Advertisement

ಭಾರತೀಯ ಟೆಕ್ಕಿಗಳಿಗೆ ವೀಸಾ ಆಘಾತ

02:46 AM Jun 24, 2020 | Hari Prasad |

ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆ ಇರುವ ಎಚ್‌-1ಬಿ ಸಹಿತ ಹಲವು ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದ ವರೆಗೆ ರದ್ದುಪಡಿಸಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಆದೇಶಿಸಿದ್ದಾರೆ.

Advertisement

ಇದು ಭಾರತೀಯ ಐಟಿ ಉದ್ಯಮಕ್ಕೆ ಆಘಾತ ನೀಡಿದೆ. ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಎದುರಾಗಿದೆ.

ಹೀಗಾಗಿ ವಲಸಿಗರನ್ನು ತಾತ್ಕಾಲಿಕವಾಗಿ ತಡೆಯುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಜೂನ್‌ 24ರಿಂದ ಈ ಆದೇಶ ಜಾರಿಗೆ ಬರಲಿದ್ದು, 2020ರ ಡಿಸೆಂಬರ್‌ 31ರವರೆಗೆ ಜಾರಿಯಲ್ಲಿರುತ್ತದೆ.

ಎಚ್‌-1ಬಿ, ಎಚ್‌-2ಬಿ, ಜೆ ಮತ್ತು ಎಲ್‌ ಸಹಿತ ಹಲವಾರು ಜನಪ್ರಿಯ ವೀಸಾಗಳನ್ನು ಪ್ರಸಕ್ತ ವರ್ಷದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ.

ಭಾರತದಲ್ಲಿ ನಿರುದ್ಯೋಗ?
ಅಧ್ಯಕ್ಷ ಟ್ರಂಪ್‌ ಅವರ ಈ ನಿರ್ಧಾರ ಭಾರತದಿಂದ ಉದ್ಯೋಗಕ್ಕಾಗಿ ಈ ವೀಸಾದಡಿ ಅಮೆರಿಕಕ್ಕೆ ತೆರಳುತ್ತಿದ್ದ ಟೆಕ್ಕಿಗಳಿಗೆ ಶಾಕ್‌ ನೀಡಿದೆ. ಅಮೆರಿಕ ಪ್ರತಿ ವರ್ಷ ನೀಡುವ ಎಚ್‌-1ಬಿ ವೀಸಾಗಳ ಪೈಕಿ ಶೇ.70ರಷ್ಟು ಭಾರತೀಯರ ಪಾಲಾಗುತ್ತವೆ. ಹೆಚ್ಚಿನವರು ಐಟಿ ಉದ್ಯೋಗಿಗಳು. ಇನ್ನು ಇದರಿಂದಾಗಿ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಇದು ಟಿಸಿಎಸ್‌, ಇನ್ಫೋಸಿಸ್‌ ಸೇರಿದಂತೆ ಭಾರತೀಯ ಐಟಿ ಕಂಪೆನಿಗಳ ಮೇಲೂ ಪರಿಣಾಮ ಬೀರಲಿದೆ. ಇನ್ನವರು ಹೆಚ್ಚಿನ ಸಂಬಳ ನೀಡಿ ಅಮೆರಿಕದ ವೃತ್ತಿಪರರನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2020-21ರಲ್ಲಿ ಒಟ್ಟು 2.75 ಲಕ್ಷ ಎಚ್‌-1ಬಿ ಅರ್ಜಿಗಳ ಪೈಕಿ 1.8 ಲಕ್ಷಕ್ಕೂ ಹೆಚ್ಚು ಭಾರತದಿಂದ ಬಂದಿವೆ ಎಂದು ಮೂಲಗಳು ತಿಳಿಸಿವೆ.

ವಲಸಿಗರು ಅಮೆರಿಕವನ್ನು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನನ್ನಾಗಿ ಬೆಳೆಸಿದ್ದಾರೆ. ಈ ಆದೇಶದಿಂದಾಗಿ ಬಹಳ ಬೇಸರವಾಗಿದೆ. ನಾವು ವಿದೇಶಗಳಿಂದ ಆಗಮಿಸಿದವರ ಪರವಾಗಿ ನಿಲ್ಲಲಿದ್ದೇವೆ.
– ಸುಂದರ್‌ ಪಿಚೈ, ಗೂಗಲ್‌ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next