Advertisement
ನಗರದ ಮೆಟ್ರಿಕ್ ನಂತರದ ಸರ್ಕಾರಿ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ಭೇಟಿ ನೀಡಿ, ಕಚೇರಿ ಆವರಣದಲ್ಲಿ ಸಸಿ ನೆಟ್ಟು, ಕಡತಗಳ ಪರಿಶೀಲನೆ ನಡೆಸಿ ಮಾತನಾಡಿದರು.
Related Articles
Advertisement
ಅವರಿಗೆ ನಿಲಯದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು. ವಾರದಲ್ಲಿ ಒಂದು ದಿನ ಮಾಂಸಹಾರ ಮತ್ತು ಆಲ್ಲೇಟ್ ಬ್ರೇಡ್ ಸಹ ನೀಡಲು ಕ್ರಮಕೈಗೊಂಡಿದ್ದು, ವಿದ್ಯಾರ್ಥಿಗಳು ಊಟ ಮತ್ತು ಉಪಹಾರದಲ್ಲಿಯಾವುದೇ ತರಹದ ಆಡಚಣೆ ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ತರಬೇತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪದವಿ ಬಳಿಕ ಯುಪಿಎಸ್‌ಸಿ, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ದೆಹಲಿಯ ವಾಜಿರಾಮ್ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ ಕೊಡಿಸಲಾಗುತ್ತಿದೆ ಎಂದು ಹೇಳಿದರು.
ವಿದೇಶದಲ್ಲಿ ಶಿಕ್ಷಣ: ಉನ್ನತ ಶಿಕ್ಷಣವನ್ನು ಅತಿ ಹಿಂದುಳಿದ ವಿದ್ಯಾರ್ಥಿಗಳು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಮುಂದೆ ಬಂದರೆ, ವಿದೇಶದಲ್ಲಿ ಶಿಕ್ಷಣವನ್ನು ಕೊಡಿಸಲು ಸಮಾಜ ಕಲ್ಯಾಣ ಇಲಾಖೆ ನೆರವು ನೀಡಲಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ವಾರ್ಡನ್ ಭರ್ತಿ: ತಾಲೂಕಿನಲ್ಲಿ ಸರ್ಕಾರದ 20 ಹಾಸ್ಟೆಲ್‌ಗಳಿಗೆ ಕೇವಲ 8 ಜನರು ನಿಲಯ ಪಾಲಕರು ಇದ್ದು, ಸರ್ಕಾರ ಈಗಾಗಲೇ ನಿಲಯ ಪಾಲಕರ ಭರ್ತಿ ಮಾಡಿದೆ. ನೂತನವಾಗಿ ನೇಮಕಗೊಂಡಿರುವ ನಿಲಯ ಪಾಲಕರನ್ನು ಕೂಡಲೇ ಭರ್ತಿ ಮಾಡಲಾಗುವುದೆಂದರು.
ಜಿಲ್ಲೆಯ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡು, ಪ್ರತಿ ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲಯಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಲು ಪ್ರಮಾಣೀಕ ಪ್ರಯತ್ನ ಮಾಡಲಾಗುವುದೆಂದರು.
ಅಂಬೇಡ್ಕರ್ ಭವನ: ಸರ್ಕಾರಿ ವಸತಿ ನಿಲಯಕ್ಕೆ ಭೇಟಿಯ ಬಳಿಕ ನಗರದ ಅಂಬೇಡ್ಕರ್ ಸಮುದಾಯ ಭವನಕ್ಕೆ ಭೇಟಿ ನೀಡಿ, ಭವನ ಪೂರ್ಣಗೊಳಿಸಲು ಎರಡು ಕೋಟಿ ರೂ. ಅಂದಾಜಿನಲ್ಲಿ ತಯಾರಿಸಿರುವ ಅಂದಾಜು ಪಟ್ಟಿ ಸಹ ಕಚೇರಿಗೆ ಬಂದಿದ್ದು, ಕೂಡಲೇ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದೆಂದರು.
ಭೇಟಿಯ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಉಪ ನಿರ್ದೇಶಕಿ ಜಯಕಾಂತ, ಕಚೇರಿಯ ವ್ಯವಸ್ಥಾಪಕ ಮಂಜುನಾಥ್, ನಿಲಯ ಪಾಲಕರಾದ ಮಂಜುಳ, ವಿಜಯ್‌ಕುಮಾರ್, ಸಿಗ್ಬತ್ತುಲ್ಲಾ, ಪ್ರಭಾರ ಪಾಲಕಿ ಲಕ್ಷ್ಮಿ ಮತ್ತು ಸಿಬ್ಬಂದಿವರ್ಗ ಇದ್ದರು.