Advertisement

Uniform Civil Code ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ: ಚಿದಂಬರಂ

04:07 PM Jun 28, 2023 | Team Udayavani |

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ, “ಅಜೆಂಡಾ-ಚಾಲಿತ ಬಹುಮತದ ಸರಕಾರದಿಂದ ಜನರ ಮೇಲೆ ಬಲವಂತಪಡಿಸಲು ಸಾಧ್ಯವಿಲ್ಲ,ಇದು ಜನರ ವಿಭಜನೆಯನ್ನು ವಿಸ್ತರಿಸುತ್ತದೆ” ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು  ತಿರುಗೇಟು ನೀಡಿದ್ದಾರೆ.

Advertisement

”ನಿರುದ್ಯೋಗ, ಬೆಲೆ ಏರಿಕೆ ಮತ್ತು ದ್ವೇಷದ ಅಪರಾಧಗಳ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ಯುಸಿಸಿಗಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಮಾಜವನ್ನು ಧ್ರುವೀಕರಣಗೊಳಿಸಲು ಬಿಜೆಪಿ ಯುಸಿಸಿಯನ್ನು ಬಳಸುತ್ತಿದೆ” ಎಂದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಆರೋಪಿಸಿದರು.

“ಗೌರವಾನ್ವಿತ ಪ್ರಧಾನಮಂತ್ರಿಯವರು UCC ಒಂದು ಸರಳವಾದ ಪ್ರಕ್ರಿಯೆ ಎಂದು ತೋರುತ್ತಿದ್ದಾರೆ. ಈ ಸಮಯದಲ್ಲಿ ಅದು ಕಾರ್ಯಸಾಧ್ಯವಲ್ಲ ಎಂದು ಸೂಚಿಸಿದ ಕಳೆದ ಕಾನೂನು ಆಯೋಗದ ವರದಿಯನ್ನು ಅವರು ಓದಬೇಕು ”ಬಿಜೆಪಿಯ ಮಾತು ಮತ್ತು ಕಾರ್ಯಗಳಿಂದಾಗಿ ಇಂದು ರಾಷ್ಟ್ರವು ಇಬ್ಭಾಗವಾಗಿದೆ. ಜನರ ಮೇಲೆ ಹೇರಲಾದ ಯುಸಿಸಿಯು ವಿಭಾಗಗಳನ್ನು ವಿಸ್ತರಿಸುತ್ತದೆ ಎಂದು ಚಿದಂಬರಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next