Advertisement

ಬೆಂಗಳೂರು: ರಾಜ್ಯದಲ್ಲಿ ಭೂ ಸಂಬಂಧಿತ ಅಕ್ರಮಗಳ ತಡೆ ಜತೆಗೆ ಸಮಗ್ರ ಮಾಹಿತಿ, ಬಳಕೆ ಉದ್ದೇಶ, ಖರೀದಿ – ಮಾರಾಟ, ನೋಂದಣಿ ಮುಂತಾದ ಎಲ್ಲ ವ್ಯವಹಾರಗಳಿಗೆ ಪೂರಕವಾಗಿ “ಏಕೀಕೃತ ಭೂ ನಿರ್ವಹಣೆ ವ್ಯವಸ್ಥೆ’ಯಡಿ ಒಂದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ.

Advertisement

ಈ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಬುಧವಾರ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ- ಆಡಳಿತ) ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಸದ್ಯ ಭೂಮಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಹಲವು ತಂತ್ರಾಂಶಗಳನ್ನು ನಾನಾ ಹಂತದಲ್ಲಿ ಬಳಸಲಾಗುತ್ತಿದೆ. ಮುಖ್ಯವಾಗಿ ಆಸ್ತಿ ನೋಂದಣಿ, ವರ್ಗಾವಣೆ ಮುಂತಾದ ವ್ಯವಹಾರಕ್ಕಾಗಿ ಕಾವೇರಿ, ಭೂಮಿ, ಮೋಜಣಿ, ಇ- ಆಸ್ತಿ, ಇ-ಸ್ವತ್ತು ಇತ್ಯಾದಿ ಪ್ರತ್ಯೇಕ ಸಾಫ್ಟ್ವೇರ್‌ಗಳಿವೆ. ಇದರಿಂದಾಗಿ ಗೊಂದಲ ಹೆಚ್ಚಾಗಿದ್ದು, ಕೆಲವೆಡೆ ಅವ್ಯಹಾರಕ್ಕೂ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next