Advertisement

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವಿಶಿಷ್ಟ ರೋಬೋ ಆವಿಷ್ಕಾರ

11:57 AM Oct 29, 2017 | Team Udayavani |

ಬೆಂಗಳೂರು: ನಗರದ ಸಪ್ತಗಿರಿ ಇಂಜಿನಿಯರಿಂಗ್‌ ಕಾಲೇಜಿನ ಮಹಿಳಾ ವಿದ್ಯಾರ್ಥಿನಿಯರು ಹೊಸ ಯಶೋಗಾಥೆ ಬರೆದಿದ್ದಾರೆ. ಆಸ್ಪತ್ರೆಗಳಲ್ಲಿ ಕೆಲಸಗಾರರ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನವಾಗಿ ವಿಶಿಷ್ಟ ರೋಬೋ ಯಂತ್ರ ವನ್ನು ಅಭಿವೃದ್ಧಿಪಡಿಸಿ ತಾಂತ್ರಿಕ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.

Advertisement

ಜೇನು ಗೂಡಿನ ಪರಿಕಲ್ಪನೆಯಲ್ಲಿ ರೋಬೋಅನ್ನು ವಿನ್ಯಾಸ ಪಡಿಸಿದ್ದು ರೋಗಿಗಳಿರುವ ಸ್ಥಳಕ್ಕೆ ತೆರಳಿ ಔಷಧಿಗಳನ್ನು ನೀಡುವುದಲ್ಲದೆ.ವಾರ್ಡ್‌ ನಲ್ಲಿ ನೀರು ಬಿದ್ದರೆ ಅಲ್ಲವೆ ಅಗ್ನಿಅನಾಹುತ ಸಂಭವಿಸಿದರೆ ಈ ಬಗ್ಗೆ ಸಂದೇಶ ನೀಡಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗಳಾದ ಅಭಿಲಾಷ್‌,ನಿಶಾ.ಕೆ.ಮೆಹ್ತಾ ಮತ್ತು ಲಾವಣ್ಯ ನೂತನ ರೋಬೋ ಯಂತ್ರದ ಅಭಿವೃದ್ದಿ ಮತ್ತು ಅದರ ಕಾರ್ಯಸಾಧನೆಯ ಬಗ್ಗೆ ಕಿರುಮಾಹಿತಿ ನೀಡಿದರು. ಜೇನುಗೂಡಿನ ಪರಿಕಲ್ಪನೆಯನ್ನು ತಲೆಯಲ್ಲಿಟ್ಟುಕೊಂಡು ಈ ರೋಬೋ ವಿನ್ಯಾಸ ಪಡಿಸಲಾಗಿದೆ.

ಆಸ್ಪತ್ರೆಯಲ್ಲಿ ಇದನ್ನು ಬಳಕೆ ಮಾಡಿದರೆ ರೋಗಿಗಳಿರುವ ಕೇಂದ್ರಗಳಿಗೆ ತೆರಳಿ,ಈ ರೋಬೋಗಳು ನೀರಿನ ಬಾಟಲ್‌,ದಿನಪತ್ರಿಕೆ, ಮಾತ್ರೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ರೋಗಿಗಳಿಗೆ ನೀಡಲಿವೆ.ಅಲ್ಲದೆ ರೋಗಿಗಳ‌ ವಾರ್ಡ್‌ನಲ್ಲಿ ನೀರು ಚೆಲ್ಲಿರಲಿ ಅಥವಾ ಚಿಕ್ಕ ಬೆಂಕಿ ಅವಘಡಗಳು ಸಂಭ ವಿಸಿದ್ದರೂ ಅವುಗಳ ಬಗ್ಗೆ ಸಂದೇಶವನ್ನು ರವಾನಿಸಲಿವೆ ಎಂದರು.

ಒಟ್ಟು ಮೂರು ರೋಬೋಗಳಲ್ಲಿ ಬಳಕೆ ಮಾಡಲಾಗಿದೆ.ಒಂದು ರೋಬೋ ಕೇಂದ್ರಿಕೃತ ರೋಬೋ ಆಗಿದ್ದು, ಉಳಿದ ಎರದೆರಡು ರೋಬೋಗಳ ಕಾರ್ಯಚಟುವಟಿಕೆಗಳ ಮೇಲೆ ಇದು ನಿಗಾವಹಿಸಿ ಕಾರ್ಯ ನಿರ್ಹಹಿಸಲಿದೆ.ಅಲ್ಲದೆ ಇದು ಎರಡನೇ ವಿಧದ ರೋಬೋ ಯಂತ್ರಗಳು ಮಾಡಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ಮಾಡುತ್ತದೆ.

