ಲಂಡನ್: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಜಾರಿಗೊಳ್ಳುವ ಪ್ರಕ್ರಿಯೆ ನಡುವೆಯೇ ಹೊಸ ಆತಂಕ ಎದುರಾಗಿದೆ.
Advertisement
ಇತರ ರಾಷ್ಟ್ರಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಕ್ತಾಯದ ಬಳಿಕ ದೇಶದಲ್ಲಿ ವಾಸ್ತವ್ಯ ಹೂಡುವ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಸರಕಾರ ಇರಾದೆ ಹೊಂದಿದೆ. “ಗ್ರಾಜ್ಯುವೇಟ್ ವೀಸಾ’ ಮೂಲಕ ಭಾರತ ಸಹಿತ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಶಿಕ್ಷಣದ ಅವಧಿ ಮುಕ್ತಾಯದ ಬಳಿಕ ಉದ್ಯೋಗ ಪಡೆದು 6 ತಿಂಗಳು ಕೆಲಸ ಮಾಡುತ್ತಾರೆ. ಅನಂತರ ಅದನ್ನೇ ಅಲ್ಲಿನ ಪ್ರಜೆಯಾಗಿಸಲು ಬಳಕೆ ಮಾಡುತ್ತಾರೆ ಎನ್ನುವುದು ಸರಕಾರದ ವಾದ.