Advertisement

ಗಾಳಿಯಿಂದಲೇ ಓಡುತ್ತೆ ಈ ಕಾರು!

06:00 AM Aug 10, 2018 | Team Udayavani |

ಕೈರೋ: ಗಾಳಿಯಿಂದಲೂ ವಾಹನ ಓಡಲು ಸಾಧ್ಯವೇ? ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗದು. ಆಧುನಿಕ ತಂತ್ರಜ್ಞಾನದ ವೇಗ ಗಮನಿಸಿದಾಗ ಇಂಥ ಯಾವುದೇ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಈಜಿಪ್ಟ್ನ ವಿದ್ಯಾರ್ಥಿಗಳು ಇಂಥದ್ದೊಂದು ಅಚ್ಚರಿಯ ವಾಹನ ಸಿದ್ಧಗೊಳಿಸಿದ್ದಾರೆ. ನಾಲ್ಕು ಚಕ್ರಗಳ ಈ ವಾಹನವನ್ನು ಸಂಕ್ಷೇಪಿತ ಆಮ್ಲಜನಕ (compressed oxygen)ದಿಂದ ಓಡಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಇದರಿಂದ ವಾಯು ಮಾಲಿನ್ಯವೂ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಪಾದಿಸಿದ್ದಾರೆ.

Advertisement

ಕೈರೋ ಹೊರವಲಯದಲ್ಲಿರುವ ಹೆಲ್ವಾನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ತರಗತಿಯ ಪಾಠದ ಅಂಗವಾಗಿಯೇ ಈ ವಾಹನ ಸಿದ್ಧಪಡಿಸಿದ್ದು, ಒಬ್ಬ ವ್ಯಕ್ತಿ ಕುಳಿತು ವಾಹನ ಚಲಾಯಿಸಬಲ್ಲ ಅವಕಾಶ ಇರುವಂತೆ ವಿನ್ಯಾಸಗೊಳಿಸಿದ್ದಾರೆ. ಇಂಧನಕ್ಕಾಗಿ ಸಂಕ್ಷೇಪಿತ ಆಮ್ಲಜನದ ಸಿಲಿಂಡರ್‌ ಬಳಸಿಕೊಂಡಿದ್ದಾರೆ.

40 ಕಿ.ಮೀ. ಮೈಲೇಜ್‌: ಅಷ್ಟಕ್ಕೂ ಮೈಲೇಜ್‌ ಲೆಕ್ಕಾಚಾರ ಇಲ್ಲದೇ ಏನು ಪ್ರಯೋಜನ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ.ನಿಂದ 100 ಕಿ.ಮೀ. ಸಾಗುವ ಸಾಮರ್ಥ್ಯ ಇದಕ್ಕಿದೆ. ಸದ್ಯ ಅಳವಡಿಸಲಾದ ಸಿಲಿಂಡರ್‌ನಲ್ಲಿ 100 ಕಿ.ಮೀ. ಸಾಗಬಹುದಾಗಿದೆ. ಇನ್ನು ಈ ವಾಹನ ತಯಾರಿಕೆಗೆ ತಗಲಿರುವ ವೆಚ್ಚ ಅಂದಾಜು 70,000 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next