Advertisement
ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದ ಪ್ರಥಮ ವಿಶ್ವವಿದ್ಯಾಲಯವಾಗಿ ಸ್ಥಾಪನೆಗೊಂಡ ಮೈಸೂರು ವಿವಿ2020-21 ಸಾಲಿನ ಸ್ನಾತಕೋತ್ತರ ತರ ಗತಿಗಳ ಪ್ರಥಮ ಹಾಗೂ ದ್ವಿತೀಯ ವರ್ಷಗಳಿಗೆ ಪ್ರವೇಶಕ್ಕೆ ಶುಲ್ಕ ಪಟ್ಟಿ ಬಿಡುಗಡೆ ಮಾಡಿದೆ.
Related Articles
Advertisement
ಶೇ.50 ಶುಲ್ಕ ಹೆಚ್ಚಳ: ಕಳೆದ ಬಾರಿ ವಿಜ್ಞಾನ ಆಧಾರಿತ ಪದವಿ ವಿಭಾಗಗಳ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ 20 ಸಾವಿರ ರೂ. ನೊಳಗಿದ್ದ ಶುಲ್ಕ ಈ ವರ್ಷ 40 ಸಾವಿರ ರೂ. ದಾಟಿದೆ. ಅಲ್ಲದೇ ಇತರೆ ಪದವಿ ಶಿಕ್ಷಣಕ್ಕೆ ನಾಲ್ಕೈದು ಸಾವಿರ ಇದ್ದ ಶುಲ್ಕಈವರ್ಷ 11 ಸಾವಿರ ರೂ. ದಾಟಿದೆ. ಜೊತೆಗೆ ಪ್ರಥಮ ವರ್ಷದಿಂದ ದ್ವಿತೀಯ ವರ್ಷಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸಿರುವ ನಿರ್ಧಾರದಿಂಧ ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಿಮುಖವಾಗುವಂತೆ ಮಾಡಿದೆ.
ಸಾಲದ ಮೊರೆಹೋದ ವಿದ್ಯಾರ್ಥಿಗಳು: ಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶೇ.60ರಷ್ಟು ವಿದ್ಯಾರ್ಥಿಗಳು ಬಡ ಹಾಗೂ ಮಧ್ಯಮ ಕುಟುಂಬದವರಾಗಿದ್ದು, ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಆದರೆ, ಈ ಬಾರಿ ಲಾಕ್‌ಡೌನ್ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಬಹುಪಾಲು ಕುಟುಂಬಗಳು ಕೈಯಲ್ಲಿ ಹಣವಿಲ್ಲದೇ ಪರದಾಡುತ್ತಿವೆ. ವಿವಿಧ ಕಾರಣಗಳನ್ನೊಡ್ಡಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ದುಪ್ಪಟ್ಟು ಶುಲ್ಕ ಪಡೆಯುತ್ತಿರುವ ಈ ನಡೆ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೀಡು ಮಾಡಿದೆ. ವಿಶ್ವವಿದ್ಯಾಲಯ ಕೇಳಿದಷ್ಟು ಹಣವನ್ನು ನೀಡಲು ವಿದ್ಯಾರ್ಥಿಗಳ ಪೋಷಕರು ಸಾಲದ ಮೊರೆ ಹೋಗಿದ್ದಾರೆ.
– ಸತೀಶ್ ದೇಪುರ