ಸುಂಕದಕಟ್ಟೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಬೊಲ್ಪು ತುಳು ಸಂಘ, ವಿದ್ಯಾರ್ಥಿ ಸಂಘ, ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದೊಂದಿಗೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಸಭಾಭವನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ತುಳು ಪರಪುದ ಪಂಥೊಲು- 2018 ನಡೆಯಿತು.
ಸಬಿಸವಾಲ್ ಸ್ಪರ್ಧೆಯಲ್ಲಿ ಕಟೀಲು ಎಸ್.ಡಿ.ಪಿ.ಟಿ. ಕಾಲೇಜು, ಜಾನಪದ ಸಮೂಹ ಗೀತೆಯಲ್ಲಿ ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರೆ, ತುಳು ಪ್ರಬಂಧ ಸ್ಪರ್ಧೆಯಲ್ಲಿ ಮೂಡಬಿದಿರೆ ಮಹಾವೀರ ಪದವಿ ಪೂರ್ವಕಾಲೇಜಿನ ರಮ್ಯಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ. ಸಬಿಸವಾಲ್ ಸ್ಪರ್ಧೆಯಲ್ಲಿ ಐಕಳ ಪೊಂಪೈ ಕಾಲೇಜು ದ್ವಿತೀಯ ಸ್ಥಾನ, ಮೂಡಬಿದಿರೆ ಮಹಾವೀರ ಕಾಲೇಜು ತೃತೀಯ ಸ್ಥಾನ ಪಡೆದಿದೆ.
ಜಾನಪದ ಸಮೂಹ ಗೀತೆಯಲ್ಲಿ ಮೂಡಬಿದಿರೆ ಮಹಾವೀರ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ, ಕಾವೂರು ಬಿಜಿಎಸ್ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದಿದೆ. ತುಳು ಪ್ರಬಂಧ ಸ್ಪರ್ಧೆಯಲ್ಲಿ ಸುಂಕದ ಕಟ್ಟೆ ಶ್ರೀ ನಿರಂಜನ ಸ್ವಾಮಿ ಪ.ಪೂ. ಕಾಲೇಜಿನ ಕವಿತಾ ದ್ವಿತೀಯ, ಮುತ್ತೂರು ಸ. ಪ.ಪೂ. ಕಾಲೇಜಿನ ಹರ್ಷಿತ್ ತೃತೀಯ ಸ್ಥಾನ ಪಡೆದಿದ್ದಾರೆ.
ಸಮಾರೋಪದಲ್ಲಿ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ನಾರಾಯಣ ಎನ್. ಪೂಜಾರಿ, ಗೆಜ್ಜೆಗಿರಿ ಕೋಟಿ ಚೆನ್ನಯ ಮೂಲ ಸ್ಥಾನದ ಅಧ್ಯಕ್ಷ ಜಯಂತ್ ನಡುಬೈಲ್, ಶ್ರೀ ನಿರಂಜನ ಸ್ವಾಮಿ ಪ್ರೌಢಶಾಲಾ ಮುಖ್ಯಶಿಕ್ಷಕ ರವೀಂದ್ರ ಶೆಟ್ಟಿ, ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೇಯಸ್, ಜನನಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಲಚ್ಚಿಲ್ ಅವರು ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಜಯಂತ್ ನಡುಬೈಲ್ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲೆ ಲತಾ ಕೆ., ಉಪಪ್ರಾಂಶುಪಾಲ ಗಣೇಶ್ ಬಿ.ಎಂ., ಉಪನ್ಯಾಸಕಿ ಪುಷ್ಪಾಲತಾ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಭಟ್, ತುಳು ಸಂಘದ ನಿರ್ದೇಶಕಿ ಪ್ರಿಯದರ್ಶಿನಿ, ತುಳು ಸಂಘದ ಕಾರ್ಯದರ್ಶಿ ಪ್ರೇಮ್‌ರಾಜ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್, ಉಪಾಧ್ಯಕ್ಷ ಪ್ರಜ್ವಲ್ ನಾಯಕ್, ಕಾರ್ಯದರ್ಶಿ ಬೃಂದಾ, ಜತೆ ಕಾರ್ಯದರ್ಶಿ ಜ್ಯೋತಿ ಕೆ., ಕ್ರೀಡಾ ಕಾರ್ಯದರ್ಶಿ ವಿನಯ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ವರ್ಷಾ, ಜತೆ ಕಾರ್ಯದರ್ಶಿ ಯಕ್ಷಿತಾ ಉಪಸ್ಥಿತರಿದ್ದರು.