Advertisement

Unlock Raghava: ಹಾಡಿನ ನಡುವೆ  ರಾಘವನ ಫೈಟ್‌

03:11 PM Aug 09, 2023 | Team Udayavani |

ನವ ನಾಯಕ ಮಿಲಿಂದ್‌ ಗೌತಮ್‌ ಹಾಗೂ ರೇಚಲ್‌ ಡೇವಿಡ್‌ ಜೋಡಿಯಾಗಿ ಅಭಿನಯಿಸುತ್ತಿರುವ “ಅನ್ಲಾಕ್‌ ರಾಘವ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮತ್ತು ಡಬ್ಬಿಂಗ್‌ ಮುಗಿಸಿರುವ “ಅನ್ಲಾಕ್‌ ರಾಘವ’ ಸಿನಿಮಾದ ಇತರ ಪೋಸ್ಟ್‌ ಪೊ›ಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದೆ.

Advertisement

ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ನಾಲ್ಕೂವರೆ ಫೈಟ್ಸ್‌ ಇದೆಯಂತೆ! ನಾಲ್ಕು ಫೈಟ್ಸ್‌ ಅಥವಾ ಐದು ಫೈಟ್ಸ್‌ ಇದೆ ಅಂದ್ರೆ ಓಕೆ. ಇದೇನಿದು ನಾಲ್ಕೂ ವರೆ ಫೈಟ್ಸ್‌? ಅಂದ್ರೆ, “ಅನ್ಲಾಕ್ ರಾಘವ’ ಸಿನಿಮಾದ ನಿರ್ದೇಶಕ ದೀಪಕ್‌ ಮಧುವನಹಳ್ಳಿ ಅವರಿಂದ ಬರುವ ಉತ್ತರ ಹೀಗಿದೆ, “ಈ ಅರ್ಧ ಫೈಟ್‌ ಒಂದು ಹಾಡಿನ ನಡುವೆ ಬರುತ್ತದೆ. ಚಿತ್ರಕಥೆ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ, ಆ ಸೀಕ್ವೆನ್ಸ್‌ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಸೇರಿ ಸಿ ದಾಗ ಈ ಸೀಕ್ವೆನ್ಸ್‌ ತುಂಬಾ ಬ್ಯೂಟಿಫ‌ುಲ್‌ ಆಗಿ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಡಬ್ಬಿಂಗ್‌ ಸಮಯದಲ್ಲಿ ಆ ಹಾಡನ್ನು ನೋಡಿ, ಬಹಳ ಮೆಚ್ಚಿದ್ದಾರೆ. ಜೊತೆಗೆ ಆ ಹಾಡು, ಸಿನಿಮಾದ ಟ್ರಂಪ್‌ ಕಾರ್ಡ್‌ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಡು ಅದರ ಜೊತೆಗೆ ಅರ್ಧ ಫೈಟ್‌ ನೋಡುಗರಿಗೆ ಖುಷಿ ಕೊಡುತ್ತದೆ’ ಎನ್ನುತ್ತಾರೆ.

ಇನ್ನು “ಕಾಂತಾರ’ ಸಿನಿಮಾದ “ವರಾಹ ರೂಪಂ…’ ಹಾಡನ್ನು ಹಾಡಿರುವ ಸಾಯಿ ವಿಘ್ನೇಶ್‌ ಈ ಹಾಡನ್ನು ಹಾಡಿದ್ದು, ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ ಎನ್ನುವುದು ಚಿತ್ರತಂಡದ ಮಾಹಿತಿ. ಮುರಳಿ ಈ ಹಾಡಿಗೆ ನೃತ್ಯ ಸಂಯೋಜಿಸಿದರೆ, ಅರ್ಜುನ್‌ ಗೀತೆಯಲ್ಲಿ ಬರುವ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಮಿಲಿಂದ್‌ ಗೌತಮ್‌, ರೇಚಲ್‌ ಡೇವಿಡ್‌ ಅವರೊಂದಿಗೆ ಸಾಧುಕೋಕಿಲ, ಅವಿನಾಶ್‌, ಶೋಭರಾಜ್‌, ರಮೇಶ್‌ ಭಟ್‌, ವೀಣಾ ಸುಂದರ್‌, ಸುಂದರ್‌, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್‌, ಅಥರ್ವ ಪ್ರಕಾಶ್‌, ಶ್ರೀದತ್ತ, ಬೃಂದಾ ವಿಕ್ರಮ್‌ ಮೊದಲಾದವರು ” ಅನ್ಲಾಕ್ ರಾಘವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next