Advertisement

H-1B ವೀಸಾ: ಆರಂಭಿಕ ನೋಂದಣಿ 22ರಂದು ಪೂರ್ಣ

09:59 PM Mar 19, 2024 | Team Udayavani |

ವಾಷಿಂಗ್ಟನ್‌: 2025ರ ವಿತ್ತೀಯ ವರ್ಷದ ಎಚ್‌-1ಬಿ ವೀಸಾಗಳ ಆರಂಭಿಕ ನೋಂದಣಿ ಅವಧಿ ಮಾ.22ರಂದು ಮುಗಿಯಲಿದೆ ಎಂದು ಅಮೆರಿಕದ ಫೆಡರಲ್‌ ಏಜೆನ್ಸಿ ತಿಳಿಸಿದೆ.

Advertisement

ಮಾ.22ರ ರಾತ್ರಿ 9.30(ಭಾರತೀಯ ಕಾಲಮಾನ)ರೊಳಗಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದೂ ಏಜೆನ್ಸಿ ಮಾಹಿತಿ ನೀಡಿದೆ. ಎಚ್‌-1ಬಿ ವೀಸಾ ಎನ್ನುವುದು ವಲಸೆಯೇತರ ವೀಸಾವಾಗಿದೆ.

ತಾಂತ್ರಿಕ ಪರಿಣತಿ ಅಗತ್ಯವಿರುವ ಉದ್ಯೋಗಗಳಲ್ಲಿ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಇದು ಅನುವು ಮಾಡಿಕೊಡುತ್ತದೆ. ಭಾರತ, ಚೀನಾದಂಥ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದೇ ವೀಸಾವನ್ನು ಅವಲಂಬಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next