Advertisement
ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ವಿಪಕ್ಷ ನಾಯಕ
ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಬರುವ ಬಾಪೂಜಿ ಸೇವಾ ಕೇಂದ್ರದಲ್ಲಿ 100 ಸೇವೆ ಕೊಡಬೇಕು ಎನ್ನುವುದಿದ್ದರೂ ಒಂದೂ ಸಿಗುತ್ತಿಲ್ಲ ಎಂಬುದು ಪ್ರಮುಖ ಪ್ರಸ್ತಾವ. ಈ ಬಗ್ಗೆ ವಿಶೇಷ ಸಭೆ ಕರೆಯುವ ಭರವಸೆ ಸಿಕ್ಕಿದೆ. ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆಯಿಂದಾಗಿ ಸೃಷ್ಟಿಯಾಗುತ್ತಿರುವ ಸಮಸ್ಯೆ ಗಳ ಕುರಿತು ಪ್ರಸ್ತಾವ. ವಕ್ಫ್ ಇಲಾಖೆಯ 27 ಸಾವಿರ ಎಕ್ರೆ ಪ್ರದೇಶವು ಅಪರಿಚಿತರ ಹೆಸರಲ್ಲಿದೆ, ಈ ಬಗ್ಗೆ ಅನ್ವರ್ ವರದಿಯಂತೆ ತನಿಖೆಯಾಗಬೇಕು, ಬರ ಪರಿಹಾರ ಮತ್ತು ಸಾಲ ಮನ್ನಾ ಹಣ ನೀಡಿಲ್ಲ. ಜಾತಿ ಗಣತಿಗೆ 200 ಕೋ.ರೂ. ಖರ್ಚು ಮಾಡಿದ್ದರೂ ಅದರ ವರದಿ ಇನ್ನೂ ಬಿಡುಗಡೆಯಾಗಿಲ್ಲ, ಚಿತ್ರದುರ್ಗದ ತಾಲೂಕು ಒಂದರಲ್ಲಿ 1,800 ಕೊಳವೆ ಬಾವಿಗೆ ಅನುದಾನ ಬಿಡುಗಡೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಪ್ರಸ್ತಾವಿಸಿದ್ದಾರೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ: 25 ಉತ್ತರ ಸಿಕ್ಕಿರುವುದು :ಬಹುತೇಕ
Related Articles
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಬಾಪೂಜಿ ಸೇವಾ ಕೇಂದ್ರದ ಕಾರ್ಯ ನಿರ್ವಹಣೆ-ವಿಶೇಷ ಸಭೆ ಕರೆಯುವ ಭರವಸೆ.
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100
Advertisement
ಐವನ್ ಡಿ’ಸೋಜಾ, ವಿಧಾನ ಪರಿಷತ್ ಸದಸ್ಯಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಬೇಕು, ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆಗೆ ಸೂಕ್ತ ಪರಿಹಾರ ನೀಡಬೇಕು, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ಮನ್ನಣೆ ನೀಡಬೇಕು. ಮರಳು ಸಮಸ್ಯೆ ನಿವಾರಿಸಬೇಕು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸ್ಥಳಾಂ ತರಿಸಬೇಕು ಮುಂತಾದ ವಿಷಯಗಳ ಬಗ್ಗೆ ಐವನ್ ಡಿ’ಸೋಜಾ ಗಮನ ಸೆಳೆದರು. ಕಸ್ತೂರಿ ರಂಗನ್ ವರದಿಗೆ ಸರಕಾರ ವಿರೋಧ ವ್ಯಕ್ತಪಡಿಸಿದ್ದರೆ ಮರಳು ಸಮಸ್ಯೆಗೆ ಮುಂದಿನ ದಿನಗಳಲ್ಲಿ ಗಣಿ ಸಚಿವರು ಮಂಗಳೂರಿಗೆ ಆಗಮಿಸಿ ಸಮಸ್ಯೆ ಶೀಘ್ರ ಪರಿಹರಿಸುವ ಭರವಸೆ ಸಿಕ್ಕಿದೆ. ಪ್ರಸ್ತಾವಿತ ಇತರ ವಿಚಾರಗಳು
ಅಂಗನವಾಡಿ ಶಾಲೆಗಳ ವಿದ್ಯುತ್ ನಿಲುಗಡೆ ಸರಿಯಲ್ಲ, ವಿ.ವಿ.ಗೆ ಪ್ರತ್ಯೇಕ ಕ್ರೀಡಾ ನೀತಿ ಇತ್ಯಾದಿ ವಿಷಯಗಳ ಕುರಿತು ಅವರು ಮಾತನಾಡಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ- 50 ಉತ್ತರ ಸಿಕ್ಕಿರುವುದು -ಬಹುತೇಕ
* ಭಾಗವಹಿಸಿದ ಪ್ರಮುಖ ಕಲಾಪ – ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಬೇಕು, ಮರಳು ಸಮಸ್ಯೆ ಚರ್ಚೆ.
