Advertisement

ಕೋವಿಡ್ 19 ವೈರಸ್ ಪ್ರತಾಪ: ಜೂನ್‌ ವರೆಗೆ ಬ್ರಿಟನ್‌ ಲಾಕ್‌ಡೌನ್‌?

02:18 AM Mar 30, 2020 | Hari Prasad |

ಕೋವಿಡ್ 19 ವೈರಸ್ ನ ಕೆಟ್ಟ ಪರಿಣಾಮಗಳನ್ನು ತಪ್ಪಿಸುವ ಸಲುವಾಗಿ ಬ್ರಿಟನ್‌ ಜೂನ್‌ವರೆಗೂ ಲಾಕ್‌ಡೌನ್‌ ಆಗುವ ಸಾಧ್ಯತೆ ಇದೆ. ಈ ಕುರಿತು ಸರಕಾರದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರ ಸಲಹೆಗಾರ ಪ್ರೊಫೆಸರ್‌ ನೀಲ್‌ ಫ‌ರ್ಗುಸನ್‌ ಸ್ಪಷ್ಟಪಡಿಸಿದ್ದಾರೆ.

Advertisement

ಕೋವಿಡ್ 19 ವೈರಸ್ ಹರಡುವಿಕೆಯನ್ನು ತಪ್ಪಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೊಬರ್‌ವರೆಗೆ ಸಾಮಾಜಿಕ ದೂರವನ್ನು ಅಭ್ಯಾಸ ಮಾಡಲು ಯುಕೆ ಸುಮಾರು ಮೂರು ತಿಂಗಳ ಕಾಲ ಮನೆಯಲ್ಲೇ ಇರಬೇಕಾದಂತಹ ಸ್ಥಿತಿ ಇದೆ.

ಸದ್ಯಕ್ಕೆ ಬ್ರಿಟನ್‌ನಲ್ಲಿ ಕೋವಿಡ್ 19 ವೈರಸ್ ತಾಂಡವವಾಡುತ್ತಿದೆ. ಹಾಗಾಗಿ, ಮಾರಣಾಂತಿಕ ವೈರಸ್‌ ಅನ್ನು ಸಂಪೂರ್ಣ ತಡೆಗಟ್ಟಲು ಜೂನ್‌ವರೆಗೂ ಬ್ರಿಟನ್‌ ಲಾಕ್‌ಡೌನ್‌ನಲ್ಲಿರಬೇಕು. ಇದರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ ಎಂದು ನೀಲ್‌ ಎಚ್ಚರಿಸಿದ್ದಾರೆ.

ಹಿರಿಯ ಮಹಿಳೆ ಸಾವು: ಎರಡು ವಿಶ್ವ ಯುದ್ದಗಳು ಮತ್ತು 1918ರಲ್ಲಿ ಸಾಂಕ್ರಾಮಿಕ ರೋಗವಾಗಿ ಎಲ್ಲೆಡೆ ಹರಡಿದ್ದ ಸ್ಪಾನಿಶ್‌ ಫ್ಲ್ಯೂ ಎಲ್ಲದರಿಂದಲೂ ಬಚಾವಾಗಿ ಬದುಕುಳಿದಿದ್ದ ಇಂಗ್ಲೆಂಡಿನ 108 ವರ್ಷ ವಯಸ್ಸಿನ ಹಿರಿಯ ಮಹಿಳೆ ಈಗ ಕೋವಿಡ್ 19 ವೈರಸ್ ಗೆ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next