Advertisement

ಕೇಂದ್ರ ಸಚಿವ ಅರ್ಜುನ್‌ ಮುಂಡಾ ಭೇಟಿ-ಮನವಿ

03:05 PM Apr 05, 2022 | Team Udayavani |

ಬೀದರ: ದೆಹಲಿಯಲ್ಲಿ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗೊಂಡ ಸಮಾಜದ ಮುಖಂಡರ ನಿಯೋಗ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಅವರನ್ನು ಭೇಟಿ ಮಾಡಿ, ಕುರುಬ ಸಮುದಾಯದವರನ್ನು ಎಸ್‌. ಟಿ ಗೊಂಡ ಪರ್ಯಾಯ ಪದವೆಂದು ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮನವಿ ಮಾಡಿತು.

Advertisement

ನಮ್ಮ ಭಾಗದಲ್ಲಿರುವ ಕುರುಬ ಸಮಾಜದವರು ಎಸ್‌.ಟಿ. ಗೊಂಡ ಪರ್ಯಾಯ ಪದಕ್ಕೆ ಸೇರದಿರುವುದರಿಂದ ಹಾಗೂ ಉದ್ಯೋಗ ಮತ್ತು ಶಿಕ್ಷಣ ಪಡೆಯುವ ಸಂದರ್ಭಗಳಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಎಸ್‌.ಟಿ. ಗೊಂಡ ಹಾಗೂ ಕುರುಬ ಜನಾಂಗದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಈ ನಿಟ್ಟಿನಲ್ಲಿ ತಾವುಗಳು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಕುರುಬ ಜನಾಂಗಕ್ಕೆ ಸೇರಿರುವ ಜನರನ್ನು ಎಸ್‌.ಟಿ. ಗೊಂಡ ಪರ್ಯಾಯ ಪದದಲ್ಲಿ ಸೇರ್ಪಡೆಗೊಳಿಸಬೇಕೆಂದು ಖೂಬಾ ಅವರು ಸಚಿವ ಅರ್ಜುನ ಮುಂಡಾ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಶಾಸಕ ಬಂಡೆಪ್ಪ ಕಾಶೆಂಪುರ್‌, ಎಂಎಲ್‌ಸಿ ರಘುನಾಥರಾವ್‌ ಮಲ್ಕಾಪುರೆ, ಗೊಂಡ ಸಮುದಾಯದ ಪ್ರಮುಖರಾದ ಅಮೃತರಾವ ಚಿಮಕೊಡೆ, ಮಹಾಂತೇಶ ಕೌವಲಗಿ, ಬಸವರಾಜ ಮಾಳಗೆ, ಧರ್ಮಣ ದೊಡ್ಡಮನಿ, ಪಂಡಿತ ಚಿದ್ರಿ ಮತ್ತು ಎಂ.ಎಸ್‌ ಕಟಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next