Advertisement
ಅಲ್ಲದೆ, ನ.11ರವರೆಗೆ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಲು ಫರ್ಮಾನು ಹೊರಡಿಸಲಾಗಿದೆ. ಈಗ ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐದೇ ಸಚಿವರು ಭಾಗಿಯಾಗಿದ್ದರು. ಇದರಿಂದ ಗರಂ ಆದ ಸುರ್ಜೇವಾಲ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಉಪ ಸಮರದ ರಣತಂತ್ರ ರೂಪಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್, ಚುನಾವಣೆ ಮುಗಿಯುವವರೆಗೆ ಜವಾಬ್ದಾರಿ ವಹಿಸಿಕೊಂಡ ಮುಖಂಡರು ಆಯಾ ಕ್ಷೇತ್ರ ಬಿಟ್ಟು ಕದಲದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಲಾಯಿತು. ಯಾವುದೇ ರೀತಿಯ ಭಿನ್ನರಾಗಗಳನ್ನು ಬದಿಗೊತ್ತಿ, ಪಕ್ಷ ಟಿಕೆಟ್ ನೀಡಿದ ಅಭ್ಯಥಿಯ ಗೆಲುವಿಗೆ ಶ್ರಮಿಸಬೇಕು.
Related Articles
Advertisement
ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಆಡಳಿತ ಪಕ್ಷವು ನುಡಿದಂತೆ ನಡೆದಿದೆ. ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ. ಇದನ್ನು ಜನರ ಮನೆಗಳಿಗೆ ತಲುಪಿಸಿ, ಅವರ ಮನಸ್ಸು ಗೆಲ್ಲಬೇಕು. ಮೂರೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಪೂರಕ ವಾತಾವರಣವೂ ಇದೆ. ಒಂದೆರಡು ದಿನಗಳಲ್ಲಿ ವಿವಿಧ ತಂಡಗಳನ್ನು ರಚಿಸಿ, ಜವಾಬ್ದಾರಿಗಳನ್ನು ವಹಿಸಲಾಗುವುದು. ಅದರಂತೆ ಎಲ್ಲರೂ ಗೆಲುವಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿಕೆಶಿ ನಿರ್ದೇಶನ ನೀಡಿದರು ಎನ್ನಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಪಕ್ಷದ ತೀರ್ಮಾನ. ಈ ಬಗ್ಗೆ ಅಪಸ್ವರಗಳು ಸಲ್ಲದು ಎಂದ ಉಭಯ ನಾಯಕರು, ಸಭೆಗೆ ಹಾಜರಾಗದ ಸಚಿವರಿಗೂ ಈ ಮಾಹಿತಿ ನೀಡಲಾಗುವುದು. ಶತಾಯಗತಾಯ ಉಪ ಚುನಾವಣೆ ಕ್ಲೀನ್‌ಸ್ವೀಪ್’ ಆಗಬೇಕು ಎಂದು ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಕೆಲವರು ಬಂದಿಲ್ಲಷ್ಟೇ“13 ಜನ ಸಚಿವರು ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಸರಣಿ ರಜೆ ಮತ್ತು ದೀಪಾವಳಿ ಹೊಸ್ತಿಲಲ್ಲಿದೆ. ಅದಕ್ಕೆ ಕೆಲವರು ಬಂದಿರಲಿಲ್ಲ ಅಷ್ಟೇ.”
– ಸಿದ್ದರಾಮಯ್ಯ, ಮುಖ್ಯಮಂತ್ರಿ