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಕಸ್ತೂರಿ ರಂಗನ್ ವರದಿ, ಮರಳು ಸಮಸ್ಯೆ, ವಿ.ವಿ.ಗೆ ಪ್ರತ್ಯೇಕ ಕ್ರೀಡಾ ನೀತಿ, ಶೀಘ್ರ ಪರಿಹಾರದ ಭರವಸೆ.
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100 ಎಸ್.ಎಲ್. ಭೋಜೇಗೌಡ, ವಿಧಾನ ಪರಿಷತ್ ಸದಸ್ಯ, ನೈಋತ್ಯ ಶಿಕ್ಷಕರ ಕ್ಷೇತ್ರ
ಡೀಮ್ಡ್ ಫಾರೆಸ್ಟ್, ಕುಮ್ಕಿ, ಗೋಮಾಳದಂತಹ ಜಾಗವನ್ನು ಬದುಕಿಗಾಗಿ ಒತ್ತುವರಿ ಮಾಡಿಕೊಂಡವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ನಗರದಲ್ಲಿರುವ ಕೆಲವು ನಿಯಮಗಳನ್ನು ಗ್ರಾಮೀಣ ಭಾಗಕ್ಕೂ ಅನುಷ್ಠಾನ ಮಾಡಬಾರದು. ಇದರಿಂದ ಲಕ್ಷಾಂತರ ಮಂದಿಗೆ ತೊಂದರೆಯಾಗುತ್ತಿದೆ. 3 ಎಕರೆ ವರೆಗೆ ಒತ್ತುವರಿ ಮಾಡಿ ಕೊಂಡವರಿಗೆ ತೊಂದರೆ ಕೊಡಬಾರದೆಂಬ ಕಾನೂನಿದ್ದು, ಸಮರ್ಪಕವಾಗಿ ಅನುಷ್ಠಾನ ಕೈಗೊಳ್ಳಬೇಕೆಂದು ಎಸ್.ಎಲ್. ಭೋಜೇ ಗೌಡ ಅವರು ಗಮನ ಸೆಳೆದರು. ಈ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರಿಂದ ಸಮ್ಮತಿ ವ್ಯಕ್ತವಾಯಿತು. ಅತಿಥಿ ಶಿಕ್ಷಕರ ನೇಮಕಾತಿ, ಕಾಲ್ಪನಿಕ ವೇತನ ಸಹಿತ ಶಿಕ್ಷಕ ವರ್ಗದ ಅನೇಕ ಸಮಸ್ಯೆಗಳ ಕುರಿತಂತೆ ಸದನದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಪರಿಹಾರದ ಭರವಸೆ ಕೂಡ ವಿವಿಧ ಇಲಾಖೆ ಸಚಿವರಿಂದ ಸಿಕ್ಕಿದೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ-15 ಉತ್ತರ ಸಿಕ್ಕಿರುವುದು -9
* ಭಾಗವಹಿಸಿದ ಪ್ರಮುಖ ಕಲಾಪ- ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ತಾಲೂಕಿನಲ್ಲಿ ಮಾದರಿ ವಿದ್ಯುತ್ ಗ್ರಾಮಗಳ ಯೋಜನೆ ಅನುಷ್ಠಾನ ಮಾಡದಿರುವ ಬಗ್ಗೆ , ನಿರ್ದಿಷ್ಟ ಭರವಸೆ ಇಲ್ಲ
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100 ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ
ಅಪೂರ್ಣ ಕಾಮಗಾರಿಯ ಬೆಳ್ತಂಗಡಿ ತಾ. ತೆಂಕಕಾರಂದೂರು ಗ್ರಾಮದ ಗಿಳಿಕಾಪು ಹಾಗೂ ಬೆಳ್ತಂಗಡಿ ಕಸ್ಬಾ ಗ್ರಾಮದ ಕಿಂಡಿ ಅಣೆಕಟ್ಟುಗಳ ಬಗ್ಗೆ ಸದನದ ಗಮನ ಸೆಳೆದರು. ಇದನ್ನು ಶೀಘ್ರ ಪೂರ್ತಿಗೊಳಿಸುವುದಕ್ಕೆ ಕ್ರಮ ಕೈಗೊಳ್ಳುವ ಕುರಿತು ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್. ಪುಟ್ಟರಾಜು ಅವರು ಭರವಸೆ ನೀಡಿದ್ದರು.
