Advertisement

ವಿವಿಗಳಲ್ಲಿ ಸಂಗೀತಗಾರರು ತಯಾರಾಗುತ್ತಿಲ್ಲ: ಕಂಬಾರ

11:44 AM Mar 08, 2017 | Team Udayavani |

ಬೆಂಗಳೂರು: ಸಂಗೀತ ಕಲಿಕೆಗೆ ಒಂದು ಸಾಂಪ್ರದಾ ಯಿಕ ವಿಧಾನವಿದೆ, ಆದರೆ, ಇಂದು ಬಹುತೇಕ ವಿಶ್ವವಿದ್ಯಾಲಯಗಳಲ್ಲಿರುವ ಸಂಗೀತ ವಿಭಾಗಗಳು ಅದನ್ನು ಪಾಲಿಸುತ್ತಿಲ್ಲ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು.  

Advertisement

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಕರ್ನಾಟಕ ಸಾಮಾನ್ಯಜ್ಞಾನ ಅಕಾಡೆಮಿಯ 12ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, “ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಪದವಿ ಪಡೆದವರು ಕೇವಲ ಪದವೀಧರರಾಗುತ್ತಿದ್ದಾರೆಯೇ ಹೊರತು ಸಂಗೀತಗಾರರಾಗಿ ರೂಪುಗೊಳ್ಳುತ್ತಿಲ್ಲ,” ಎಂದು ಹೇಳಿದರು.

ಸರ್ಕಾರಗಳು ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಆಗುತ್ತಿದೆ. ಶೈಕ್ಷಣಿಕ ತಿದ್ದುಪಡಿಗಳನ್ನು ತರುವಾಗ ಶಿಕ್ಷಕರ ಅಭಿಪ್ರಾಯ ಕೇಳುವ ವ್ಯವಸ್ಥೆ  ನಿರ್ಮಾಣವಾಗಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಕಾಯಿದೆ ಜಾರಿಯಾಗುವಾಗ ಶಿಕ್ಷಕರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು,” ಎಂದು ಅವರು ಅಭಿಪ್ರಾಯಪಟ್ಟರು.  

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿದರು. ಮಾಜಿ ಉಪಸಭಾಪತಿ ಪುಟ್ಟಣ್ಣ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌, ಕವಿ ಪ್ರೊ.ಎಲ್‌.ಎನ್‌. ಮುಕುಂದರಾಜ್‌,  ಸಾಮಾನ್ಯಜ್ಞಾನ ಅಕಾಡೆಮಿ ಅಧ್ಯಕ್ಷ ಹೊ.ನ. ನೀಲಕಂಠೇಗೌಡ ಮತ್ತಿತರರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next