Advertisement

Thermal: ಎರಡು ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ

09:41 PM Jan 18, 2024 | Team Udayavani |

ನವದೆಹಲಿ: ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿಯು(ಸಿಸಿಇಎ) ಎರಡು ಉಷ್ಣ ವಿದ್ಯುತ್‌ ಸ್ಥಾವರಗಳ ಸ್ಥಾಪನೆಗಾಗಿ 5,607 ಕೋಟಿ ರೂ. ಷೇರು ಹೂಡಿಕೆಗೆ ಗುರುವಾರ ಅನುಮೋದನೆ ನೀಡಿದೆ.

Advertisement

ಒಟ್ಟು 2,260 ಮೆಗಾ ವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಎರಡು ಉಷ್ಣ ವಿದ್ಯುತ್‌ ಸ್ಥಾವರಗಳನ್ನು ಸರ್ಕಾರಿ ಸ್ವಾಮ್ಯದ ಸೌಥ್‌ ಈಸ್ಟರ್ನ್ ಕೋಲ್‌ಫೀಲ್ಡ್‌$Õ ಮತ್ತು ಮಹಾನದಿ ಕೋಲ್‌ಫೀಲ್ಡ್‌$Õ ಸ್ಥಾಪಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಮಧ್ಯಪ್ರದೇಶದ ಅಮರ್‌ಕಂಠಕ್‌ ಉಷ್ಣ ವಿದ್ಯುತ್‌ ಕೇಂದ್ರದಲ್ಲಿ ಮಧ್ಯಪ್ರದೇಶ ಪವರ್‌ ಜನರೇಟಿಂಗ್‌ ಕಂಪನಿ ಲಿ. ಸಹಯೋಗದಲ್ಲಿ ಸೌಥ್‌ ಈಸ್ಟರ್ನ್ ಕೋಲ್‌ಫೀಲ್ಡ್‌$Õ 660 ಮೆಗಾ ವ್ಯಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಲಿದೆ. ಅದೇ ರೀತಿ ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ಮಹಾನದಿ ಬೇಸಿನ್‌ ಪವರ್‌ ಲಿ. ಸಹಯೋಗದಲ್ಲಿ ಮಹಾನದಿ ಕೋಲ್‌ಫೀಲ್ಡ್‌$Õ ಲಿ. 1600 ಮೆ.ವ್ಯಾ. ಸಾಮರ್ಥ್ಯದ ಉಷ್ಣ ವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಲಿದೆ.

ಇನ್ನೊಂದೆಡೆ, ಅರವಿಂದ್‌ ಪನಗಾರಿಯಾ ಅವರ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗಕ್ಕೆ ಸಹಕಾರಿಯಾಗಿ ಮೂರು ಅಧಿಕಾರಿ ಮಟ್ಟದ ಹುದ್ದೆಗಳ ಸೃಷ್ಟಿಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ. 16ನೇ ಹಣಕಾಸು ಆಯೋಗದಲ್ಲಿ ಎರಡು ಜಂಟಿ ಕಾರ್ಯದರ್ಶಿ ಹುದ್ದೆಗಳು ಮತ್ತು ಆರ್ಥಿಕ ಸಲಹೆಗಾರ ಹುದ್ದೆ ಸೃಷ್ಟಿಯಾಗಲಿದ್ದು, ಇದು ಅಯೋಗದ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next