Advertisement
ದಿನದ ಹಿಂದಷ್ಟೇ ಸರಕಾರದ 5 ಗ್ಯಾರಂಟಿಗಳಲ್ಲಿ ಒಂದಾದ “ಶಕ್ತಿ’ ಯೋಜನೆಯ ಮರುಚಿಂತನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದ್ದರು. ಅದರ ಮರುದಿನವೇ ಪಕ್ಷದ ವರಿಷ್ಠರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹುಟ್ಟುಹಬ್ಬ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಖರ್ಗೆ ಮಾತನಾಡಿದರು.
Related Articles
ಇದೇ ವೇಳೆ ರಾಜ್ಯದ ನಾಯಕರಿಗೆ ತುಸು ಖಾರವಾಗಿಯೇ ಒಗ್ಗಟ್ಟಿನ ಪಾಠ ಮಾಡಿದ ಎಐಸಿಸಿ ಅಧ್ಯಕ್ಷ ಖರ್ಗೆ, “ಸಿದ್ದರಾಮಯ್ಯ ಅವರಿಗೆ ಏನಾದರೂ ಆದರೆ ಮತ್ತೂಬ್ಬರು ಖುಷಿಪಡುವುದು. ಶಿವಕುಮಾರ್ ಒಳಗೆ ಹೋದರೆ ಇನ್ನೊಬ್ಬರು ಖುಷಿಪಡುವುದು ಆಗಬಾರದು. ಈ ಖುಷಿ ಶಾಶ್ವತವಾಗಿರುವುದಿಲ್ಲ. ನಿಮ್ಮನ್ನು ಹಾಳು ಮಾಡಲು ಈ ಮನಃಸ್ಥಿತಿಯೇ ಸಾಕು, ಬೇರೆಯವರು ಬೇಕಿಲ್ಲ. ನಿಮ್ಮಲ್ಲಿ ಒಗ್ಗಟ್ಟಿಲ್ಲ ಎಂದಾದರೆ ಒಬ್ಬೊಬ್ಬರನ್ನೇ ಕರೆದು ಮಾತನಾಡಿಸುತ್ತಾರೆ. ನಿಮ್ಮನ್ನು ಹುರಿದುಂಬಿಸುತ್ತಾರೆ. ಹಾಗೆಂದು ಅವರೇನೂ ನಿಮ್ಮ ಒಳ್ಳೆಯದನ್ನು ಬಯಸುವುದಿಲ್ಲ. ಬೆಲ್ಲ ಇದ್ದಲ್ಲಿ ನೊಣ ಇರುತ್ತದೆ. ಇದು ನಿಮಗೆ ನೆನಪಿರಲಿ’ ಎಂದು ಎಚ್ಚರಿಸಿದರು.
Advertisement
“ಬಫೆ ಸಿಸ್ಟಂ’ ಆಗಬಾರದು. ಮುಂದೆ ಬಂದವನಿಗೆ ಬಿರಿಯಾನಿ, ಹಿಂದಿನವನಿಗೆ ಏನೂ ಇಲ್ಲ ಎಂಬಂತೆ ಆಗಬಾರದು. ನೀವು ಒಟ್ಟಾಗಿದ್ದರೆ, ಯಾರೂ ನಿಮಗೆ ಕೈಹಚ್ಚುವುದಿಲ್ಲ. ಹಿಂದೆ ದೇವರಾಜ ಅರಸು ನಿರಂತರ 8 ವರ್ಷ ರಾಜ್ಯವನ್ನು ಮುನ್ನಡೆಸಿದರು. ಇಂದಿರಾ ಗಾಂಧಿ ಜತೆ ಇದ್ದಿದ್ದರೆ ಮತ್ತೆ 5 ವರ್ಷ ಮುಂದುವರಿಯುತ್ತಿದ್ದರು. ಪಕ್ಷದ ಹಿತದೃಷ್ಟಿಯಿಂದ, ಅನುಭವದಿಂದ ಹೇಳುತ್ತಿದ್ದೇನೆ ಎಂದು ಸೂಚ್ಯವಾಗಿ ಹೇಳಿದರು.
ಇಲ್ಲಿಗೆ ಕೈ ಹಾಕಲ್ಲ!ನಾನು ಯಾವತ್ತೂ ರಾಜ್ಯ ರಾಜಕಾರಣದಲ್ಲಿ ಕೈಹಾಕುವುದಿಲ್ಲ. ಸಚಿವ ಮುನಿಯಪ್ಪ ಸೇರಿದಂತೆ ಕೆಲವರು ಬಂದು ಭೇಟಿಯೂ ಆಗುತ್ತಾರೆ. ಕೆಲವರು ಪತ್ರ ಕೂಡ ಬರೆಯುತ್ತಾರೆ. ಆದರೆ, ನನ್ನ ಕೆಲಸ ಅದಲ್ಲ. ನನಗೆ ವಹಿಸಿದ ಜವಾಬ್ದಾರಿಯೇ ಬೇರೆ. ಅದನ್ನು ನಿರ್ವಹಿಸುತ್ತಿದ್ದೇನೆ. – ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