Advertisement
ಪ್ರಸಿದ್ಧ ಧಾರ್ಮಿಕ ಸ್ಥಳಗಳು ಹಾಗೂ ಬೆಂಗ ಳೂರು, ಚಿಕ್ಕಮಗಳೂ ರನ್ನು ಸಂಪರ್ಕಿಸುವ ಬಹು ಮುಖ್ಯ ರಸ್ತೆಯಾಗಿದ್ದರೂ ಅಗಲ ಕಿರಿದಾಗಿರುವುದು ಹಾಗೂ ವಾಹನ ದಟ್ಟಣೆ ಇರುವುದನ್ನು ಪರಿಗಣಿಸಿ ಈ ವ್ಯಾಪ್ತಿಯ ರಸ್ತೆ ಅಭಿ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.
ಈ ಹಿಂದೆ ರಸ್ತೆ ಅಭಿವೃದ್ಧಿಗೆ ಬೆಂಚ್ ಮಾರ್ಕಿಂಗ್, ಸೆಂಟ್ರಲ್ ಮಾರ್ಕಿಂಗ್, ಕಟ್ಟಡ, ಮರಗಳ ಗುರುತಿಸುವಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಸರ್ವೇ ಹಾಗೂ ಸಮೀಕ್ಷೆಗಳು ಪೂರ್ಣ ಗೊಂಡಿದ್ದವು. ಪ್ರಥಮ ಹಂತದ ಬಿ.ಸಿ.ರೋಡ್- ಪೂಂಜಾಲಕಟ್ಟೆ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿನ ತಿರುವು ರಸ್ತೆಗಳಲ್ಲಿರುವ ನ್ಯೂನತೆಗಳನ್ನು ಮನದಟ್ಟು ಮಾಡಿಕೊಂಡು ದ್ವಿತೀಯ ಹಂತದ ಕಾಮಗಾರಿ ವೇಳೆ ಇನ್ನಷ್ಟು ನೇರಗೊಳಿಸುವ ಸಲುವಾಗಿ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಪುಂಜಾಲಕಟ್ಟೆಯಿಂದ ಸಮೀಕ್ಷೆ ಆರಂಭಗೊಂಡಿದ್ದು ಗುರುವಾಯನಕೆರೆ, ಬೆಳ್ತಂಗಡಿವರೆಗೆ ಪೂರ್ಣಗೊಂಡಿದೆ. 2 ಕಿ.ಮೀ. ಉಳಿತಾಯಿ
ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜ ಮುತುವರ್ಜಿಯಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ 718 ಕೋಟಿ ರೂ. ಅನುದಾನವಿರಿಸಿದೆ. ಹಿಂದಿನ ಸಮೀಕ್ಷೆಗಳ ಪ್ರಕಾರ 35 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿದ್ದ ತಿರುವುಗಳ ಸಂಖ್ಯೆ ಕಡಿಮೆಗೊಂಡರೆ 2 ಕಿ.ಮೀ.ಗಳಷ್ಟು ಸಂಚರಿಸುವುದು ಕಡಿಮೆಯಾಗಲಿದೆ. ಈಗಾಗಲೇ 10 ಕಂಪೆನಿಗಳು ಕಾಮಗಾರಿಗೆ ಟೆಂಡರ್‌ಸಲ್ಲಿಸಿವೆ.ನವೆಂಬರ್ ಸುಮಾರಿಗೆ ಕಾಮಗಾರಿ ಆರಂಭಗೊ ಳ್ಳಲಿದೆ ಎಂದು ಶಾಸಕ ಪೂಂಜ ತಿಳಿಸಿದ್ದಾರೆ.
Related Articles
2,412 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಅಹವಾಲು ಆಲಿಸಲು ಸಭೆ ಯನ್ನು ನಡೆಸಲಿದೆ.
Advertisement
ರಸ್ತೆಯಲ್ಲಿರುವ ತಿರುವುಗಳನ್ನು ಆದಷ್ಟು ತಪ್ಪಿಸುವ ಉದ್ದೇಶದಿಂದ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ತಾಂತ್ರಿಕ ಪರಿಶೀಲನೆಗಳು ಪ್ರಗತಿಯಲ್ಲಿವೆ. ವರ್ಷಾಂತ್ಯಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ.– ಕೃಷ್ಣ ಕುಮಾರ್, ಎಇಇ
ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ. ತಿರುವು ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಸ್ಥಳಗಳಲ್ಲಿ ಇನ್ನೊಮ್ಮೆ ಮರಗಳ ಸಮೀಕ್ಷೆ ಕೈಗೊಳ್ಳಬೇಕಿದೆ. ಖಾಸಗಿ ಸ್ಥಳಗಳಲ್ಲಿರುವ ಕೆಲವು ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಬರಬಹುದು.
– ಡಾ| ದಿನೇಶ್ ಕುಮಾರ್,
ಡಿಎಫ್‌ಒ, ದಕ್ಷಿಣ ಕನ್ನಡ ಜಿಲ್ಲೆ