Advertisement

ಭಕ್ತಿ ಪರಂಪರೆಯಲ್ಲಿ ಏಕತೆ ಸಾಧ್ಯ: ಡಾ|ಶಿವಪ್ರಕಾಶ್‌

10:56 AM Nov 16, 2017 | |

ಮಹಾನಗರ: ನಮ್ಮ ದೇಶದಲ್ಲಿರುವ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳಲ್ಲಿ ವೈವಿಧ್ಯಗಳಿದೆ. ಆದರೆ ಅದರಲ್ಲಿ ಏಕತೆ ಕಾಣಲು ಸಫಲರಾಗಿಲ್ಲ. ದೇಶದಲ್ಲಿ ಭಕ್ತಿ ಪರಂಪರೆಯಲ್ಲಿ ಮಾತ್ರ ಏಕತೆ ಸಾಧ್ಯವಾಗಿದೆ ಎಂದು ಹೊಸದಿಲ್ಲಿಯ ಜವಾಹರಲಾಲ್‌ ನೆಹರೂ ವಿವಿಯ ಕಲೆ ಮತ್ತು ಸೌಂದರ್ಯ ವಿಭಾಗದ ಪ್ರೊಫೆಸರ್‌ ಡಾ| ಎಚ್‌.ಎಸ್‌. ಶಿವಪ್ರಕಾಶ್‌ ಹೇಳಿದರು.

Advertisement

ಮಂಗಳೂರು ವಿವಿ ಕನದಾಸ ಸಂಶೋಧನ ಕೇಂದ್ರದ ಆಶ್ರಯದಲ್ಲಿ ವಿವಿಯ ಒಳಾಂಗಣ ಸಭಾಂಗಣದಲ್ಲಿ ಬುಧವಾರ ಕನಕ ಜಯಂತಿ ಪ್ರಯುಕ್ತ ಕನಕ ತಣ್ತೀಚಿಂತನ ಮತ್ತು ಕನಕಗಂಗೋತ್ರಿ ಕಾರ್ಯಕ್ರಮದ ಭಕ್ತಿ ಪರಂಪರೆಯ ಲೋಕಯಾನ ಮತ್ತು ಕನಕದಾಸರು, ಸಮಕಾಲೀನ ಸಂವಾದ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

ಈವರೆಗೆ ಭಕ್ತಿ ಪರಂಪರೆಯ ಅಧ್ಯಯನಗಳು ಕೇವಲ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಹರಿಸಿವೆ. ಆದರೆ ಕಾವ್ಯ, ಸಂಗೀತಕ್ಕೆ ಸೂಕ್ತ ಆದ್ಯತೆ ಸಿಕ್ಕಿಲ್ಲ. ಈ ಬಗ್ಗೆಯೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಭಕ್ತಿ ಪರಂಪರೆಯಲ್ಲಿ ಪುರುಷ ಕೇಂದ್ರಿತ ಮೌಲ್ಯಗಳ ಬದಲು ಸ್ತ್ರೀವಾದ ತಣ್ತೀಗಳಿರುವ ಮೌಲ್ಯಗಳು ಬಿಂಬಿತವಾಗುತ್ತವೆ. ಇದು ಸಾಂಸ್ಕೃತಿಕ ಅನನ್ಯತೆಯೂ ಹೌದು ಎಂದರು. 

ಅಲ್ಲಮ ಪ್ರಭು ಅವರು ವಚನದ ಮೂಲಕ ತೋರಿಕೆಯ ಭಕ್ತಿಯನ್ನು ಅಂದೇ ಖಂಡಿಸಿದ್ದರು. ಆದರೆ ಕೆಲವೊಂದು ಭಕ್ತಿ ಪಂಥಗಳು ಅಸಹ್ಯವಾಗಿ ಹುಟ್ಟಿಕೊಳ್ಳುತ್ತಿವೆ. ಭಕ್ತಿ ಎನ್ನುವುದು ಸ್ವತಂತ್ರವಾದ ಅಲೆಯಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಭಕ್ತಿ ಪರಂಪರೆಯ ಬಗ್ಗೆ ಇಂದಿನ ಕಾಲಘಟ್ಟದಲ್ಲಿ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಅಧ್ಯಯನಗಳು ನಡೆಯಬೇಕಿದೆ ಎಂದು ಅವರು ಹೇಳಿದರು.

Advertisement

ಕುಲಪತಿ ಪ್ರೊ| ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಸಹಿತ ದೇಶದ ಸಂತ ಕವಿಗಳ ಕಾವ್ಯ, ಸಾಹಿತ್ಯದ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಮ್ಮ ನಾಡಿನ ಸಾಂಸ್ಕೃತಿಕ ಏಕತೆ ಹಾಗೂ ಅನನ್ಯತೆ ಬಗ್ಗೆ ಹೆಚ್ಚು ಅಧ್ಯಯನಗಳ ಮೂಲಕ ಮುನ್ನಡೆಯಬೇಕಿದೆ ಎಂದರು.

ವಿವಿ ಕನಕದಾಸ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ| ಬಿ. ಶಿವರಾಮ ಶೆಟ್ಟಿ ಸ್ವಾಗತಿಸಿದರು. ಸಂಶೋಧನ ವಿದ್ಯಾರ್ಥಿ ಶಿವರಾಜ್‌ ನಿರೂಪಿಸಿದರು. ಸಂಶೋಧನ ವಿದ್ಯಾರ್ಥಿನಿ ಶ್ರೀದೇವಿ ಕಲ್ಲಡ್ಕ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನಕ ಗಂಗೋತ್ರಿ ಕೀರ್ತನ ಗಾಯನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next