ಜತೆಗೆ ಸಚಿವರು ಕೃಷಿ ಹಾಗೂ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಬೆಳ್ತಂಗಡಿ ತಾಲೂಕಿಗೆ ಒಟ್ಟು 1.85 ಕೋ.ರೂ. ಅನುದಾನದಲ್ಲಿ 2 ಕಿಂಡಿ ಅಣೆಕಟ್ಟುಗಳು ಮಂಜೂರಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗಳು ಪ್ರಾರಂಭಿಸುವ ಭರವಸೆಯನ್ನೂ ನೀಡಿದ್ದಾರೆ. ಕಾಶಿಪಟ್ಣ ಗ್ರಾ.ಪಂ. ವ್ಯಾಪ್ತಿ ಹಾಗೂ ಲಾೖಲ ಗ್ರಾಮದ ಬಳಿ ಈ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿವೆ. ದ.ಕ. ಜಿಲ್ಲೆಯ ಮರಳು ಸಮಸ್ಯೆಯ ಕುರಿತು ಕೂಡ ಹರೀಶ್ ಕುಮಾರ್ ಸದನದಲ್ಲಿ ವಿಷಯ ಪ್ರಸ್ತಾವಿಸಿದ್ದರು. ಕೇಳಲಾದ ಪ್ರಶ್ನೆಗಳ ಸಂಖ್ಯೆ- 15 ಉತ್ತರ ಸಿಕ್ಕಿರುವುದು -15
* ಭಾಗವಹಿಸಿದ ಪ್ರಮುಖ ಕಲಾಪ- ಜಿಲ್ಲೆಯ ಮರಳು ಸಮಸ್ಯೆ ಕುರಿತ ಚರ್ಚೆ.
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಮರಳು ಸಮಸ್ಯೆ ಮತ್ತು ಬೆಳ್ತಂಗಡಿ ತಾಲೂಕಿನ ಕಿಂಡಿ ಅಣೆಕಟ್ಟು ನಿರ್ಮಾಣ, ಅಣೆಕಟ್ಟು ಕಾಮಗಾರಿ ಶೀಘ್ರ ಆರಂಭ.
