Advertisement
ಟೀಮ್ ಇಂಡಿಯಾ ಕಡೆಯಿಂದ ಬಂದ ಶುಭ ಸಮಾಚಾರವೆಂದರೆ ಕೋವಿಡ್ ಸೋಂಕಿಗೊಳಗಾದ ಆಟಗಾರರೆಲ್ಲ ಚೇತರಿಸಿ ಕೊಂಡಿರುವುದು. ನಾಯಕ ಯಶ್ ಧುಲ್ ಸೇರಿದಂತೆ 5 ಮಂದಿ ಆಟಗಾರರಿಗೆ ಲೀಗ್ ಹಂತದ ದ್ವಿತೀಯ ಪಂದ್ಯಕ್ಕೂ ಮುನ್ನ ಕೋವಿಡ್ ಪಾಸಿಟಿವ್ ಅಂಟಿಕೊಂಡಿತ್ತು.
ಭಾರತದ ಪಾಲಿಗೆ ಇದು ಸೇಡಿನ ಪಂದ್ಯ. 2020ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತಕ್ಕೆ ಬಾಂಗ್ಲಾದೇಶ ಆಘಾತಕಾರಿ ಸೋಲುಣಿಸಿತ್ತು; ಮೊದಲ ಸಲ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಸೋಲಿಗೆ ಟೀಮ್ ಇಂಡಿಯಾದ ಕಿರಿಯರು ತಿರುಗೇಟು ನೀಡಬೇಕಿದೆ. ಇದಕ್ಕೂ ಮೊದಲು ಯುಎಇಯಲ್ಲಿ ನಡೆದ ಏಶ್ಯ ಕಪ್ ಸೆಮಿಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತ ಒಂದು ಹಂತದ ಸೇಡು ತೀರಿಸಿಕೊಂಡಿದ್ದನ್ನು ಮರೆಯುವಂತಿಲ್ಲ.
Related Articles
Advertisement
ಲೀಗ್ ಹಂತದಲ್ಲಿ ಇಂಗ್ಲೆಂಡಿಗೆ ಸೋತಿದ್ದ ಬಾಂಗ್ಲಾದೇಶ, ಬಳಿಕ ಕೆನಡಾ ಮತ್ತು ಯುಎಇ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ನಿಶಾಂತ್ ಸಿಂಧುಗೆ ಕೊರೊನಾಭಾರತದ ಅಂಡರ್-19 ತಂಡದ ಕೊರೊನಾ ಬಾಧಿತ ಕ್ರಿಕೆಟಿಗರೆಲ್ಲ ಚೇತರಿಸಿಕೊಂಡರೇನೋ ಸರಿ, ಆದರೆ ಕ್ವಾರ್ಟರ್ ಫೈನಲ್ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಭಾರತ ತಂಡದಲ್ಲಿ ಮತ್ತೊಂದು ಕೊರೊನಾ ಕೇಸ್ ಕಂಡುಬಂದಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿಶಾಂತ್ ಸಿಂಧು ಕೊರೊನಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಬಾಂಗ್ಲಾದೇಶ ವಿರುದ್ಧ ಆಡಲಿಳಿಯುವುದಿಲ್ಲ ಎಂದು ತಂಡದ ಪ್ರಕಟನೆ ತಿಳಿಸಿದೆ. ನಿಶಾಂತ್ ಬದಲು ಎಡಗೈ ಸ್ಪಿನ್ನರ್ ಅನೀಶ್ವರ್ ಗೌತಮ್ ಆಡುವ ಸಾಧ್ಯತೆ ಇದೆ.
ಆರಂಭ: ಸಂಜೆ 6.30
ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ಇದನ್ನೂ ಓದಿ:ಏಶ್ಯ ಕಪ್ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ ಲಂಕಾ ಲಾಗ; ಅಫ್ಘಾನ್ ಸೆಮಿ ನಗು
ಕೂಲಿಜ್ (ಆಂಟಿಗಾ): ಅಂಡರ್-19 ವಿಶ್ವಕಪ್ ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡುತ್ತ ಬಂದ ಶ್ರೀಲಂಕಾ, ಸಣ್ಣ ಮೊತ್ತದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ 4 ರನ್ನಿನಿಂದ ಸೋತು ಹೊರಬಿದ್ದಿದೆ. ಅಫ್ಘಾನ್ ದೊಡ್ಡ ಬೇಟೆಯೊಂದನ್ನು ಆಡಿ ಇಂಗ್ಲೆಂಡ್ ಎದುರಿನ ಕದನಕ್ಕೆ ಅಣಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನದಿಂದ ಗಳಿಸಲು ಸಾಧ್ಯವಾದದ್ದು ಕೇವಲ 134 ರನ್ (47.1 ಓವರ್). ಈ ಅಲ್ಪ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಅಫ್ಘಾನ್ ನಿರೀಕ್ಷೆಗೂ ಮೀರಿ ಯಶಸ್ಸು ಪಡೆಯಿತು. ಲಂಕಾ 46 ಓವರ್‌ಗಳಲ್ಲಿ 130ಕ್ಕೆ ಸರ್ವಪತನ ಕಂಡಿತು. ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-47.1 ಓವರ್‌ಗಳಲ್ಲಿ 134 (ಅಬ್ದುಲ್ ಹದಿ 37, ನೂರ್ ಅಹ್ಮದ್ 30, ಅಲ್ಲಾಹ್ ನೂರ್ 25, ವಿನುಜ 10ಕ್ಕೆ 5, ವೆಲ್ಲಲಗೆ 36ಕ್ಕೆ 3). ಶ್ರೀಲಂಕಾ-46 ಓವರ್‌ಗಳಲ್ಲಿ 130 (ವೆಲ್ಲಲಗೆ 34, ರವೀನ್ 21, ಬಿಲಾಲ್ ಸಮಿ 33ಕ್ಕೆ 2). ಪಂದ್ಯಶ್ರೇಷ್ಠ: ನೂರ್ ಅಹ್ಮದ್.