Advertisement

Uniform: ಏಕರೂಪ ಶಾಸನ ಅನಿವಾರ್ಯ: ನಂದಕುಮಾರ್‌

11:21 PM Aug 10, 2023 | Team Udayavani |

ಉಡುಪಿ: ಭಾರತದ ಅಖಂಡತೆಗೆ ಮತ್ತು ಲಿಂಗಸಮಾನತೆಗೆ ಏಕರೂಪ ಶಾಸನ ಅನಿವಾರ್ಯ. ಇದರಿಂದ ಯಾವುದೇ ಧರ್ಮಕ್ಕೆ ತೊಂದರೆ ಇಲ್ಲ ಎಂದು ಪ್ರಜ್ಞಾಪ್ರವಾಹ ಗತಿವಿಧಿಯ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್‌ ತಿಳಿಸಿದರು.

Advertisement

ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದಿಂದ ವಿಶ್ವಾರ್ಪಣಮ್‌ ಚಿಂತನ-ಮಂಥನ ಕಾರ್ಯಕ್ರಮದ ಭಾಗವಾಗಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ “ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಏಕೆ ಬೇಕು?’ ಎಂಬ ವಿಷಯದ ಕುರಿತು ಅವರು ಗುರುವಾರ ಉಪನ್ಯಾಸ ನೀಡಿದರು.

ಈ ಕಾನೂನಿನಲ್ಲಿ ವಿಚ್ಛೇದನ, ಆಸ್ತಿಹಕ್ಕು, ದತ್ತುಸ್ವೀಕಾರ ಮತ್ತು ವಾರಸುದಾರರ ಹಕ್ಕು ಮಾತ್ರ ಇದೆ. ಒಂದು ದೇಶದಲ್ಲಿ ಎರಡು ಕಾನೂನು ತಹ್ಯವಲ್ಲ. ಇದನ್ನು ಸಂವಿಧಾನ ದಲ್ಲಿಯೇ ಉಲ್ಲೇಖೀಸಿದ್ದು, ಸುಪ್ರೀಂ ಕೋರ್ಟ್‌ 5 ಬಾರಿ ಈ ಶಾಸಕ ಅನುಷ್ಠಾನಕ್ಕೂ ಸೂಚಿಸಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಕೇವಲ 10 ವರ್ಷಗಳಲ್ಲಿ ಬ್ರಿಟೀಷರ ಒಡೆದು ಆಳುವ ನೀತಿಯ ಅನುಸಾರ ಅವರನ್ನು ಮುಂದಿಟ್ಟುಕೊಂಡು ಶರಿಯತ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಜತೆಗೆ ಇದ್ಧತ್‌ ಕಾಯ್ದೆಯನ್ನೂ ಜಾರಿಗೊಳಿಸಲಾಯಿತು. ದುರದೃಷ್ಟವಶಾತ್‌ ಶರಿಯತ್‌ ಕಾಯ್ದೆಯನ್ನು ಒಪ್ಪುವ ಮುಸಲ್ಮಾನರು ಇದ್ಧತ್‌ ಕಾಯ್ದೆಯನ್ನೂ ಅನುಸರಿಸುವುದಿಲ್ಲ ಎಂದರು.

ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರಗಳೂ ಏಕರೂಪ ಶಾಸನವನ್ನು ಅನುಸರಿಸುತ್ತಿವೆ. ಆದರೂ ಭಾರತೀಯ ಮುಸಲ್ಮಾನರು ಇದನ್ನು ವಿರೋಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ವೈದಿಕ ತಾಣವಾದ ಭಾರತದಲ್ಲಿ ನಾಗರಿಕ ಸಂಹಿತೆಯಲ್ಲಿ ಬದಲಾಗುತ್ತಿದೆ ಎಂಬ ಅರಿವು ಈ ಹಿಂದಿನಿಂದಲೇ ಇತ್ತು. ಭಾರತಕ್ಕೆ ಏಕರೂಪ ನೀತಿ ಸಂಹಿತೆ ಅತೀ ಅಗತ್ಯವಾಗಿದೆ. ದೇವಸ್ಥಾನಕ್ಕೆ ಬರುವಾಗ ಹೇಗೆ ಜಾತಿ ಅಡ್ಡವಾಗುವುದಿಲ್ಲವೋ ಅದೇ ರೀತಿ ಕಲಿಕೆ, ಗಳಿಕೆಗೆ ಜಾತಿ ಅಡ್ಡ ಬಾರದಿದ್ದರೆ ನಮ್ಮ ಬೌದ್ಧಿಕತೆ ಉಳಿಯುತ್ತದೆ ಎಂದರು.

ಟಿಎ ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕ ಡಾ| ನಂದನ್‌ ಪ್ರಭು ಪ್ರಸ್ತಾವನೆಗೈದರು. ಅದಮಾರು ಮಠದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಗೋವಿಂದರಾಜು ಸ್ವಾಗತಿಸಿ, ಗಣೇಶ್‌ ಹೆಬ್ಟಾರ್‌ ವಂದಿಸಿದರು. ಉಪನ್ಯಾಸಕ ಡಾ| ಟಿ.ಎಸ್‌. ರಮೇಶ್‌ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next