Advertisement

ಸೋಮಯಾಗದಿಂದ ಧರ್ಮ ಸಂಸ್ಕೃತಿಯ ಅನಾವರಣ: ಒಡಿಯೂರು ಶ್ರೀ

01:00 AM Feb 21, 2019 | Team Udayavani |

ವಿದ್ಯಾನಗರ: ಧರ್ಮವೆಂಬ ನೆಟ್‌ವರ್ಕ್‌ನ ಮೂಲಕ ಆಧ್ಯಾತ್ಮಿಕತೆಯ ಸಂರಕ್ಷಣೆ ಯನ್ನು ಕೊಂಡೆವೂರಿನ ಶ್ರೀಗಳು ಅತ್ಯಂತ ಶಿಸ್ತಿನಿಂದ ಮಾಡುತ್ತಿದ್ದು, ಸೋಮಯಾಗದಿಂದ ವಿಶ್ವಪರಿಚರ್ತನೆಯ ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವುದು ಶ್ರೇಷ್ಠ ಕಾರ್ಯ. ಕಲ್ಲನ್ನು ಶಿಲ್ಪವಾಗಿಸುವ ಸಂಕಲ್ಪದೊಂದಿಗೆ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದಿಂದ ಧರ್ಮ ಸಂಸ್ಕೃತಿಯ ಅನಾವರಣವಾಗಲಿದೆ. ಸದ್ವಿಚಾರ ಸಂಪನ್ನತೆ ಬದುಕಾಗಬೇಕು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.

Advertisement

ಕೊಂಡೆವೂರು  ಶ್ರೀ ನಿತ್ಯಾನಂದ ಯೋಗಾಶ್ರಮ ದಲ್ಲಿ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮ ಯಾಗದ ಪ್ರಯುಕ್ತ ಬುಧವಾರ ನಡೆದ ಧರ್ಮ ಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಲೌಕಿಕ ಸುಖವನ್ನು ಪ್ರೇಯಸ್ಸು ನೀಡಿದರೆ ಜೀವನಕ್ಕೆ ಅನಿವಾರ್ಯವಾಗಿರುವ ಶ್ರೇಯಸ್ಸಿನಿಂದ ಶಾಂತಿ ನೆಲೆಗೊಳ್ಳಲಿದೆ ಎಂದು ಅವರು ತಿಳಿಸಿದರು. 

ನಿತ್ಯಾನಂದ ಮಹಾರಾಜ್‌ ಅವರ ಅನುಗ್ರಹ ದಿಂದ ಕೊಂಡೆವೂರು ಆಶ್ರಮದಲ್ಲಿ ಗುರುಪರಂಪರೆಯ ದೃಷ್ಟಿಯಿಂದ ಎಲ್ಲವೂ ಸಾಕಾರ ವಾಗುತ್ತಿದ್ದು, ರಾಷ್ಟ್ರಕಟ್ಟುವ ಮಹಾನ್‌ ಕೆಲಸಕ್ಕೆ ಈ ಯಾಗವು ಮುನ್ನುಡಿಯಾಗಲಿದೆ ಎಂದು ಅವರು ಹಾರೈಸಿದರು. 

ಕೇವಲ ಇಂದ್ರಿಯಗಮ್ಯ ಮನಸ್ಸು ಬಣ್ಣ ಬಣ್ಣದ ಕಾಗದದ ಹೂಗಳಿಗೆ ಮರುಳಾಗುತ್ತದೆ. ಆದರೆ ದುಂಬಿ ನಿಜಹೂಗಳಿಂದ ಮಕರಂದ ಹೀರುತ್ತವಂತೆ ಶ್ರೇಯಸ್ಸಿನ ಹಾದಿಯಲ್ಲಿ ಉತ್ತಮ ಚಿಂತನೆಗಳೊಂದಿಗೆ, ಉನ್ನತವಾದ ಆಯ್ಕೆಗಳೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.

ಮೂಡುಬಿದಿರೆ  ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಿ, ಭಾರತ ಮತ್ತೆ ಜಗತ್ತಿನ ಗುರುವಾಗಿಸುವಲ್ಲಿ ಇಂತಹ ಪುಣ್ಯಕಾರ್ಯಗಳು ಕಾರಣವಾಗುತ್ತವೆ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ದಿವ್ಯ ಉಪಸ್ಥಿತರಿದ್ದರು. ಡಾ| ಜಯಪ್ರಕಾಶ್‌ ತೊಟ್ಟೆತ್ತೋಡು ಸ್ವಾಗತಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

Advertisement

ಯಾಗಶಾಲೆಯಲ್ಲಿ: ಸೂರ್ಯೋದಯಕ್ಕೆ ಸೋಮಪೂಜೆ, ಪ್ರಾಯಣೀಯೆ„ಷ್ಟಿ, ಸೋಮಕ್ರಯ, ಸೋಮರಾಜಾತಿಥ್ಯ, ಅತಿಥ್ಯೆàಷ್ಟಿ, ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ ಹಾಗೂ ಅಪರಾಹ್ನ ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ ಹಾಗೂ ಪಯೋವ್ರತ ಜರಗಿತು.

ಇಂದಿನ ಕಾರ್ಯಕ್ರಮ 
ಬೆಳಗ್ಗೆ 5ರಿಂದ 11ರ ತನಕ ಪುಣ್ಯಾಹ, ಗಣಯಾಗ. 7.50ಕ್ಕೆ ಕುಂಭ ಲಗ್ನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ, ತತ್ವ ಹೋಮ. ಬೆಳಗ್ಗೆ ಪರಮಪೂಜ್ಯ ಶ್ರೀವಿಖ್ಯಾತಾನಂದ ಸ್ವಾಮೀಜಿ ಬಲೊÂàಟ್ಟು ಕಾರ್ಕಳ ಹಾಗೂ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಬಾಳೆಕೋಡು ಇವರಿಂದ ಅನುಗ್ರಹ ಸಂದೇಶ ನಡೆಯಲಿರುವುದು. 

ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಾಯಂಕಾಲ 5ರಿಂದ 7.30ವರೆಗೆ 108 ಕಲಶಾ ಧಿವಾಸ, ಅ ಧಿವಾಸ ಹೋಮ, ದುರ್ಗಾ ನಮಸ್ಕಾರ ಪೂಜೆ.  ಯಾಗ ಶಾಲೆಯಲ್ಲಿ 9ಕ್ಕೆ ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ. ವೇದಿ ನಿರ್ಮಾಣ, ಯೂಪಕರ್ಮ, ಚಯನಕರ್ಮ, ಅಪರಾಹ್ನ ಪಯೋವ್ರತ, ಪ್ರವಗ್ಯì, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಮಂತ್ರಶೇನ ನಡೆಯಲಿದ್ದು ತದನಂತರ ರಾತ್ರಿ 7.30ಕ್ಕೆ ಗಾಯತ್ರಿ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿರುವುದು.

Advertisement

Udayavani is now on Telegram. Click here to join our channel and stay updated with the latest news.

Next