Advertisement
ಕೋವಿಡ್ 19 ಸೋಂಕಿತರಿಗೆ ಏಕರೂಪದ ಚಿಕಿತ್ಸೆ ಇರಬೇಕು ಮತ್ತು ಅದನ್ನು ಎಲ್ಲರೂ ಪಾಲಿಸಲೇಬೇಕಾಗಿರುತ್ತದೆ. ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಚಿಕಿತ್ಸಾ ವಿಧಾನ ಮತ್ತು ಆರೈಕೆಗಳು ಅಗತ್ಯ ಇರುವುದರಿಂದ ಎಲ್ಲ ಜಿಲ್ಲೆಗಳ ವೈದ್ಯರಿಗೆ, ನರ್ಸ್‌ಗಳಿಗೆ ಮಾತ್ತು ಪ್ಯಾರಾಮೆಡಿಕಲ್ ಸಿಬಂದಿ ವರ್ಗಕ್ಕೆ ಆನ್‌ಲೈನ್ ಮೂಲಕ ತರಬೇತಿ ನೀಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಆಯಾ ಜಿಲ್ಲೆಗಳಲ್ಲಿಯೇ ವೈದ್ಯರು, ನರ್ಸ್‌ಗಳು ಮತ್ತು ಪ್ಯಾರಾಮೆಡಿಕಲ್ ಸಿಬಂದಿ ಲಭ್ಯತೆಯ ಆಧಾರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
ಈ ವಿಚಾರದಲ್ಲಿ ವೈದ್ಯರಿಗೆ ಅಥವಾ ನರ್ಸ್‌ಗಳಿಗೆ ತರಬೇತಿ ನೀಡುವವರೂ ಕೂಡ ತುಂಬ ವಿಚಾರವನ್ನು ತಿಳಿದವರಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿವಿಯು ವೈದ್ಯಕೀಯ ತಜ್ಞರ ಮೂಲಕ ತರಬೇತಿ ನೀಡಲಿದೆ. ಸರಕಾರದ ಒಪ್ಪಿಗೆಯಲ್ಲೇ ಈ ತರಬೇತಿ ಕಾರ್ಯ ನಡೆಯಲಿದೆ ಎಂದು ವಿವರಿಸಿದರು. ಏನೇನು ತರಬೇತಿ?
ಕೋವಿಡ್ 19 ವೈರಸ್ ತಡೆಯುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಸರಕಾರ ಈಗಾಗಲೇ ಜಾರಿಗೊಳಿಸಿದೆ. ಆದರೆ ಸೋಂಕಿತರನ್ನು ಮಾತ್ರ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ನೋಡಿಕೊಳ್ಳಬೇಕು. ಹೀಗಾಗಿ ವೈದ್ಯರಿಗೆ, ನರ್ಸ್ ಗಳಿಗೆ ಮತ್ತು ಪ್ಯಾರಾಮೆಡಿಕಲ್ ಸಿಬಂದಿ ವರ್ಗಕ್ಕೆ ಅತ್ಯಾಧುನಿಕ ಸೌಲಭ್ಯವನ್ನು ವೈದ್ಯಕೀಯ ಸೌಲಭ್ಯ ಬಳಸಿ, ಯಾವುದೇ ರೀತಿಯಲ್ಲೂ ಅಪಾಯವಿಲ್ಲದ ರೀತಿಯಲ್ಲಿ ಆರೈಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ತರಬೇತಿ ಆನ್‌ಲೈನ್ ಮೂಲಕ ಇರುವುದರಿಂದ ವೈದ್ಯರು ಅಥವಾ ವೈದ್ಯಕೀಯ ಸಿಬಂದಿ ತಾವು ಇರುವ ಜಾಗಳಿಂದಲೇ ತರಬೇತಿ ಪಡೆಯಬಹುದಾಗಿದೆ ಎಂದು ವಿವಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
Related Articles
-ಡಾ|ಎಸ್.ಸಚ್ಚಿದಾನಂದ, ಕುಲಪತಿ,
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.
Advertisement
ಸಿಬಂದಿಗೆ ತರಬೇತಿರಾಜ್ಯದಲ್ಲಿರುವ ಬಹುತೇಕ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಅಧೀನದಲ್ಲಿ ಬರುತ್ತದೆ. ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ವಿವಿಯೂ ಈಗಾಗಲೇ ಕಾರ್ಯೋನ್ಮುಖವಾಗಿದ್ದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸಂಬಂಧ ಅಗತ್ಯ ಸೂಚನೆಯನ್ನು ನೀಡಿದ್ದು, ಈಗ ವೈದ್ಯರು ಮತ್ತು ವೈದ್ಯಕೀಯ ಸೇವೆಯ ಸಿಬಂದಿಗೆ ತರಬೇತಿ ನೀಡಲು ಮುಂದಾಗಿದೆ. – ರಾಜು ಖಾರ್ವಿ ಕೊಡೇರಿ