Advertisement

ಅಮೆರಿಕ ಮಧ್ಯಸ್ಥಿಕೆ: ಇಸ್ರೇಲ್‌-UAE ಮೊದಲ ವಿಮಾನ ಹಾರಾಟ

08:40 PM Sep 01, 2020 | Karthik A |

ಟೆಲ್‌ಅವಿವ್‌: ಇಸ್ರೇಲ್‌ ಮತ್ತು ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ನಡುವೆ ಮೊಟ್ಟ ಮೊದಲ ವಾಣಿಜ್ಯ ಉದ್ದೇಶದ ವಿಮಾನ ಹಾರಾಟ ಸೋಮವಾರ ಆರಂಭವಾಯಿತು.

Advertisement

ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನ ಬೆನ್‌ ಗುರಿಯಾನ್‌ ವಿಮಾನನಿಲ್ದಾಣದಿಂದ ಈ ವಿಮಾನ ಅಬು ಧಾಬಿಯತ್ತ ಹಾರಿತು.
ಅಮೆರಿಕ ಮಧ್ಯಸ್ಥಿಕೆಯ ಪರಿಣಾಮ ಉಭಯ ದೇಶಗಳ ನಡುವೆ ಸಂಧಾನ ಯಶಸ್ವಿಯಾಯಿತು.

ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡುವುದಾಗಿ ಎರಡೂ ದೇಶಗಳು ಆಗಸ್ಟ್‌ 13ರಂದು ಪ್ರಕಟಿಸಿದವು. ಈ ಬೆಳವಣಿಗೆಯ ಬೆನ್ನಲ್ಲೇ ಐತಿಹಾಸಿಕ ವಿಮಾನ ಹಾರಾಟ ಆರಂಭಗೊಂಡಿತು.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆರ್‌ ಬೆನ್‌ ಶಬ್ಬತ್‌ ನೇತೃತ್ವದ ತಂಡ, ಅಮೆರಿಕ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌ ಅವರ ಸಲಹೆಗಾರ ಮತ್ತು ಅಳಿಯ ಜರೇಡ್‌ ಕುಶ್ನರ್‌ ನೇತೃತ್ವದ ತಂಡ ಹಾಗೂ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರಿಯಾನ್‌ ಸೇರಿದಂತೆ ಉನ್ನತ ಅಧಿಕಾರಿಗಳು ಈ ವಿಮಾನದಲ್ಲಿ ಪ್ರಯಾಣಿಸಿದರು.

ಈಜಿಫ್ಟ್‌ ಮತ್ತು ಜೋರ್ಡಾನ್‌ ನಂತರ ಇಸ್ರೇಲ್‌ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿದ ಮೂರನೇ ಅರಬ್‌ ದೇಶ ಯುಎಇ ಆಗಿದೆ.
ಪ್ರವಾಸೋದ್ಯಮ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತೂಂದು ಮಜಲಿಗೆ ಒಯ್ಯವುದು ಸರಕಾರದ ಆಶಯವಾಗಿದೆ.

Advertisement

ಸೌದಿ ಅರೇಬಿಯಾ ಸಹ ತನ್ನ ವಾಯುಪ್ರದೇಶದ ಮೂಲಕ ಇಸ್ರೇಲ್‌ ವಿಮಾನ ಹಾರಾಟ ನಡೆಸಲು ಅನುಮತಿ ನೀಡಿದೆ. ಅದರಲ್ಲೂ ಅಮೆರಿಕ ಈ ಸಂಬಂಧ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್‌ನ ಚಾನೆಲ್‌ 12 ಸುದ್ದಿಸಂಸ್ಥೆ ವರದಿ ಮಾಡಿದೆ.

ಟೆಲ್‌ ಅವಿವ್‌ ಮತ್ತು ನವದೆಹಲಿ ನಡುವಿನ ವಿಮಾನ ಸಹ ಸೌದಿ ಅರೇಬಿಯಾ ವಾಯುಪ್ರದೇಶ ಮೂಲಕವೇ ಹಾರಾಟ ನಡೆಸುತ್ತಿದೆ. ಆದರೆ, ಇಸ್ರೇಲ್‌ ಮೂಲದ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next