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ
* ಹಾಜರಾತಿ: ಶೇ. 80 ಎಸ್.ಅಂಗಾರ,ಸುಳ್ಯ
ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಅವುಗಳ ಅಭಿವೃದ್ಧಿಗೆ ಅನುದಾನ ಬಾರದಿರುವ ಬಗ್ಗೆ ಗಮನ ಸೆಳೆದರು. ದ.ಕ.ಜಿಲ್ಲೆಯಲ್ಲಿ ಮರಳು ಪೂರೈಕೆಯಲ್ಲಿನ ಸಮಸ್ಯೆಯಿಂದ ಅಭಿವೃದ್ಧಿಗೆ ಹಿನ್ನಡೆ ಮತ್ತು ಜನಜೀವನದ ಮೇಲೆ ಉಂಟಾಗಿರುವ ತೊಂದರೆ ಗಳ ಬಗ್ಗೆ, ಕಾಣೆ-ಭಾಣೆ, ಕುಮ್ಕಿ ಜಮೀನು ಹಕ್ಕು, ಕೊಳೆರೋಗ ಪರಿಹಾರ ಮೊದಲಾದವುಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾವಿಸ ಲಾಯಿತು. ಇವುಗಳಿಗೆ ಸರಕಾರದಿಂದ ಭರವಸೆ ಸಿಕ್ಕಿದೆ ಹೊರತು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕ್ಷೇತ್ರದ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಇತರೆ ಕಾಮಗಾರಿಗಳ ಚರ್ಚೆ ನಡೆಸಿದ್ದೇವೆ. ಅಧಿವೇಶನದಲ್ಲಿ ಮಾತನಾಡುವ ಅವಕಾಶ ಸಿಕ್ಕಿದ್ದು ಕಡಿಮೆ. ಆದಾಗ್ಯೂ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ವಿಷಯ ಸೂಚಿಯಡಿ ಚರ್ಚೆಯಲ್ಲಿ ಪಾಲ್ಗೊಂಡು ಸರಕಾರದ ಗಮನ ಸೆಳೆಯಲಾಗಿದೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ- 24 ಉತ್ತರ ಸಿಕ್ಕಿರುವುದು – 12
* ಭಾಗವಹಿಸಿದ ಪ್ರಮುಖ ಕಲಾಪ- ಪ್ರಶ್ನೋತ್ತರ ವೇಳೆ ಬರದ ಕುರಿತಾದ ಚರ್ಚೆಯಲ್ಲಿ ಭಾಗಿ.
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅದರ ದುರಸ್ತಿಗೆ ಅನುದಾನ ಶೀಘ್ರ ನೀಡುವ ಭರವಸೆ
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 90 ಉಮಾನಾಥ ಕೋಟ್ಯಾನ್, ಮೂಡುಬಿದಿರೆ
ಪ್ರಧಾನವಾಗಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ವಿಷಯ ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ರೂಪಿಸಿದ ಐವರು ಸದಸ್ಯರ ಸಮಿತಿಯ ಮೂಲಕ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಉತ್ತರ ಲಭಿಸಿದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಯನ್ನು ಬೋಧನೆಗೆ ಕ್ರಮ ಜರುಗಿಸ ಬೇಕೆಂದು ಎಂದು ಕೋಟ್ಯಾನ್ ಒತ್ತಾಯಿಸಿದರು. ಈ ಬಗ್ಗೆ ಸಕಾರಾತ್ಮಕ ಉತ್ತರ ಲಭಿಸಿದೆ. ಶಾಲಾ ಮಕ್ಕಳಿಗೆ ಸೈಕಲ್ ಪೂರೈಕೆಯಾಗದೇ ಇರುವುದು, ದ.ಕ. ಉಡುಪಿ ಜಿಲ್ಲೆಗಳಲ್ಲಿ ಮರಳು ಲಭ್ಯವಾಗದ ಪರಿಸ್ಥಿತಿ ಇದೆ. ಮರಳು ಮಾಫಿಯಾ ವಿಜೃಂಭಿಸಿದೆ. ಕಟ್ಟಡ ನಿರ್ಮಾಣಕ್ಕೆ ತೊಡಕಾಗಿದೆ. ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೋಟ್ಯಾನ್ ಸದನದಲ್ಲಿ ವಿಶೇಷವಾಗಿ ಸರಕಾರದ ಗಮನವ ಸೆಳೆಯುವ ಯತ್ನ ಮಾಡಿದ್ದಾರೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ- 50 ಉತ್ತರ ಸಿಕ್ಕಿರುವುದು -39
* ಭಾಗವಹಿಸಿದ ಪ್ರಮುಖ ಕಲಾಪ – ಡೀಮ್ಡ್ ಫಾರೆಸ್ಟ್, ಮರಳು ಸಮಸ್ಯೆ ವಿಚಾರದಲ್ಲಿ ಭಾಗಿ.
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಅರಣ್ಯ ಇಲಾಖೆ ರೂಪಿಸಿದ ಐವರು ಸದಸ್ಯರ ಸಮಿತಿ ಮೂಲಕ ಪರಿಹಾರಕ್ಕೆ ಪ್ರಯತ್ನ
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100