ಮುಂಬೈ: ಮಹಾರಾಷ್ಟ್ರ ಸರ್ಕಾರವು ಎರಡು ವರ್ಷಗಳ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ) ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಬಿಜೆಪಿ ಅದರ ಕಾಲೆಳೆದಿದೆ.
ಇದು “ಮಹಾ ವಿಶ್ವಾಸಘಾತಿ ಅಘಾಡಿ ಸರ್ಕಾರ’ ಎಂದು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ದೂರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಕಾಶ್ ಜಾವಡೇಕರ್ ಅವರು, “”ಇದು ಅತ್ಯಂತ ಭ್ರಷ್ಟ, ಅವಕಾಶವಾದಿ, ಜನವಿರೋಧಿ ಮತ್ತು ನಿರುಪಯುಕ್ತ ಸರ್ಕಾರ. ಈ ಸಿಎಂ ಒಬ್ಬ ಆಕಸ್ಮಿಕ ಸಿಎಂ. ಈ ಸರ್ಕಾರ 2 ವರ್ಷ ಪೂರ್ಣಗೊಳಿಸಿರುವುದಕ್ಕೆ ಹೊಗಳುವಂಥದ್ದು ಏನೂ ಇಲ್ಲ. ಜನರು ಸರ್ಕಾರವನ್ನು ಮಹಾ ವಸೂಲಿಯ ಅಘಾಡಿ ಸರ್ಕಾರ ಎಂದು ಕರೆಯುತ್ತಿದ್ದಾರೆ.
ಇದನ್ನೂ ಓದಿ:ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ
ನಾನು ಇದನ್ನು “ಮಹಾ ವಿಶ್ವಾಸಘಾತಿ ಅಘಾಡಿ ಸರ್ಕಾರ’ ಎಂದು ಕರೆಯುತ್ತೇನೆ” ಎಂದಿದ್ದಾರೆ.