ಉಳ್ಳಾಲ: ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ ಮತ್ತು ಉಳ್ಳಾಲದ ಸೀಗ್ರೌಂಡ್‌ನಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಸಮುದ್ರಪಾಲಾಗುತ್ತಿರುವ ಬೀಚ್ ರಸ್ತೆ ಇನ್ನಷ್ಟು ಕುಸಿದಿದೆ.
15ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದ್ದು ಜನರು ಪರದಾಡುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಬಟ್ಟಪ್ಪಾಡಿ ಸಂಪರ್ಕಿಸುವ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಹಾನಿಗೀಡಾಗಿದೆ. ಸುಮಾರು 600 ಮೀಟರ್ ಪ್ರದೇಶದಲ್ಲಿ ತಡೆಗೋಡೆ ಬಮ್ಸ್ì ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕ ಕಡಿತಗೊಂಡರೆ, ಎಂಡ್ ಪಾಯಿಂಟ್‌ನ ಬಹುತೇಕ ಭೂಪ್ರದೇಶಗಳು ಸಮುದ್ರಪಾಲಾಗಿವೆ.
ಉಳ್ಳಾಲ ಸೀಗ್ರೌಂಡ್‌ಲ್ಲಿಯೂ ಅಪೂರ್ಣ ಕಾಮಗಾರಿಯಿಂದ ಸುಮಾರು 15 ಮನೆಗಳು ಅಪಾಯದಲ್ಲಿವೆ. ಉಚ್ಚಿಲದಲ್ಲಿ ಮೆಸ್ಕಾಂನಿಂದ ವಿದ್ಯುತ್ ಕಂಬ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ತಾತ್ಕಾಲಿಕ ಕಲ್ಲು ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.