Advertisement

ಬೆಳೆವಿಮೆ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವರ ಭರವಸೆ

03:46 PM Mar 22, 2017 | |

ಹುಬ್ಬಳ್ಳಿ: ರಾಜ್ಯ ಸರಕಾರದ ತಪ್ಪಿನಿಂದಾಗಿ 2014-15ರ ಹವಾಮಾನ ಆಧಾರಿತ ಬೆಳೆ ವಿಮೆ ವಿಷಯದಲ್ಲಿ ಧಾರವಾಡ ಜಿಲ್ಲೆಯ ನೂರಾರು ರೈತರು ವಿಮಾ ಹಣ ಪಾವತಿಯಿಂದ ವಂವಿತರಾಗಿದ್ದಾರೆ. ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆಯೊಂದಿಗೆ ಸಮಾಲೋಚಿಸಿ ಕೂಡಲೇ ವಿಮಾ ವಂಚಿತ ರೈತರಿಗೆ ಪರಿಹಾರ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಅವರು ಕೇಂದ್ರ ಕೃಷಿ ಸಚಿವ ರಾಧಾಮೋಹನಸಿಂಗ್‌ ಅವರನ್ನು ಒತ್ತಾಯಿಸಿದ್ದಾರೆ. 

Advertisement

ಕೇಂದ್ರ ಕೃಷಿ ಸಚಿವರನ್ನು ಸೋಮವಾರ ಭೇಟಿಯಾಗಿ ಮನವಿ ಮಾಡಿದಾಗ ಸ್ಪಂದಿಸಿದ ಅವರು, ಕರ್ನಾಟಕ ಸರಕಾರದಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾಗಿ ಸಂಸದ  ಜೋಶಿ ತಿಳಿಸಿದ್ದಾರೆ. ಅದೇ ರೀತಿ 2016-17ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಪ್ರಧಾನಿ ಫಸಲ ವಿಮಾ ಯೋಜನೆಯಲ್ಲಿ ಧಾರವಾಡ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಬ್ಯಾಂಕುಗಳಲ್ಲಿ ರೈತರ ಖಾತೆಗಳಲ್ಲಿನ ತಾಂತ್ರಿಕ ತಪ್ಪುಗಳಿಂದ ಅವರಿಗೆ ವಿಮಾ ಹಣ ಬರುವುದು ವಿಳಂಬವಾಗುತ್ತಿದೆ. 

2015-16ರ ಮುಂಗಾರು ಬೆಳೆವಿಮೆ ಯೋಜನೆಯಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕೋಳಿವಾಡ ಹಾಗೂ ಕುಂದಗೋಳ ತಾಲೂಕಿನ ಸಂಶಿ ಬ್ಯಾಂಕ್‌ ಶಾಖೆಯ ಸುಮಾರು 1405 ರೈತರ ವಿಮಾ ಕಂತುಗಳನ್ನು ಬ್ಯಾಂಕ್‌ನ ದೈನಂದಿನ ಕಾರ್ಯನಿರ್ವಹಣೆಯಲ್ಲಿನ ತಾಂತ್ರಿಕ ದೋಷದಿಂದ ಒಂದುದಿನ ತಡವಾಗಿ ಜಮೆಯಾದ ಕಾರಣ ಎಲ್ಲಾ ರೈತರಿಗೆ ಈವರೆಗೂ ವಿಮಾ ಹಣ ಪಾವತಿಯಾಗಿರುವುದಿಲ್ಲ. ಇದನ್ನು ನಾನು ಬ್ಯಾಂಕ್‌ನ ಹಾಗೂ ಸಂಬಂಧಿಸಿದ ವಿಮಾ ಕಂಪನಿಯ ಗಮನಕ್ಕೆ ತಂದಿದ್ದೇನೆ. 

ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆಯು ಸಲ್ಲುವಂತೆಯೂ ಕ್ರಮ ಕೈಗೊಂಡಿದ್ದೆ. ಈಗ ಕೇಂದ್ರ ಸರಕಾರವು ತನ್ನ ಪಾಲಿನ ಹಣ ನೀಡಿ ಬೇಗನೇ ರೈತರಿಗೆ ವಿಮಾ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಕೃಷಿ ಸಚಿವರನ್ನು ಒತ್ತಾಯಿಸಿದ್ದು, ಅವರು ಬೇಗನೆ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ಜೋಶಿ ಪ್ರಕಟಣೆಯಲ್ಲಿ ತಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next