ಮುಂಬಯಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಿ ವರ್ಲ್ಡ್ ಆಫ್ ಅಪರ್ಚುನಿಟೀಸ್ ಮತ್ತು ಯೂನಿಯನ್ ಎನ್‌ಎಕ್ಸ್‌ಟಿಯಂತಹ ಸೂಪರ್ ಆ್ಯಪ್ ಪ್ರಾರಂಭಿಸುವುದರೊಂದಿಗೆ ಗ್ರಾಹಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜ್‌ಕಿರಣ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮೊದಲ ಡಿಜಿಟಲ್ ಕಾನ್‌ಕ್ಲೇವ್ ಅನ್ನು ಬುಧವಾರ ಮುಂಬಯಿ ಯಶವಂತ ರಾವ್ ಚವಾಣ್ ಸೆಂಟರ್‌ನಲ್ಲಿ ಆಯೋಜಿ ಸಲಾಯಿತು. ಈ ವೇಳೆ ವ್ಯವಸ್ಥಾಪಕ ನಿರ್ದೇ ಶಕ ಮತ್ತು ಸಿಇಒ ರಾಜ್ ಕಿರಣ್ ರೈ ಅವರು “ಯೂನಿಯನ್ ಸಂಭವ್- ವರ್ಲ್ಡ್ ಆಫ್ ಅಪರ್ಚುನಿಟೀಸ್’ ಅನ್ನು ಅನಾವರಣಗೊಳಿಸಿದರು.
ಭವಿಷ್ಯದಲ್ಲಿ ಗ್ರಾಹಕರಿಗಾಗಿ ಯೂನಿಯನ್ ಎನ್‌ಎಕ್ಸ್‌ಟಿ ಮತ್ತು ಡು ಇಟ್ ಯುವ ರ್‌ಸೆಲ್ಫ್ (ಡಿಐವೈ) ಅನ್ನು ಸೂಪರ್ ಅಪ್ಲಿಕೇಶನ್ ಜಾರಿಗೊಳಿಸುವುದಾಗಿ ಘೋಷಿಸಿದ ಅವರು, ಈ ಡಿಜಿಟಲ್ ಉಪಕ್ರಮಗಳ ಮೂಲಕ ಬ್ಯಾಂಕ್ ವ್ಯವಹಾರಗಳು ಇನ್ನಷ್ಟು ಸಶಕ್ತಗೊಳ್ಳಲಿವೆ ಎಂದರು.
ಗ್ರಾಹಕರನ್ನು ಉತ್ತೇಜಿಸುವ ಪ್ರಾಥಮಿಕ ಉದ್ದೇಶವಾಗಿ ಗ್ರಾಹಕ ಕೇಂದ್ರಿತ ಐದು ಯೋಜನೆಗಳನ್ನು ಮಾಡಿದ್ದು, ಇದರಲ್ಲಿ ಡಿಜಿಟಲ್ ಸಾಲ (ಎಸ್‌ಟಿಪಿ), ಪೂರ್ವ- ಅನುಮೋದಿತ ವೈಯ ಕ್ತಿಕ ಸಾಲ (ಪಿಎಪಿ ಎಲ್), ಪಿಂಚಣಿದಾರರ ಸಾಲ, ಶಿಶು, ಡಿಜಿ ಟಲ್ ಕಾನ್‌ಕ್ಲೇವ್, ಮುದ್ರಾ ಸಾಲಗಳು, ಸ್ವಯಂ ನವೀ ಕರಣ, ಕೃಷಿ ಸಾಲಗಳು (ಕೆಸಿಸಿ)ಸೇರಿವೆ. ಇದಲ್ಲದೆ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ನಲ್ಲಿ ಉತ್ಪನ್ನಗಳು ಮತ್ತು ಸೇವೆಗಳು ಒಳಗೊಂಡಿವೆ. ಒಂದು ವರ್ಷದ ಹಿಂದೆ ಯೂನಿ ಯನ್ ಬ್ಯಾಂಕ್ ಆಫ್ ಇಂಡಿಯಾವು ಸುಗಮ ಮತ್ತು ತೊಂದರೆ ಮುಕ್ತ ಡಿಜಿಟಲ್ ಪ್ರಯಾಣ ಮತ್ತು ಉತ್ತಮ ಗ್ರಾಹಕ ಸೇವೆಗಳನ್ನು ಒದಗಿಸಲು ಡಿಜಿಟ ಲೈಸೇಶನ್ ವರ್ಟಿಕಲ್ ಅನ್ನು ಪ್ರಾರಂಭಿ ಸಿತ್ತು. ಈಗ ಕಾನ್‌ಕ್ಲೇವ್ ಮೂಲಕ ಉತ್ತಮ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸುವ ಕಡೆಗೆ ಹೆಜ್ಜೆಯಿಡುತ್ತಿದೆ.
ಕಾರ್ಯಕ್ರಮದ ವೇಳೆ ಬ್ಯಾಂಕಿನ ಮುಂಬ ರುವ ಡಿಜಿಟಲ್ ಯೋಜನೆ ಗಳ ಕಿರುನೋಟವನ್ನು ಪ್ರಸ್ತುತ ಪಡಿಸಲಾ ಯಿತು. ಇವುಗಳಲ್ಲಿ ವಿಮೆ, ಮ್ಯೂಚುವಲ್ ಫಂಡ್‌ಗಳು, ಜಿಎಸ್‌ಟಿ ನಗದು ಹರಿವು ಆಧಾರಿತ ಸಾಲ, ತರುಣ್ ಮತ್ತು ಕಿಶೋರ ಮುದ್ರಾ ಸಾಲಗಳು, ಸಹ-ಸಾಲ ಮತ್ತು ಪೂಲ್ ಬೈ-ಔಟ್, ಗೃಹ ಸಾಲಗಳು ಮತ್ತು ಶಿಕ್ಷಣ ಸಾಲಗಳಂತಹ ಡಿಜಿಟಲ್ ಉಪಕ್ರಮಗಳು ಸೇರಿವೆ.