Advertisement

ಕೇಂದ್ರ ಸರ್ಕಾರದ ತೆರಿಗೆ ನೀತಿ ಹೊರೆ: ಆರ್‌.ಸಿ.ಭಾರ್ಗವ

08:18 PM Dec 20, 2022 | Team Udayavani |

ನವದೆಹಲಿ: ಕಾರುಗಳು ವಿಲಾಸಿ ವಸ್ತು ಎಂದು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ. ಅದರ ತೆರಿಗೆ ನೀತಿಯಿಂದಾಗಿ 12 ವರ್ಷಗಳಿಂದ ಈಚೆಗೆ ಕಾರು ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಶೇ.12ರಿಂದ ಶೇ.3ಕ್ಕೆ ಇಳಿಕೆಯಾಗಿದೆ ಎಂದು ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌.ಸಿ.ಭಾರ್ಗವ ಹೇಳಿದ್ದಾರೆ.

Advertisement

ಸೋಮವಾರ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಕಾರುಗಳ ಕ್ಷೇತ್ರದ ಮೇಲೆ ತೆರಿಗೆ ಪ್ರಮಾಣ ಹೆಚ್ಚಾಗಿದೆ.

ಸಣ್ಣ ಕಾರು ಅಥವಾ ದೊಡ್ಡ ಕಾರು ಎಂಬ ಭೇದವಿಲ್ಲದೆ ಒಂದೇ ರೀತಿಯಲ್ಲಿ ತೆರಿಗೆ ವ್ಯವಸ್ಥೆ ಇದ್ದರೆ ಅದು ಕ್ಷೇತ್ರದ ಬೆಳವಣಿಗೆ ಮೇಲೆ ಮಾರಕವಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next