Advertisement

ಪರಿಷತ್‌ ನಾಮನಿರ್ದೇಶನ ಆಕಾಂಕ್ಷಿಗಳಲ್ಲಿ ಅಸಮಾಧಾನ

03:15 PM Apr 27, 2017 | Harsha Rao |

ಬೆಂಗಳೂರು: ವಿಧಾನ ಪರಿಷತ್ತಿನ 3 ಸ್ಥಾನಗಳಿಗೆ ನಾಮ ನಿರ್ದೇಶನ ಸಂಬಂಧ ಮೂವರ ಹೆಸರು ಅಂತಿಮಗೊಂಡಿರುವ ಮಾಹಿತಿ ಹೊರಬೀಳುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ವಿಧಾನಪರಿಷತ್‌ ಸದಸ್ಯತ್ವದ ಮೇಲೆ ಕಣ್ಣಿಟ್ಟಿದ್ದ ಪ್ರಬಲ ಆಕಾಂಕ್ಷಿ ಕೆ.ಪಿ.ನಂಜುಂಡಿ ಹಾಗೂ ಮತ್ತೂಬ್ಬ ಆಕಾಂಕ್ಷಿ ಕೆಪಿಸಿಸಿ
ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಆಪ್ತ ಜೆ.ಸಿ. ಚಂದ್ರಶೇಖರ್‌ ನಾಯಕರ ವಿರುದ್ಧ ಸಿಟ್ಟಾಗಿದ್ದಾರೆ. ವಿಶ್ವಕರ್ಮ ಸಮುದಾಯದ
ಕೆ.ಪಿ. ನಂಜುಂಡಿಗೆ ಈ ಬಾರಿ ಅವಕಾಶ ನೀಡಲಾಗುತ್ತದೆಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ,
ಸಿಎಂ ದೆಹಲಿಗೆ ಹೋಗಿ ಬಂದ ನಂತರ ನಂಜುಂಡಿ ಬದಲು ಬೆಂಗಳೂರಿನ ಮಾಜಿ ಮೇಯರ್‌ ಪಿ.ಆರ್‌. ರಮೇಶ್‌ ಹೆಸರು
ಸೇರ್ಪಡೆಯಾಗಿದೆ ಎಂದು ಹೇಳಲಾಗಿದೆ.

Advertisement

ಈ ಹಿಂದೆಯೂ ನಂಜುಂಡಿ ಹೆಸರು ಪರಿಷತ್‌ಗೆ ಅಂತಿಮಗೊಂಡು ಕೊನೇ ಘಳಿಗೆಯಲ್ಲಿ ಕೈ ಬಿಡಲಾಗಿತ್ತು. ಈ ಬೆಳವ
ಣಿಗೆಯಿಂದ ಬೇಸತ್ತಿರುವ ನಂಜುಂಡಿ, ಪಟ್ಟಿ ಪ್ರಕಟವಾದ ನಂತರ ವಿಶ್ವಕರ್ಮ ಸಮುದಾಯದ ಮುಖಂಡರು,
ಸ್ವಾಮೀಜಿಯ ಜೊತೆಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಜೆ. ಸಿ. ಚಂದ್ರಶೇಖರ್‌ ಸಹ ಇದೇ ರೀತಿ ಬೇಸರಗೊಂಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ
ಚೆಲ್ಲುಕುಮಾರ್‌, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರು ಪಕ್ಷದ ಪರವಾಗಿ ಜೆ.ಸಿ. ಚಂದ್ರಶೇಖರ್‌ ಅವರನ್ನು ನಾಮ
ನಿರ್ದೇಶನ ಮಾಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಅವರ ಮನವಿಗೆ ರಾಹುಲ್‌ ಗಾಂಧಿ ಸ್ಪಂದಿಸಿ,
ಒಕ್ಕಲಿಗರ ಕೋಟಾದಡಿ ಜೆ.ಸಿ. ಚಂದ್ರಶೇಖರ್‌ ಹೆಸರು ಸೇರಿಸಿದ್ದರು. ಆದರೆ, ಸಂಸದ ಡಿ.ಕೆ. ಸುರೇಶ್‌, ಸೋನಿಯಾ
ಗಾಂಧಿ ಮೇಲೆ ಒತ್ತಡ ತಂದು, ಸಿಎಂ ಲಿಂಗಪ್ಪ ಹೆಸರು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೆ.ಸಿ. ಚಂದ್ರಶೇಖರ್‌ ಅವರು, ಪರಮೇಶ್ವರ ಪರ ಅಭ್ಯರ್ಥಿ ಎಂಬ ಕಾರಣಕ್ಕೆ ಅವರಿಗೆ ಅವಕಾಶ ತಪ್ಪಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇವರ ಹೊರತಾಗಿ ನಾಮ ನಿರ್ದೇಶನದ ಪಟ್ಟಿಯಲ್ಲಿ ಮುಖ್ಯಮಂತ್ರಿ ಚಂದ್ರು,
ಇಂದ್ರಜಿತ್‌ ಲಂಕೇಶ್‌, ಮಾಜಿ ಸಂಸದ ಎಂ ವಿ ಚಂದ್ರಶೇಖರ ಮೂರ್ತಿ ಅವರ ಪತ್ನಿಯ ಹೆಸರು ಹಾಗೂ ಸಾಹಿತಿಗಳ
ಕೋಟಾದಡಿ ಬರಗೂರು ರಾಮಚಂದ್ರಪ್ಪ, ಕೆ. ಮರುಳಸಿದ್ದಪ್ಪ ಹೆಸರುಗಳೂ ಕೇಳಿ ಬಂದಿತ್ತು.

ರಾಜ್ಯಪಾಲರಿಗೆ ಪಟ್ಟಿ ರವಾನೆ ?: ಮೇಲ್ಮನೆಯ ನಾಮನಿರ್ದೇಶನಕ್ಕೆ ಮಾಜಿ ಮೇಯರ್‌ ಪಿ.ಆರ್‌. ರಮೇಶ್‌, ಮೋಹನ್‌ ಕೊಂಡಜ್ಜಿ, ಮಾಜಿ ಶಾಸಕ ಸಿ.ಎಂ ಲಿಂಗಪ್ಪ ಹೆಸರು ಅಂತಿಮವಾಗಿದ್ದು, ಇಂದು ರಾಜ್ಯಪಾಲರಿಗೆ ರವಾನೆಯಾಗುವ
ಸಾಧ್ಯತೆ ಇದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next