Advertisement

June11: ಅಂತಾರಾಷ್ಟ್ರೀಯ ಆಟದ ದಿನ: ವಿಶ್ವಸಂಸ್ಥೆಯಿಂದ ಅಂಗೀಕಾರ

12:56 AM Apr 06, 2024 | Team Udayavani |

ಕುಂದಾಪುರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂ.11 ಅನ್ನು ಅಂತಾರಾಷ್ಟ್ರೀಯ ಆಟದ ದಿನವಾಗಿ (ಐಡಿಒಪಿ- ಇಂಟರ್‌ನ್ಯಾಶನಲ್‌ ಡೇ ಫಾರ್‌ ಪ್ಲೇ) ಅಂಗೀಕರಿಸಿದೆ. ಈ ವರ್ಷದಿಂದಲೇ ಇದು ಅನುಷ್ಠಾನಕ್ಕೆ ಬರಲಿದ್ದು ಜಾಗತಿಕ ಮಟ್ಟದಲ್ಲಿ ಉದ್ಘಾಟನೆಯಾಗಲಿದೆ. ವಿಶ್ವಾದ್ಯಂತ ಆ ದಿನವನ್ನು ಮಕ್ಕಳು ಕ್ರೀಡಾದಿನವಾಗಿ ಸಂಭ್ರಮಿಸಲಿದ್ದಾರೆ.

Advertisement

ಸಮೀಕ್ಷೆ
ಮಕ್ಕಳ ಆಟವಾಡುವ ಹಕ್ಕನ್ನು ರಕ್ಷಿಸಲು ಅಂತಾರಾಷ್ಟ್ರೀಯ ಆಟದ ದಿನವಾಗಿ ಒಂದು ದಿನವನ್ನು ಗುರುತಿಸುವಂತೆ ವಿಶ್ವಸಂಸ್ಥೆಗೆ ಮಕ್ಕಳೇ ಮನವಿ ಮಾಡಿದ್ದರು. 36 ದೇಶಗಳಲ್ಲಿ 25,000ಕ್ಕೂ ಹೆಚ್ಚು ಮಕ್ಕಳನ್ನು ಸಮೀಕ್ಷೆ ಮಾಡಲಾಗಿತ್ತು. ದಿ ಕನ್ಸರ್ನ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಲ್ಯುಸಿ) ಸಂಸ್ಥೆ ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ ಮಕ್ಕಳ ಸಂಘ ಹಾಗೂ ಭೀಮಸಂಘದ ಸುಮಾರು 460ಕ್ಕೂ ಹೆಚ್ಚು ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ಎಲ್ಲ ಮಕ್ಕಳ ಅಭಿಪ್ರಾಯ, ಒತ್ತಾಸೆ, ಸಲಹೆ ಹಾಗೂ ಹಕ್ಕೊತ್ತಾಯಗಳನ್ನು “ಮಕ್ಕಳು ಮತ್ತು ಯುವಜನರ ಹಕ್ಕೊತ್ತಾಯ’ ಎಂದು ಮಂಡಿಸಲಾಗಿತ್ತು.

ಉಡುಪಿ ಜಿಲ್ಲೆಯವರು: ಈ ಎಲ್ಲ ಮಕ್ಕಳ ಸಂಘ ಹಾಗೂ ಭೀಮಸಂಘದ ಪ್ರತಿನಿಧಿ ಗಳಾಗಿ ಅಂತಾರಾಷ್ಟ್ರೀಯ ಮಟ್ಟದ “ಮಕ್ಕಳು ಮತ್ತು ಯುವ ಜನರ ಸಲಹಾ ಗುಂಪು’ ಸದಸ್ಯರಾಗಿ ಭಾರತವನ್ನು 5 ಮಕ್ಕಳು ಪ್ರತಿನಿಧಿಸಿದ್ದರು. ಬೈಂದೂರಿನ ಶ್ರೀರûಾ ನಾಡ ಮತ್ತು ಕುಂದಾಪುರದ ಅಂಜಲಿ ಹಾಲಾಡಿ ಮನವಿಯನ್ನು ಅನಾವರಣಗೊಳಿಸುವ ಮಕ್ಕಳ ಮತ್ತು ಯುವಜನರ ಸಮಿತಿಯ ಸದಸ್ಯರೂ ಆಗಿದ್ದರು. ಇವರ ಜತೆಗೆ ನಿಶ್ಮಿತಾ ಉಳ್ಳೂರು 74, ತನುಷ್‌ ನಾಡ, ಮಹೇಶ್ವರಿ ವಿಜಯನಗರ ಅವರು “ಅಂತಾರಾಷ್ಟ್ರೀಯ ಮಟ್ಟದ ಮಕ್ಕಳು ಮತ್ತು ಯುವ ಜನರ ಸಲಹಾ ಗುಂಪಿನ’ ಸದಸ್ಯರನ್ನಾಗಿ ನಾಮನಿರ್ದೇಶನವಾಗಿದ್ದರು.

ಕ್ರೀಡೆಯ ಮಹತ್ವ
ಮಕ್ಕಳ ಕಲಿಕೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದು. ಸೃಜನಶೀಲತೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲಗಳನ್ನು ಬೆಳೆಸುತ್ತದೆ. ನಮ್ಮ ಮಕ್ಕಳ ಮನವಿಗೆ ವಿಶ್ವ ಸಂಸ್ಥೆ ಬೆಲೆ ನೀಡಿದ್ದು ಅತ್ಯಂತ ಸಂತಸದ ಕ್ಷಣ ಎಂದು ದಿ ಕನ್ಸರ್ನ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ಸಂಯೋಜಕರಾದ ಸುರೇಶ್‌ ಎಸ್‌. ಗೌಡ, ಕೃಪಾ ಎಂ.ಎಂ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next