸಬಹುದು. 40 ಜನ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಶವಸಂಸ್ಕಾರ ಅಥವಾ ಅಂತ್ಯಕ್ರಿಯೆ ವೇಳೆ 5 ಜನರಿಗೆ ಮಾತ್ರ ಅವಕಾಶವಿದೆ.
ರಾಜ್ಯ ವ್ಯಾಪ್ತಿ ರಾತ್ರಿ ಹಾಗೂ ವಾರಂತ್ಯ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಜೂನ್ 14 ರಿಂದ 21 ರವರೆಗೆ ರಾತ್ರಿ ಕರ್ಫ್ಯೂ ರಾಜ್ಯ ವ್ಯಾಪ್ತಿ ರಾತ್ರಿ 7 ರಿಂದ ಬೆಳಿಗ್ಗೆ 5 ವರೆಗೆ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿ ಇರುತ್ತದೆ. ಈ ವೇಳೆ ರೋಗಿಗಳು ಅವರ ಸಹಾಯಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳಿಗೆ ಅವಕಾಶವಿರುತ್ತದೆ. ನೌಕರರು ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಬೇಕು. ಒಟ್ಟಾರೆ ರಾತ್ರಿ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆ ಹೊರತು ಪಡಿಸಿ ಜನರ ಹಾಗೂ ವಾಹನಗಳ ಅನಗತ್ಯ ಓಡಾಟಕ್ಕೆ ನಿರ್ಭಂಧಿಸಲಾಗಿದೆ.
ಅದರಂತೆ ಟೆಲಿಕಾಂ ಇಂಟರ್ನೆಟ್ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬೇಕು. ವೈದ್ಯಕೀಯ ತುರ್ತು ಸೇವೆಗಳು ಅಗತ್ಯ ಸೇವೆಯ ಫಾರ್ಮಸಿ ಕಾರ್ಯಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಎಲ್ಲ ತರಹದ ಸರಕು ಮತ್ತು ಸರಕು ಸಾಗಾಟ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಸರಕುಗಳ ಹೋಂ ಡೆಲಿವರಿ, ಇ-ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
ರೈಲು ವಿಮಾನ ಸೇವೆ ಎಂದಿನಂತೆ ಅವಕಾಶವಿದ್ದು, ಪಾಸ್ ರೀತಿಯಲ್ಲಿ ಟಿಕೆಟ್ ಬಳಸಲು ಸೂಚಿಸಲಾಗಿದೆ. ಅದರಂತೆ ನಿತ್ಯದ ರಾತ್ರಿ ಕರ್ಫ್ಯೂ, ವಿಕೆಂಡ್ ಕರ್ಫ್ಯೂ ವೇಳೆ ಸರ್ಕಾರದ ಮಾರ್ಗಸೂಚಿ ಅನ್ವಯ ಅನುಮತಿಸಿದ ಚಟುವಟಿಕೆ ಹೊರತು ಪಡಿಸಿ ಅನಗತ್ಯ ವಾಹನ, ಹಾಗೂ ವ್ಯಕ್ತಿಗಳು ಓಡಾಟ ನಡೆಸಲು ಅವಕಾಶವಿಲ್ಲ. ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ತಿಳಿಸಿದ್ದಾರೆ.