Advertisement
1) ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಉಚಿತ.2) ಪಿಎಚ್‌ಎಚ್ (ಬಿಪಿಎಲ್) ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಮತ್ತು ಎಪ್ರಿಲ್ ತಿಂಗಳಿನಲ್ಲಿ ವಿತರಿಸ ಬೇಕಾಗಿದ್ದ ಗೋಧಿಯನ್ನು ಮೇ ತಿಂಗಳಿನಲ್ಲಿ ಪ್ರತಿ ಕಾರ್ಡಿಗೆ 4 ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುವುದು.
3) ಆಹಾರಧಾನ್ಯ ಪಡೆಯಲು ನೋಂದಾಯಿಸದೆ ಇರುವ ಎನ್‌ಪಿಎಚ್‌ಎಚ್ (ಎಪಿಎಲ್) ಏಕ ಸದಸ್ಯ ಪಡಿತರ ಚೀಟಿ ಕಾರ್ಡಿಗೆ 5 ಕೆಜಿ ಅಕ್ಕಿ ಮತ್ತು ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಕಾರ್ಡುಗಳಿಗೆ 10 ಕೆಜಿ ಅಕ್ಕಿ ಪ್ರತಿ ಕೆಜಿಗೆ 15 ರೂ.ನಂತೆ ವಿತರಿಸಲಾಗುವುದು.
4) ಹೊಸದಾಗಿ ಅರ್ಜಿ ಸಲ್ಲಿಸಿರುವ ಪಿಎಚ್‌ಎಚ್ (ಬಿಪಿಎಲ್) ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸ ಲಾಗುವುದು.
5) ಅಂತಾರಾಜ್ಯ/ ಅಂತರ-ಜಿಲ್ಲೆ ಪಡಿತರ ಚೀಟಿದಾರರು ಪೋರ್ಟೆ ಬಿಲಿಟಿಯಲ್ಲಿ ಆಹಾರಧಾನ್ಯ ಪಡೆಯಲು ಅವಕಾಶವಿದ್ದು ಜಿಲ್ಲೆಯಯಾವುದೇ ನ್ಯಾಯಬೆಲೆ ಅಂಗಡಿ ಯಿಂದ ಪಡೆದುಕೊಳ್ಳಬಹುದಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಪಡಿತರ ಚೀಟಿದಾರರ ಆಧಾರ್ ದೃಢೀಕೃತ ಬೆರಳಚ್ಚು (ಆಧಾರ್ ಬಯೋಮೆಟ್ರಿಕ್)/ಆಧಾರ್ ಒಟಿಪಿ/ಮೊಬೈಲ್ ಒಟಿಪಿ ದೃಢೀಕರಣದ ಮೂಲಕವೇ ಪಡಿತರ ವಿತರಿಸಲಾಗುವುದು. ಏಕಕಾಲದಲ್ಲಿ ವಿತರಣೆ
ಪಡಿತರ ಚೀಟಿದಾರರಿಗೆ ಎಲ್ಲ ಆಹಾರಧಾನ್ಯಗಳನ್ನು ಏಕಕಾಲದಲ್ಲಿ ವಿತರಿಸಬೇಕಾಗಿರುವುದರಿಂದ ತೊಗರಿಬೇಳೆ ಪೂರ್ಣ ಪ್ರಮಾಣದಲ್ಲಿ ಸರಬರಾಜು ಆದ ಕೂಡಲೇ ಮೇ ಮೊದಲ ವಾರದ ಕೊನೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಏಕಕಾಲದಲ್ಲಿ ವಿತರಿಸಲಾಗುವುದು. ಪಡಿತರ ಚೀಟಿದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಗಳನ್ನು ಹಾಕಿಕೊಂಡು ಪಡಿತರ ಪಡೆಯುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.