Advertisement
ಬಿಜೆಪಿಯ ನ್ಯೂನ್ಯತೆಗಳನ್ನು ಉಲ್ಲೇಖಿಸಿರುವ ಪತ್ರದಲ್ಲಿ ಮಮತಾ, “ಬಿಜೆಪಿಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯ ವಿರುದ್ಧ ಏಕೀಕೃತ ಮತ್ತು ಪರಿಣಾಮಕಾರಿ ಹೋರಾಟ” ಮತ್ತು “ಭಾರತದ ಜನರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ಪ್ರಸ್ತುತಪಡಿಸುವ” ಸಮಯ ಬಂದಿದೆ ಎಂದು ಬರೆದಿದ್ದಾರೆ.
Related Articles
Advertisement
ರಾಜ್ಯಪಾಲರ ಕಚೇರಿಯ “ದುರುಪಯೋಗ”, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳು, ರಾಜ್ಯಗಳ ಹಣವನ್ನು “ತಡೆಹಿಡಿಯುವುದು”, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಮತ್ತು ಯೋಜನಾ ಆಯೋಗದಂತಹ ಸಂಸ್ಥೆಗಳನ್ನು ವಿಸರ್ಜಿಸುವುದು, ಬಿಜೆಪಿಯೇತರರನ್ನು ಕೆಳಗಿಳಿಸಲು ಹಣದ ಶಕ್ತಿಯನ್ನು ಬಳಸುವುದು, ಖಾಸಗೀಕರಣ ಇವೇ ಹೆಚ್ಚಾಗಿವೆ ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಓದಿ : ಡಿ.ಕೆ. ಶಿವಕುಮಾರ್ ವಿರುದ್ಧ ನಾಯಕ ಸಮಿತಿ ಪ್ರತಿಭಟನೆ
ನಾವೆಲ್ಲರೂ ಒಂದಾಗಿ ಬಿಜೆಪಿ ವಿರುದ್ಧ ನಿಲ್ಲುವ ಸರಿಯಾದ ಸಮಯ ಬಂದಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ಆಕ್ರಮಣಶೀಲ ಧೋರಣೆಯನ್ನು ಮೆರೆಯುತ್ತಿರುವ ಬಿಜೆಪಿಯ ವಿರುದ್ಧ ನಾವೆಲ್ಲರೂ ಒಂದಾಗಬೇಕಾಗಿದೆ. ನಾನು ನಿಮ್ಮೊಂದಿಗೆ ಇದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಿದ್ಧಳಿದ್ದೇನೆ. ಬಿಜೆಪಿ ವಿರುದ್ಧ ನಾವೆಲ್ಲರೂ ಸಮಾನ ಮನಸ್ಥಿತಿಯಿಂದ ಹೋರಾಟ ಮಾಡಲೇಬೇಕು ಎಂದು ಪತ್ರದಲ್ಲಿ ಮಮತಾ ಬರೆದಿದ್ದಾರೆ.
ಸೋನಿಯಾ ಗಾಂಧಿಯವರಲ್ಲದೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ವೈ ಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ಸಮಾಜವಾದಿ ಪಕ್ಷ ರಾಷ್ಟ್ರೀಯ ಜನ ದಳದ ತೇಜಸ್ವಿ ಯಾದವ್, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸಿಪಿಐಎಂಎಲ್ ನ ದೀಪಂಕರ್ ಭಟ್ಟಾಚಾರ್ಯ ಅವರಿಗೆ ತಮ್ಮ ಪತ್ರವನ್ನು ಮಮತಾ ಕಳುಹಿಸಿದ್ದಾರೆ.