Advertisement

ಭಾರತದಿಂದ ಔಷಧ ಕೋರಿದ ಅಮೆರಿಕ

04:02 PM Apr 06, 2020 | Hari Prasad |

ಕೋವಿಡ್ 19 ವೈರಸ್ ಮೇಲೆ ಯುದ್ಧ ಸಾರಲು ಅಮೆರಿಕದ ಬತ್ತಳಿಕೆಯಲ್ಲಿ ಅಸ್ತ್ರಗಳೇ ಉಳಿದಿಲ್ಲ. ಬೇರೆ ದಾರಿ ಇಲ್ಲದೆ ಇದೀಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದಿಂದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧವನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ.

Advertisement

ಹೈಡ್ರೋಕ್ಸಿಕ್ಲೋರೋಕ್ವಿನ್‌ ಎನ್ನುವುದು ಮಲೇರಿಯಾಕ್ಕೆ ನೀಡಲಾಗುವ ಔಷಧಿ. ಆದರೆ, ಈಗ ತಾತ್ಕಾಲಿಕವಾಗಿ ಕೋವಿಡ್ 19 ವೈರಸ್ ನಿಯಂತ್ರಣಕ್ಕೆ, ಸೋಂಕಿತನಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನೇ ನೀಡಲಾಗುತ್ತಿದೆ. ಇದು ತಕ್ಕಮಟ್ಟಿಗೆ ಯಶಸ್ಸು ಕೂಡ ಕಂಡಿದೆ. ಇತ್ತೀಚೆಗೆ ಭಾರತ, ಅಮೆರಿಕಕ್ಕೆ ಈ ಔಷಧ ರಫ್ತನ್ನು ನಿಲ್ಲಿಸಿತ್ತು. ಈಗ ಸ್ವತಃ ಟ್ರಂಪ್‌ ಅವರೇ, ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ಕೂಡಲೇ ಕಳಿಸಿಕೊಡುವ ಬಗ್ಗೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್ 19 ಮಹಾಮಾರಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನಗಳು ಯಶಸ್ಸು ಕಾಣುತ್ತಿಲ್ಲ. ಸದ್ಯ ನಮಗೆ ಹೈಡ್ರೋಕ್ಸಿ ಕ್ಲೋರೋಕ್ವಿನ್‌ ಒಂದೇ ದಾರಿ. ಈ ಬಗ್ಗೆ ವೈದ್ಯರಲ್ಲಿಯೂ ಚರ್ಚಿಸಿದ್ದೇನೆ. ಭಾರತದ ಬಳಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧ ಸಂಗ್ರಹ ಸಾಕಷ್ಟಿದೆ. ಭಾರತದಿಂದ ಮಾನವೀಯ ನೆರವನ್ನು ಬಯಸಿದ್ದೇವೆ’ ಎಂದಿದ್ದಾರೆ. ಜತೆಗೆ, ಆರೋಗ್ಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಯೋಗ ಮತ್ತು ಆಯುರ್ವೇದವು ಜನರ ಶಾರೀರಿಕ ಮತ್ತು ಮಾನಸಿಕ ಕ್ಷೇಮಾಭಿವೃದ್ಧಿಗೆ ಹೇಗೆ ಉಪಕಾರಿ ಎಂಬ ಕುರಿತೂ ಚರ್ಚಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next