Advertisement
ಜಯನಗರದಲ್ಲಿರುವ ವಿವಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವಿವಿಯನ್ನು ರಾಮನಗರಕ್ಕೆ ಸ್ಥಳಾಂತರಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ. ವಿವಿ ಸ್ಥಳಾಂತರಗೊಂಡ ನಂತರ ವಿದ್ಯಾರ್ಥಿಗಳು ತಮ್ಮ ದಾಖಲೆಗಳಿಗಾಗಿ ವಿವಿಗೆ ಬರಬೇಕಿಲ್ಲ. ಅರ್ಹತಾ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರ, ಪ್ರಾವಿಷನಲ್ ಡಿಗ್ರಿ ಪ್ರಮಾಣಪತ್ರಗಳನ್ನೂ ಆನ್‌ಲೈನ್ ಮೂಲಕ ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ.
Related Articles
Advertisement
ನಾಳೆ ಆರೋಗ್ಯ ವಿವಿ ಘಟಿಕೋತ್ಸವವಿವಿಯ 19ನೇ ಘಟಿಕೋತ್ಸವ ಗುರುವಾರ (ಅ. 6) ಬೆಳಗ್ಗ 10.30ಕ್ಕೆ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಘಟಿಕೋತ್ಸವದಲ್ಲಿ ಒಟ್ಟು 26,698 ಮಂದಿಗೆ ಪ್ರದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 69 ಅಭ್ಯರ್ಥಿಗಳು 103 ಚಿನ್ನದ ಪದಕ ಮತ್ತು 9 ನಗದು ಬಹುಮಾನ ಪಡೆಯುತ್ತಿದ್ದಾರೆ. ಇದರಲ್ಲಿ 48 ಹೆಣ್ಣು ಮಕ್ಕಳು ಮತ್ತು 21 ಪುರಷರಿದ್ದಾರೆ. ಜತೆಗೆ ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ “ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದ್ದಾರೆ. ವಿವಿ ಕುಲಾಧಿಪತಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ನಡೆಯಲಿದೆ. ಬೆಂಗಳೂರಿನ ಮಾನವ ತಳಿ ಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ಎಚ್.ಜಿ.ಶರತಚಂದ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದರು. ಇಬ್ಬರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ: ಬೆಂಗಳೂರಿನ ನಿವೃತ್ತ ಫ್ರಾಧಾಪ್ಯಕ (ಮೆಡಿಸಿನ್) ಡಾ.ಕುತುಪಾಡಿ ಗೋವಿಂದದಾಸ್ ಮತ್ತು ಅಮೆರಿಕಾದ ಹೃದ್ರೋಗ ತಜ್ಞ ಡಾ.ಗೋವಿಂದರಾಜ್ ಸುಬ್ರಮಣಿ ಅವರಿಗೆ ಗೌರವ ಡಾಕ್ಟರೇಟ್ ಪದವಿ “ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಕುಲಸಚಿವ ಡಾ.ಸಿ.ಎಂ.ಮನ್ಸೂರ್, ಕುಲಸಚಿವ (ಮಲ್ಯಮಾಪನ) ಡಾ.ಎಂ.ಕೆ.ರಮೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.