Advertisement

ಅಂಡರ್‌ ಪಾಸ್‌- ಓವರ್‌ ಪಾಸ್‌ ರಾಮಬಾಣ ಅನುಷ್ಠಾನ ಎಂದು ?

12:54 AM Jan 30, 2023 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ ಅಪಘಾತದಿಂದ ಬ್ಲ್ಯಾಕ್‌ ಸ್ಪಾಟ್‌ ಆಗಿ ಗುರುತಿಸಿದ್ದು, ನಿತ್ಯ ನಿರಂತರ ಟ್ರಾಫಿಕ್‌ ಜಾಮ್‌ ಸಮಸ್ಯೆ ಕಂಡುಬರುತ್ತಿದೆ. ಕೂಡಲೇ ಅಂಡರ್‌ಪಾಸ್‌ ಅಥವಾ ಓವರ್‌ ಪಾಸ್‌ ಗೆ ಆಗ್ರಹಿಸುತ್ತಿದ್ದಾರೆ.

Advertisement

ಕಟಪಾಡಿ ಸದಾ ವಾಹನ ದಟ್ಟಣೆಯಿಂದ ಕೂಡಿದ್ದು, ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿದೆ ಎಂಬ ಆರೋಪವಿದೆ. ಇದರಿಂದ ಸಾಕಷ್ಟು ಸಾವು ನೋವುಗಳೂ ಆಗಿವೆ. ಆದರೆ ಸೂಕ್ತ ಪರಿಹಾರ ಮಾತ್ರ ಇನ್ನೂ ಕಂಡುಕೊಂಡಿಲ್ಲ.

ಉದಯವಾಣಿ ಹಲವು ಬಾರಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದಾಗ ಜನಪ್ರತಿನಿಧಿಗಳು, ಇಲಾಖಾಧಿ
ಕಾರಿಗಳು, ಎಂಜಿನಿಯರ್‌ಗಳ ದಂಡೇ ಸ್ಥಳಕ್ಕೆ ಆಗಮಿಸಿ ಹಲವು ಬಾರಿ ಪರಿಶೀಲನೆ ನಡೆಸಿದ್ದರೂ ಪ್ರಕ್ರಿಯೆ ಮುಂದಕ್ಕೆ ಹೋಗಲಿಲ್ಲ. ಅಂಡರ್‌ ಪಾಸ್‌ ಅಥವಾ ಓವರ್‌ ಪಾಸ್‌ ರಾಮಬಾಣ ಭರವಸೆಯಾಗಿಯೇ ಉಳಿದಿದೆ. ಇನ್ನಾದರೂ ಅನುಷ್ಠಾನಗೊಳ್ಳಲಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ವಾಹನ ದಟ್ಟಣೆ, ಜನದಟ್ಟಣೆಯ ನಿಯಂತ್ರಣಕ್ಕೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ. ಆದರೂ ಟ್ರಾಫಿಕ್‌ ಜಾಮ್‌ ಬಿಸಿ ನಿತ್ಯ ನಿರಂತರವಾಗಿದೆ. ಸಂಬಂಧಿಸಿದವರು ಅಂಡರ್‌ಪಾಸ್‌ ಅಥವಾ ಓವರ್‌ಪಾಸ್‌ ನಿರ್ಮಾಣದ ಮೂಲಕ ಸುಗಮ ಸಂಚಾರಕ್ಕೆ ಆದ್ಯತೆ ಕೊಡಬೇಕಾಗಿದೆ.

ಉಸ್ತುವಾರಿ ಸಚಿವರಾದ ಎಸ್‌. ಅಂಗಾರ ಅವರ ಕೆಡಿಪಿ ಸಭೆಯಲ್ಲಿ ಚಿಂತನೆ ನಡೆಸಿದ್ದು, ಎನ್‌ಎಚ್‌ಎಐ ಇಲಾಖಾಧಿಕಾರಿಗಳು ಯೋಜನೆ ಟೆಂಡರ್‌ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ಶೀಘ್ರಅನುಷ್ಠಾನಕ್ಕೆ ಪ್ರಯತ್ನ ನಡೆಸಲಾಗುತ್ತದೆ.
– ಲಾಲಾಜಿ ಮೆಂಡನ್‌ ಶಾಸಕರು, ಕಾಪು.

ಕಟಪಾಡಿ ಜಂಕ್ಷನ್‌ ಪ್ರದೇಶದ ಸಮಸ್ಯೆಯ ಬಗ್ಗೆ ಈಗಾಗಲೇ ಶಾಸಕ ಲಾಲಾಜಿ ಅವರೊಂದಿಗೆ ಚರ್ಚಿಸಲಾಗಿದೆ. ಯೋಜನಾ ನಿರ್ದೇಶಕರೊಂದಿಗೆ ಮಾತನಾಡಲಾಗಿದೆ. ರೋಡ್‌ ಸೇಫ್ಟಿ ಎಂಜಿನಿಯರ್‌ ಜತೆ ಸೇರಿ
ಭೇಟಿ ನೀಡಿ ತಾಂತ್ರಿಕವಾಗಿ ವರದಿ ನೀಡಿ ಪರಿಶೀಲಿಸಲಾಗುತ್ತದೆ. ಇಲಾಖೆಯ ಅಧಿಕಾರಿಗಳು ಹೈಯರ್‌ ಅಥಾರಿಟಿ ಗಮನಕ್ಕೆ ತರಲಿದ್ದಾರೆ.ಬಳಿಕ ಅನುಷ್ಠಾನಕ್ಕೆ ಯತ್ನಿಸಲಾಗುತ್ತದೆ.
-ಕೂರ್ಮಾ ರಾವ್‌ ಎಂ,
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

Advertisement

ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಫೈಲ್‌ ಮೂವ್‌ ಆಗಿದೆ. ದಿಶಾ ಮೀಟಿಂಗ್‌ನಲ್ಲಿ ತಿಳಿಸಿದ್ದೇನೆ. ಆದಷ್ಟು ಬೇಗನೆ ಮುಂದುವರಿಸಲು ಸೂಚನೆ ನೀಡಲಾಗಿದೆ. ತತ್‌ಕ್ಷಣ ಟೆಂಡರ್‌ ಕರೆಯಲಾಗುತ್ತದೆ.
– ಶೋಭಾ ಕರಂದ್ಲಾಜೆ, ಸಂಸದರು.

Advertisement

Udayavani is now on Telegram. Click here to join our channel and stay updated with the latest news.

Next