Advertisement

ಕೇಂದ್ರೀ ಕೃತ ರೋಬೋ ಹೇಳಿದಂತೆ ಉಳಿದೆರಡು ರೋಬೋಗಳು ಇಲ್ಲಿಂದ ಅಲ್ಲಿಗೆ,ಅಲ್ಲಿಂದ ಇಲ್ಲಿಗೆ ಕೆಲಸ ಮಾಡಲಿವೆ. ಒಂದು ದೊಡ್ಡ ರೋಬೋ ಯಂತ್ರ ಏಕಕಾಲದಲ್ಲಿ 100 ಚಿಕ್ಕ ರೋಬೋಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ.ಸುಮಾರು ಅರ್ಧ ಕಿಲೋಮೀಟರ್‌ ದೂರದಲ್ಲಿ ಕುಳಿತು ಕೇಂದ್ರಿಕೃತ ರೋಬೋ ಉಳಿದ ರೋಬೋಗಳ ನ್ನು ನಿಯಂತ್ರಿಸಬಹುದಾಗಿದೆ.

ಕಳೆದ ಒಂದುವರೆ ವರ್ಷದಿಂದಲೂ ಈ ರೋಬೋ ಯಂತ್ರದ ಅಭಿವೃದ್ದಿಯ ಬಗ್ಗೆ ಆಲೋಚನೆ ನಡೆದಿತ್ತು.ಜೇನುಗೂಡಿನ ಪರಿಕಲ್ಪನೆ ಇದರಲ್ಲಿತ್ತು.ರಾಣಿ ಜೇನು ಹೇಗೆ ತನ್ನ ಇತರ ಸಮೂಹವನ್ನು ನಿಯಂತ್ರಣ ಮಾಡುತ್ತದೆಯೋ ಅದೇ ರೀತಿಯಲ್ಲಿ ತಂತ್ರಜ್ಞಾನವನ್ನು ವಿನ್ಯಾಸ ಪಡಿಸಬೇಕೆಂದು ಆಲೋಚಿಸಿ ಈ ಪ್ರಯತ್ನ ಕ್ಕೆ ಮುಂದಾದೆವು.

ಹನ್ನೊಂದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಈ ಯಂತ್ರವನ್ನು ಅಭಿವೃದ್ದಿ ಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಉನ್ನತೀಕರಿಸುವ ಆಲೋಚನೆ ಇದೆ ಎಂದು ರೋಬೋ ಅನ್ವೇಷಣೆಯಲ್ಲಿ ಒಬ್ಬರಾದ ಅಭಿಲಾಷ್‌ ಹೇಳಿದರು. ಆಸ್ಪತ್ರೆಯಲ್ಲಿ ಯಾವುದೇ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದನ್ನು ಕೂಡಲೇ ಗ್ರಹಿಸಿ ಸಂದೇಶವನ್ನು ಇತರ ರೋಬೋಗಳು  ಮುಖ್ಯ ರೋಬೋಗೆ ತಲುಪಿಸು ಗುಣಲಕ್ಷಣ ಈ ರೋಬೋಗಳಿಗಿದೆ.

ಒಂದು ವೇಳೆ ಯಾವುದೇ ನೆಟ್‌ ವರ್ಕ್‌ ಇಲ್ಲದ ಪ್ರದೇಶದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ.ಆದರ ಬಗ್ಗೆಯೂ ಮಾಹಿತಿ ನೀಡುವ ಝೀಬಿ ತಂತ್ರಾಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಈ  ಸಾಧನದ ಮೂಲಕ ನಾವು ನಿಗದಿ ಮಾಡಿದ ಕೇಂದ್ರಕ್ಕೆ ರೋಬೋ ಅಗ್ನಿà ಅವಘಡದ ಬಗ್ಗೆ ಪೂರಕ ಸಂದೇಶ ನೀಡಲಿದೆ ಎಂದು ಮತ್ತೂಬ್ಬ ವಿದ್ಯಾರ್ಥಿನಿ ನಿಶಾ.ಕೆ ಮೇಹ್ತಾ ನುಡಿದರು.

ಕಾಲೇಜಿನ ಅಧ್ಯಾಪಕ ವೃಂದ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಯಂತ್ರವನ್ನು  ಮತ್ತಷ್ಟು ಅಭಿವೃದ್ದಿಪಡಿಸುವ ಮೂಲಕ ಕಟ್ಟಡ ಕುಸಿತ,ಅಗ್ನಿ ಆಕಸ್ಮಿಕ ಸೇರಿದಂತೆ ಯಾವುದೇ ದುರಂತ ಸಂಭವಿಸಿದಾಗ ಮನುಷ್ಯರು ಹೋಗಲು ಸಾಧ್ಯವಾಗದ ಸ್ಥಳಗಳಿಗೆ ಈ ಯಂತ್ರಗಳನ್ನು ಕಳಿಸಿ ಪರಿಸ್ಥಿತಿಯ ಮಾಹಿತಿ ಪಡೆಯುವ ಕಾರ್ಯಕ್ಕೆ ಕೈಹಾಕುವುದಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಲಾವಣ್ಯ ಹೇಳಿದರು.

ತಂತ್ರಜ್ಞಾನದ ಬಗ್ಗೆ ಕುತೂಹಲ ಹೊಂದಿರುವವರು ಶ್ರೀಕಾಂತ ಎನ್‌.ಸಿ.ಮೊಬೈಲ್‌ ಸಂಖ್ಯೆ 8880666613 ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next