Advertisement
ಮೊಳಕಾಲ್ಮುರು ತಾಲೂಕಿನ ಪೂಜಾರಹಟ್ಟಿಯಲ್ಲಿ ತಿಪ್ಪೇಸ್ವಾಮಿಯವರ ನುಗ್ಗೆ ಬೆಳೆ ಕ್ಷೇತ್ರ ಹಾಗೂ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿಯಲ್ಲಿ ಕುಮಾರಸ್ವಾಮಿಯವರ ರೇಷ್ಮೆ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ದಾಳಿಂಬೆ, ನಿಂಬೆ, ಸಪೋಟ, ನುಗ್ಗೆ ಸೇರಿದಂತೆ ರೇಷ್ಮೆ ಬೆಳೆ ಉತ್ತೇಜನಕ್ಕೆ ಉದ್ಯೋಗ ಖಾತರಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಈ ಬಗ್ಗೆ ಬಹುತೇಕ ರೈತರಿಗೆ ಮಾಹಿತಿಯಿಲ್ಲ. ಆದರೆ, ಅಧಿಕಾರಿಗಳು ಸಹರೈತರಿಗೆ ಮಾಹಿತಿ ನೀಡಿರುವುದಿಲ್ಲ. ರೈತರಿಗೆ ಸರ್ಕಾರ ಕಲ್ಪಿಸಿರುವ ಸೌಲಭ್ಯ, ಯೋಜನೆಗಳ ಮಾಹಿತಿ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಪಡೆಯುವುದು ಆಯಾ ರೈತರಿಗೆ ಬಿಟ್ಟ ವಿಷಯವಾಗಿದೆ ಎಂದರು.
Related Articles
Advertisement
ರೈತರು ಆಸಕ್ತಿ ಇದ್ದರೆ ಸರ್ಕಾರದ ಸೌಲಭ್ಯ ಪಡೆಯುವರು, ಇಲ್ಲವಾದಲ್ಲಿ ಸ್ವಂತವಾಗಿ ಕೈಗೊಳ್ಳುವರು. ಆದರೆ, ರೈತರು ಯಾವ ಬೆಳೆ ಬೆಳೆಯುತ್ತಾರೆ, ಅಂತಹ ಬೆಳೆಗಳಿಗಿರುವ ಸೌಲಭ್ಯಗಳ ಮಾಹಿತಿಯನ್ನು ಅಧಿಕಾರಿಗಳು ಕಡ್ಡಾಯವಾಗಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರು ಮಲ್ಲೂರಹಳ್ಳಿ ಗ್ರಾಪಂನ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಜನರಿಗೆ ನೀಡುತ್ತಿರುವ ಸೇವೆಗಳನ್ನು ಪರಿಶೀಲಿಸಿದರು. ಆಧಾರ್ ತಿದ್ದುಪಡಿಯನ್ನು ಕೇಂದ್ರದಲ್ಲಿ ಕೈಗೊಳ್ಳಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಸಚಿವರೊಂದಿಗೆ ಸಂಸದ ಬಿ.ಎನ್.ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಉಪಾಧ್ಯಕ್ಷ ಸುಶೀಲಮ್ಮ, ಆರ್.ಡಿ.ಪಿ.ಆರ್. ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಪಂ ಸದಸ್ಯರಾದ ಮುಂಡರಗಿ ನಾಗರಾಜ್, ಡಾ| ಯೋಗೇಶ್‌ಬಾಬು, ಓಬಳೇಶ್, ಜಿಪಂ ಸಿಇಒ ರವೀಂದ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.