Advertisement

ಕೆಂಚರಾಯನಗರದಲ್ಲಿ ಅಂಡರ್‌ಪಾಸ್‌ ನಿರ್ಮಿಸಿ!

04:52 PM Feb 09, 2021 | Team Udayavani |

ತಿಪಟೂರು: ನಗರದ ಹಳೇಪಾಳ್ಯ ಸಮೀಪದ ಕೆಂಚರಾಯನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿ ವಿರೋಧಿಸಿ ಹಾಗೂ ಅಂಡರ್‌ ಪಾಸ್‌ ನಿರ್ಮಿಸುವಂತೆ ಗ್ರಾಮಸ್ಥರು 10 ದಿನಗಳಿಂದ ಧರಣಿ ನಡೆಸುತ್ತಿದ್ದರೂ ತಾಲೂಕಿನ ಜನಪ್ರತಿನಿಧಿಗಳು ಕ್ರಮಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿರುವುದು ಸರಿಯಲ್ಲ ಎಂದು ಸಮಾಜ ಸೇವಕ ಕೆ.ಟಿ.ಶಾಂತಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನೆಮ್ಮದಿ ಹಾಳು: ನಗರದ ಕೆಂಚರಾಯ ನಗರದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವ ಧರಣಿಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಈ ಭಾಗದಲ್ಲಿ ವಾಸಿಸುವ ಸಾವಿರಾರು ಜನ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಸರ್ಕಾರ ವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಏಕಾಏಕಿ ರಸ್ತೆ ಕಾಮಗಾರಿ ನಡೆಸು ತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣದ ವೇಳೆ ಇಲ್ಲಿನ ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಾವಿರಾರು ಜನರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡಿದ್ದಾರೆಂದು ದೂರಿದರು.

ಇದನ್ನೂ ಓದಿ :ಮೊಟ್ಟೆ ವಿತರಣೆ 3 ತಿಂಗಳಲ್ಲಿ ಸ್ಥಗಿತದ ಆತಂಕ!  

ಸಮಸ್ಯೆ ಆಲಿಸಲಿ: ಕೆಂಚರಾಯನಗರ,ಬಿಳಿಕಲ್ಲು ನಗರ, ಮೀಸೆತಿಮ್ಮನಹಳ್ಳಿ, ಗೆದೆಹಳ್ಳಿ ಮೊದಲಾದ  ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೇಕಾರರು ಪ್ರತಿ ದಿನ ಕೂಲಿ ಕೆಲಸಕ್ಕೆ, ವಿದ್ಯಾರ್ಥಿಗಳು ಹಳೇ ಪಾಳ್ಯದ ಶಾಲೆಗೆ ಹೋಗಬೇಕಿದ್ದು, ಇಲ್ಲಿಗೆ ಅಂಡರ್‌ ಪಾಸ್‌ನ ಅವಶ್ಯಕತೆ ಇದೆ. ಅಂಡರ್‌ಪಾಸ್‌ ವ್ಯವಸ್ಥೆ  ಮಾಡದಿ ದ್ದರೆ 3-4 ಕಿಲೋ ಮೀಟರ್‌ ಬಳಸಿ ಕೊಂಡು ಬರಬೇಕಿದೆ.  ಈ ಭಾಗದ ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸ ಬೇಕು. ರಸ್ತೆ ಕಾಮಗಾರಿ ಪ್ರಾರಂಭವಾ ದಾಗಿನಿಂದಲೂ ಕೂಲಿ ಬಿಟ್ಟು ಹಗಲು ರಾತ್ರಿ ಎನ್ನದೆ ಮಹಿಳೆಯರು, ಮಕ್ಕಳು ಧರಣಿಯಲ್ಲಿ ನಿರತರಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಇವರು ಜೀವನ ನಡೆಸು ವುದು ಹೇಗೆ. ಸಮಸ್ಯೆ ಆಲಿಸಿ ಅಂಡರ್‌ ಪಾಸ್‌ ನಿರ್ಮಿಸಬೇಕು. ಇಲ್ಲವಾ ದಲ್ಲಿ  ಅಂಡರ್‌ಪಾಸ್‌ ನಿರ್ಮಿಸು ವವರೆಗೂ ಧರಣಿಯಲ್ಲಿ ಕುಳಿತುಕೊಳ್ಳುವೆ ಎಂದ ಅವರು, ಧರಣಿ ನಿರತರಿಗೆ  ಊ ಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಕೆಟಿಎಸ್‌ ಅಭಿಮಾನಿ ಬಳಗದ ಸುದರ್ಶನ್‌, ಗ್ರಾಮಸ್ಥರಾದ ಶ್ರೀನಿವಾಸ್‌, ರಾಜಣ್ಣ, ದ್ರಾಕ್ಷಾಯಿಣಿ, ಧನಲಕ್ಷಿ, ಕಮಲ ಮ್ಮ, ರಂಗಸ್ವಾಮಿ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next