Advertisement

ಮಾನವ ಹಕ್ಕುಗಳ ಉಲ್ಲಂಘನೆ : ವಿಶ್ವಸಂಸ್ಥೆಯಲ್ಲಿ ಲಂಕೆ ವಿರುದ್ಧ ನಿರ್ಣಯ

10:24 PM Mar 23, 2021 | Team Udayavani |

ಜಿನೆವಾ: ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಶ್ರೀಲಂಕಾದ ವಿರುದ್ಧದ ಮಾನವಾಧಿಕಾರ ಉಲ್ಲಂಘನೆ ನಡೆಸಿದೆ ಎಂದು ನಿರ್ಣಯ ಕೈಗೊಂಡಿದೆ.

Advertisement

ಇದು ದ್ವೀಪ ರಾಷ್ಟ್ರದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರಿಗೆ ಹಿನ್ನಡೆ ತಂದಿದೆ. ಎಲ್‌ಟಿಟಿಇ ವಿರುದ್ಧದ ಸಮರದ ವೇಳೆ ಲಂಕೆಯ ಸೇನೆ ತಮಿಳರ ಮಾರಣಹೋಮ ನಡೆಸಿದ ಸಂಗತಿ, ಗೋಟಬಾಯಾ ರಾಜಪಕ್ಸೆ ಅವರಿಗೆ ಕಳಂಕವಾಗಿಯೇ ಉಳಿದಿದೆ. ಹೀಗಾಗಿ, ಅವರು ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ತನಿಖೆಗಳು ಆಗುವುದನ್ನು ತಡೆಯಲು ಸತತ ಪ್ರಯತ್ನಿಸುತ್ತಲೇ ಬಂದಿದ್ದರು. ಈಗಿನ ವಿಶ್ವಸಂಸ್ಥೆಯ ನಿರ್ಣಯದಿಂದಾಗಿ, ಮಾನವ ಹಕ್ಕುಗಳ ಮಂಡಳಿಯು ಶ್ರೀಲಂಕಾಕ್ಕೆ ತೆರಳಿ ತನಿಖೆ ನಡೆಸಲು ಸುಲಭವಾಗಲಿದೆ.

47 ರಾಷ್ಟ್ರಗಳ ಈ ಮಂಡಳಿಯಲ್ಲಿ 22 ಸದಸ್ಯ ರಾಷ್ಟ್ರಗಳು ವಿರುದ್ಧವಾಗಿ ಮತ ಹಾಕಿವೆ. ಭಾರತ, ಜಪಾನ್‌ ಸೇರಿದಂತೆ 14 ರಾಷ್ಟ್ರಗಳು ಮತದಾನದಿಂದ ದೂರವೇ ಉಳಿದವು. ಇನ್ನು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ರಷ್ಯಾ ಸೇರಿದಂತೆ 11 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತಹಾಕಿವೆ.

ಇದನ್ನೂ ಓದಿ :ಭವಿಷ್ಯ ನಿಧಿ ಖಾತೆದಾರರಿಗೆ ಸಿಹಿ ಸುದ್ದಿ :5 ಲಕ್ಷ ರೂ.ವರೆಗಿನ ಬಡ್ಡಿ ಆದಾಯ ಟ್ಯಾಕ್ಸ್‌ ಫ್ರೀ

Advertisement

Udayavani is now on Telegram. Click here to join our channel and stay updated with the latest news.

Next