Advertisement

ಸಂಘಟಿತ ವಿಪಕ್ಷ ಹೋರಾಟದಲ್ಲಿ ಮೋದಿಗೆ ಸೋಲು ನಿಶ್ಚಿತ : ರಾಹುಲ್‌

12:23 PM Apr 09, 2018 | Team Udayavani |

ಬೆಂಗಳೂರು : “2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುವ ಮಾತು ಹಾಗಿರಲಿ; ಪ್ರಧಾನಿ ಮೋದಿ ಅವರ ವಾರಾಣಸಿ ಕ್ಷೇತ್ರವನ್ನು ಕೂಡ ಬಿಜೆಪಿ ಕಳೆದುಕೊಳ್ಳುವುದು ನಿಶ್ಚಿತ ‘ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈಗಲೇ ಭವಿಷ್ಯ ನುಡಿದಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಬಿಎಸ್‌ಪಿ ಜತೆಗೂಡಿರುವುದರಿಂದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಸೋಲಾಗುವುದು ಖಚಿತ ಎಂದು ರಾಹುಲ್‌ ಹೇಳಿದರು. 

“ದೇಶದಲ್ಲಿ ದಲಿತರ ಆಕ್ರೋಶ ವ್ಯಕ್ತವಾಗಿರುವುದರ ರಾಜಕೀಯ ಪರಿಣಾಮ ಏನು?’ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಹುಲ್‌ ಗಾಂಧಿ, “ಮುಂಬರುವ 2019ರ ಲೋಕಸಭಾ ಚುನಾವಣೆಗೆ ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನೀಡುವುದರಿಂದ ಬಿಜೆಪಿಗೆ ಭಾರೀ ಸೋಲಾಗುವುದು ನಿಶ್ಚಿತ. ಕಳೆದ ಹಲವು ವರ್ಷಗಳಲ್ಲಿ ಕಾಣದಂತಹ ಅಭೂತಪೂರ್ವ ಸೋಲನ್ನು ಬಿಜೆಪಿ ಮುಂದಿನ ಲೋಕಸಭಾ ಚುನವಾಣೆಯಲ್ಲಿ ಕಾಣಲಿದೆ ಮತ್ತು ಆ ಮೂಲಕ ನಾವು ಹಿಂದಿನ ನೆಮ್ಮದಿಯ ಮಾಮೂಲಿ ಸ್ಥಿತಿಗೆ ಮತ್ತೆ ಹೋಗಲಿದ್ದೇವೆ; ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟದ ಫ‌ಲವಾಗಿ ಬಿಜೆಪಿಗೆ ಸೋಲಾಗುವುದು ನಿಶ್ಚಿತ’ ಎಂದು ಉತ್ತರಿಸಿದರು. 

ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆಯ ಭಾಗವಾಗಿ ತನ್ನ ಆರನೇ ಹಂತದ ಚುನಾವಣಾ ಪ್ರಚಾರಾಭಿಯಾನದ ಕಾರ್ಯಕ್ರದಲ್ಲಿ ಮಾತನಾಡುತ್ತಿದ್ದ ರಾಹುಲ್‌, “ವಿರೋಧ ಪಕ್ಷಗಳ ಒಗ್ಗಟ್ಟು ಒಂದು ಹಂತ ದಾಟಿ ಮುಂದಿನ ಹಂತಕ್ಕೆ ಹೋಯಿತೆಂದರೆ ಮತ್ತೆ ಬಿಜೆಪಿಗೆ ಚುನಾವಣೆ ಗೆಲ್ಲುವುದು ಕಷ್ಟದ ಮಾತಾಗುವುದು; ಇದು ತುಂಬ ಸಿಂಪಲ್‌. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ನಿಶ್ಚಿತ’ ಎಂದು ರಾಹುಲ್‌ ವಿಶ್ವಾಸದಿಂದ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next