Advertisement

ಜಗತ್ತಿನ 54 ಬಡರಾಷ್ಟ್ರಗಳಿಗೆ ಉಂಟಾಗಲಿದೆ ಸಾಲ ಬಿಕ್ಕಟ್ಟು

07:30 PM Oct 11, 2022 | Team Udayavani |

ಲಂಡನ್‌: ಜಗತ್ತಿನ ಅತ್ಯಂತ 54 ಬಡರಾಷ್ಟ್ರಗಳಿಗೆ ಮುಂದಿನ ದಿನಗಳಲ್ಲಿ ಗಂಭೀರ ಸಾಲಬಿಕ್ಕಟ್ಟು ಎದುರಾಗಲಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ವಿಭಾಗ (ಯುಎನ್‌ಡಿಪಿ) ಮುನ್ನೆಚ್ಚರಿಕೆ ನೀಡಿದೆ.

Advertisement

ಮಂಗಳವಾರ ಬಿಡುಗಡೆಯಾದ ಹೊಸ ವರದಿ ಪ್ರಕಾರ “ಈಗಾಗಲೇ 54 ರಾಷ್ಟ್ರಗಳ ಬಿಕ್ಕಟ್ಟು ಕೈಮೀರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಆತಂಕ ಇದೆ.

ಹೀಗಾಗಿ, ಆ ರಾಷ್ಟ್ರಗಳಲ್ಲಿನ ಬಡವರ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾದ ಪ್ರತಿಕೂಲ ಪರಿಸ್ಥಿತಿಯ ಜತೆಗೆ ಗಂಭೀರವಾಗಿರುವ ಸಾಲದ ಬಿಕ್ಕಟ್ಟು ಕೂಡ ಎದುರಾಗಿವೆ’ ಎಂದು ಉಲ್ಲೇಖಿಸಲಾಗಿದೆ.

ಹಾಲಿ ವರ್ಷಾಂತ್ಯದಲ್ಲಿ ಮತ್ತು ಮುಂದಿನ ವರ್ಷದಲ್ಲಿ ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ವರದಿಗಳ ನಡುವೆಯೇ ಈ ಆಘಾತಕಾರಿ ವರದಿ ಬಹಿರಂಗವಾಗಿದೆ. ಭಾರತದ ನೆರೆಯ ದೇಶಗಳಾಗಿರುವ ಪಾಕಿಸ್ತಾನ, ಶ್ರೀಲಂಕಾ, ಇಥಿಯೋಪಿಯಾ, ಛಾಡ್‌, ಜಾಂಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಈ ಆತಂಕದ ಸುಳಿಗೆ ಸಿಲುಕಿವೆ.

Advertisement

Udayavani is now on Telegram. Click here to join our channel and stay updated with the latest news.

Next